ನಾಪೋಕ್ಲು, ಜೂ. ೧೮: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಸಮಾರಂಭದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಎಸ್.ಬಿ. ಅಪ್ಪಾಜಿಗೌಡ ಅವರನ್ನು ಹಾಗೂ ಕಳೆದ ೩೫ ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಮಾಧ್ಯಮ ವರದಿಗಾರ ದುಗ್ಗಳ ಸದಾನಂದ ಅವರನ್ನು ಕಾಲೇಜಿನ ಪರವಾಗಿ ಗೌರವಿಸಿ ಸನ್ಮಾನಿಸ ಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಕಾವೇರಿ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ಕಾಲೇಜಿನ ನಿವೃತ್ತ ಮುಖ್ಯ ಆಡಳಿತಾಧಿಕಾರಿ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಪದ್ಮಾವತಿ, ಪದ್ಮಾ ಗಣಪತಿ, ರಾಜು ದೇವಯ್ಯ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಂಚಾಲಕ ಎಲ್.ಸಿ ರಂಗಸ್ವಾಮಿ, ಕ್ರೀಡಾ ಸಮಿತಿ ಸಂಚಾಲಕರು, ದೈಹಿಕ ನಿರ್ದೇಶಕ ಶಿವರಾಜ್ಕುಮಾರ್ ಕೆ.ಎಸ್, ಸಾಂಸ್ಕೃತಿಕ ಸಮಿತಿ ಸಂಚಾಲಕರು ಮನೋಜ್ ಕುಮಾರ್, ವಿದ್ಯಾರ್ಥಿ ಪ್ರತಿನಿಧಿ ಮೊಹಮ್ಮದ್ ಶಮಿಮ್, ಕೆ.ಹೆಚ್. ನಿಷ್ಮ, ಎಂ.ವಿ. ಇರ್ಫಾನ್, ಎಂ.ಐ. ರಕ್ಷತಾ, ಬಿ.ಪಿ. ನಿತಿನ್, ಕೀರ್ತಿ ಎಂ.ವಿ. ಕನ್ನಡ ಪ್ರಾಧ್ಯಾಪಕಿ ಹರಿಣಿ, ಉಪನ್ಯಾಸಕ ವೇಣು ಗೋಪಾಲ್, ಪ್ರಾಧ್ಯಾಪಕ ರಂಗಸ್ವಾಮಿ ಎಲ್.ಸಿ., ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.