ಮಡಿಕೇರಿ : ಹೈವೋಲ್ಟೇಜ್ ಕ್ಷೇತ್ರ,ಜಿದ್ದಾಜಿದ್ದಿನ ಅಖಾಡಕ್ಕೆ ಸಾಕ್ಷಿಯಾಗಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ೧೪,೭೭,೫೭೧(ಹದಿನಾಲ್ಕು ಲಕ್ಷದ ಎಪ್ಪತ್ತೇಳು ಸಾವಿರದ ಐದುನೂರ ಎಪ್ಪತ್ತೊಂದು) ಮತಗಳು ಚಲಾವಣೆಯಾಗಿವೆ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತಗಳಿಗಿಂತ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ೧,೫೯,೪೬೮ ಮತಗಳು ಹೆಚ್ಚುವರಿಯಾಗಿ ಚಲಾವಣೆಯಾಗಿವೆ.

೨೦೨೩ರ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳು ಸೇರಿ ಒಟ್ಟು ೧೪,೩೪,೧೭೪ ಮತಗಳು ಚಲಾವಣೆಯಾಗಿದ್ದವು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳಿಗಿಂತ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು ಸೇರಿ ೪೩,೩೯೮ ಮತಗಳು ಹೆಚ್ಚುವರಿಯಾಗಿ ಚಲಾವಣೆಯಾಗಿವೆ.

ಮೈಸೂರು-ಕೊಡಗು: ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೨೦,೯೨,೨೨೨ ಮತದಾರರಿದ್ದಾರೆ. ೧೦,೨೬,೩೨೪ ಪುರುಷ ಮತದಾರರ ಪೈಕಿ ಒಟ್ಟು ೭,೩೨,೬೦೫ ಮತದಾರರು ಮತಚಲಾಯಿಸಿದ್ದಾರೆ.

೧೦,೬೫,೭೧೪ ಮಹಿಳಾ ಮತದಾರರಲ್ಲಿ ಒಟ್ಟು ೭,೪೪,೯೨೭ ಮಹಿಳಾ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ೧೮೪ ಇತರೆ ಮತದಾರರಲ್ಲಿ ೩೯ ಮಂದಿ ಮತಚಲಾಯಿಸಿದ್ದಾರೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ೨,೩೮,೭೩೩ ಒಟ್ಟು ಮತದಾರರಿದ್ದರು.೧,೧೬,೧೪೩ ಪುರುಷ ಮತದಾರರಲ್ಲಿ ೮೮,೧೯೬ ಮಂದಿ ಮತಚಲಾಯಿಸಿದ್ದಾರೆ.

೧,೨೨,೫೮೧ ಮಹಿಳಾ ಮತದಾರರಲ್ಲಿ ೯೧,೮೪೧ ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಒಟ್ಟು ೦೯ ಮಂದಿ ಇತರೆ ಮತದಾರರು ಇದ್ದು,ಯಾರು ಕೂಡ ಮತಚಲಾಯಿಸಿಲ್ಲ.

ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೧,೮೦,೦೩೭ ಮಂದಿ ಮತದಾರರು ಮತ ಚಲಾಯಿಸಿದ್ದಾರೆ.

೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೧,೭೫,೦೦೯ ಮಂದಿ ಹಕ್ಕು ಚಲಾಯಿಸಿದ್ದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ : ೨,೩೨,೦೩೩ ಮತದಾರರಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ೧,೧೪,೪೨೫ ಪುರುಷ ಮತದಾರರಲ್ಲಿ ೮೪,೭೨೮ ಮಂದಿ ಮತಚಲಾಯಿಸಿದ್ದಾರೆ.

೧,೧೭,೬೦೧ ಮಹಿಳಾ ಮತದಾರರಲ್ಲಿ ೮೬,೬೯೮ ಮಹಿಳೆಯರು ಮತಚಲಾಯಿಸಿದ್ದಾರೆ. ಏಳು ಇತರೆ ಮತದಾರರಲ್ಲಿ ಯಾರು ಕೂಡ ಮತಚಲಾಯಿಸಿಲ್ಲ.

ಒಟ್ಟು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವೀರಾಜಪೇಟೆ ಕ್ಷೇತ್ರದಲ್ಲಿ ೧,೭೧,೪೨೬ ಮಂದಿ ಮತಚಲಾಯಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ವೀರಾಜಪೇಟೆ ಕ್ಷೇತ್ರದಲ್ಲಿ ೧,೬೬,೦೩೭ ಮತದಾರರು ಮತಚಲಾಯಿಸಿದ್ದರು.

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ: ಒಟ್ಟು ೧,೯೮,೬೨೫ ಮಂದಿ ಮತದಾರರಿದ್ದಾರೆ. ೯೯,೧೧೩ ಮಂದಿ ಪುರುಷ ಮತದಾರರಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ೮೦,೪೨೪ ಮಂದಿ ಮತಚಲಾಯಿಸಿದ್ದಾರೆ.

