ಸೋಮವಾರಪೇಟೆ, ಜೂ. ೧೬: ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ಪಟ್ಟಣದ ಪೊಲೀಸ್ ಠಾಣೆಗೆ ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿಗಳ ಉಪಯೋಗಕ್ಕಾಗಿ ರೂ. ೧೮ ಸಾವಿರ ಮೌಲ್ಯದ ವಾಟರ್ ಫಿಲ್ಟರ್‌ನ್ನು ಕೊಡುಗೆಯಾಗಿ ನೀಡಲಾಯಿತು.

ಲಯನ್ಸ್ ಗವರ್ನರ್ ಡಾ. ಮೆಲ್ವಿನ್ ಡಿಸೋಜ ಅವರು ವಾಟರ್ ಫಿಲ್ಟರ್‌ನ್ನು ಉದ್ಘಾಟಿಸಿದರು. ಈ ಸಂದರ್ಭ ಠಾಣಾಧಿಕಾರಿ ರಮೇಶ್ ಕುಮಾರ್ ಸೇರಿದಂತೆ ಸಿಬ್ಬಂದಿಗಳು, ಲಯನ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದರೊಂದಿಗೆ ಕಾಫಿ ಬೆಳೆಗಾರ ಹಾಗೂ ದಾನಿ ಎ.ಪಿ. ಶಂಕರಪ್ಪ ಹಾಗೂ ಶಾರದ ಅವರುಗಳು ತಮ್ಮ ಪುತ್ರಿ ದಿ. ಚಂದ್ರಿಕಾ ನಟರಾಜ್ ಸ್ಮರಣಾರ್ಥ, ಲಯನ್ಸ್ ಕ್ಲಬ್ ಮೂಲಕ ಬಸವೇಶ್ವರ ರಸ್ತೆಯಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಲಯನ್ಸ್ ಗವರ್ನರ್ ಮೆಲ್ವಿನ್ ಲೋಕಾರ್ಪಣೆಗೊಳಿಸಿದರು. ಶುದ್ಧ ಕುಡಿಯುವ ನೀರಿನ ಘಟಕವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭ ಲಯನ್ಸ್ ಅಧ್ಯಕ್ಷ ಎ.ಎಸ್. ಮಹೇಶ್, ಖಜಾಂಚಿ ವೀರಪ್ಪ ಕೆ.ಡಿ., ಪದಾಧಿಕಾರಿಗಳಾದ ರೋಹಿತ್, ಲೀಲಾರಾಂ, ಎ.ಆರ್. ಮುತ್ತಣ್ಣ, ನಿರ್ವಾಣಿ ಶೆಟ್ಟಿ, ಕೆ.ಎಂ. ಜಗದೀಶ್, ಕೆ.ಎನ್. ತೇಜಸ್ವಿ, ಪ.ಪಂ. ಸದಸ್ಯೆ ಶೀಲಾ ಡಿಸೋಜ ಸೇರಿದಂತೆ ಇತರರು ಇದ್ದರು.