ಮಡಿಕೇರಿ, ಏ. ೨೯: ಮಂಗಳಾದೇವಿನಗರದ ಶ್ರೀ ಆದಿಪರಾಶಕ್ತಿ ದೇವಾಲಯದ ೫೯ನೇ ವಾರ್ಷಿಕ ಆರಾಧನೋತ್ಸವದ ಪ್ರಯುಕ್ತ ನಗರದ ಪಂಪುಕೆರೆಯಿAದ ವಿದ್ಯುತ್ ಅಲಂಕೃತ ಮಂಟಪದಲ್ಲಿ ಆದಿಪರಾಶಕ್ತಿ ದೇವಿಯ ಕಳಸತೀರ್ಥ, ಪಡಿಕಲಂ, ಹೂವಿನ ಕರಗ ಹಾಗೂ ಅಗ್ನಿ ಕರಗಗಳ ಮೆರವಣಿಗೆ ನಡೆಯಿತು. ತಾ. ೩೦ರಂದು (ಇಂದು) ದೇವಾಲಯದ ಆವರಣದಲ್ಲಿ ಪೊಂಗಲ್, ತಂಬಿಟ್ಟು ಕಲಶಗಳ ಉತ್ಸವ, ಮಹಾಪೂಜೆಯೊಂದಿಗೆ ಮಧ್ಯಾಹ್ನ ೧೨.೩೦ ಗಂಟೆಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.