೯೯,೫೦೮ ಮಹಿಳಾ ಮತದಾರರಲ್ಲಿ ೭೮,೮೬೦ ಮಹಿಳೆಯರು ಮತ ಚಲಾಯಿಸಿದ್ದಾರೆ. ನಾಲ್ಕು ಇತರೆ ಮತದಾರರಲ್ಲಿ ಒಟ್ಟು ೨ ಮಂದಿ ಮತಚಲಾಯಿಸಿದ್ದು, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೧,೫೯,೨೮೬ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ೧,೬೫,೨೫೬ ಮಂದಿ ಮತಚಲಾಯಿಸಿದ್ದರು.

ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ : ಒಟ್ಟು ೨,೪೭,೬೦೭ ಮತದಾರರಿ ದ್ದಾರೆ. ೧,೨೨,೮೦೯ ಪುರುಷ ಮತದಾರರಲ್ಲಿ ೯೭,೦೮೬ ಪುರುಷರ ಮತಚಲಾಯಿಸಿದ್ದಾರೆ.

೧,೨೪,೭೮೨ ಮಹಿಳಾ ಮತದಾರರಲ್ಲಿ ೯೫,೮೨೭ ಮಹಿಳೆಯರು ಮತಚಲಾಯಿಸಿದ್ದಾರೆ.

೧೬ ಮಂದಿ ಇತರೆ ಮತದಾರರಲ್ಲಿ ೮ ಮತದಾರರು ಮತ ಚಲಾಯಿಸಿದ್ದು, ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ೧,೯೨,೯೨೧ ಮತದಾರರು ಮತ ಚಲಾಯಿಸಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ೧,೯೯,೯೫೪ ಮಂದಿ ಮತದಾರರು ಮತ ಚಲಾಯಿಸಿದ್ದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ : ೧,೭೨,೬೬೭ ಪುರುಷ,೧,೭೬,೦೬೩ ಮಹಿಳೆಯರು ,ಮತ್ತು ೩೪ ಇತರೆ ಮತದಾರರು ಸೇರಿ ೩,೪೮,೭೬೪ ಮತದಾರರಲ್ಲಿ ೧,೨೭,೭೨೫ ಪುರುಷರು ಮತ್ತು ೧,೨೮,೨೫೫ ಮಹಿಳೆಯರು ಮತ್ತು ಇತರೆ ಏಳು ಮತದಾರರು ಸೇರಿ ೨,೫೫,೯೮೭ ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ೨,೪೪,೯೩೮ ಮತದಾರರು ಮತಚಲಾಯಿಸಿದ್ದರು.

ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ: ೧,೨೫,೫೮೭ ಪುರುಷ,೧,೩೨,೫೯೭ ಮಹಿಳೆಯರು ,ಮತ್ತು ೨೮ ಇತರೆ ಮತದಾರರು ಸೇರಿ ೨,೫೮,೨೧೨ ಮತದಾರರಲ್ಲಿ, ೭೭,೬೩೦ ಪುರುಷರು ಮತ್ತು ೭೭,೫೪೮ ಮಹಿಳೆಯರು ಮತ್ತು ಇತರೆ ನಾಲ್ಕು ಮತದಾರರು ಸೇರಿ ೧,೫೭,೧೮೨ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ೧,೪೯,೦೯೮ ಮಂದಿ ಮತಚಲಾಯಿಸಿದ್ದರು.

ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ: ಕ್ಷೇತ್ರದಲ್ಲಿ ೧,೨೫,೯೭೮ ಪುರುಷ,೧,೩೧,೨೫೯ ಮಹಿಳೆಯರು ,ಮತ್ತು ೩೨ ಇತರೆ ಮತದಾರರು ಸೇರಿ ೨,೫೭,೨೬೯ ಮತದಾರರ ಪೈಕಿ ೭೭,೫೫೯ ಪುರುಷರು ಮತ್ತು ೭೯,೩೩೦ ಮಹಿಳೆಯರು ಮತ್ತು ಇತರೆ ೫ ಮಂದಿ ಮತದಾರರು ಸೇರಿ ೧,೫೬,೮೯೩ ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೧,೫೦,೩೨೨ ಮಂದಿ ಮತಚಲಾಯಿಸಿದ್ದರು.

ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ : ೧,೪೯,೬೦೨ ಪುರುಷ,೧,೬೧,೩೨೩ ಮಹಿಳೆಯರು ಮತ್ತು ೫೪ ಇತರೆ ಮತದಾರರು ಸೇರಿ ೩,೧೦,೯೭೯ ಮತದಾರರ ಪೈಕಿ ೯೯,೨೫೮, ಪುರುಷರು ಮತ್ತು ೧,೦೪,೫೬೮ ಮಹಿಳೆಯರು ಮತ್ತು ಇತರೆ ೧೩ ಮಂದಿ ಮತದಾರರು ಸೇರಿ ೨,೦೩,೮೩೯ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ೧,೮೩,೬೫೯ ಮತದಾರರು ಮತಚಲಾಯಿಸಿದ್ದರು.

- ಕೆ.ಎಂ. ಇಸ್ಮಾಯಿಲ್ ಕಂಡಕರೆ