ಕೂಡಿಗೆ, ಜೂ. ೧೬: ಇಲ್ಲಿನ ಕೊಡಗು ಸೈನಿಕ ಶಾಲೆಯ ೨೦೨೪-೨೫ನೇ ಸಾಲಿನ ಎನ್ಸಿಸಿ ವಾರ್ಷಿಕ ತರಬೇತಿ ಶಿಬಿರವು ಶಾಲೆಯ ಕುವೆಂಪು ಸಭಾಂಗಣದಲ್ಲಿ ಆರಂಭಗೊAಡಿತು.
ವಾರ್ಷಿಕ ತರಬೇತಿಗೆ ಸೋಮವಾರಪೇಟೆ ಪೊಲೀಸ್ ಉಪ ವಿಭಾಗಾಧಿಕಾರಿ ಡಿವೈಎಸ್ಪಿ ಆರ್.ವಿ. ಗಂಗಾರಪ್ಪ ಚಾಲನೆ ನೀಡಿ, ವಿದ್ಯಾರ್ಥಿಗಳು ಬಹುಮುಖ್ಯವಾಗಿ ಪೊಲೀಸ್ ಕಾಯ್ದೆಯ ವಿಷಯಗಳ ಬಗ್ಗೆ ಅರಿವು ಹೊಂದಬೇಕು. ಜೊತೆಯಲ್ಲಿ ಪಾಲನೆ ಮಾಡುವುದು ಕಡ್ಡಾಯವಾಗಿರುತ್ತದೆ. ವಿದ್ಯಾರ್ಥಿಗಳು ಪೋಕ್ಸೋ ಕಾಯ್ದೆಯ ಬಗ್ಗೆ ಮತ್ತು ಸಂಚಾರಿ ನಿಯಮದ ವಿಷಯದ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ತಿಳಿಸಿದರು.
ಈ ಸಂದರ್ಭ ಸೈನಿಕ ಶಾಲೆಯ ಉಪ ಪ್ರಾಂಶುಪಾಲ ಡೆಪ್ಯೂಟಿ ಕಮಾಂಡರ್ ಮಹಮ್ಮದ್ ಶಾಜಿ, ಎನ್.ಸಿ.ಸಿ. ಅಧಿಕಾರಿಗಳಾದ ಕ್ಯಾಪ್ಟನ್ ವಿಭಿನ್ ಕುಮಾರ್, ಲೆಫ್ಟಿನೆಂಟ್ ಗೋವಿಂದರಾಜ್, ವೆಂಕಟರಮಣ, ಜಿ.ಕೆ. ಮಂಜಪ್ಪ, ಸುಬೇದಾರ್ ಜಿತೇಂದರ್ ಸಿಂಗ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮೋಹನ್ರಾಜ್ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.