ಕೂಡಿಗೆ, ಏ. ೨೯: ಸೈನಿಕ ಶಾಲಾ ಸೊಸೈಟಿಯ ವತಿಯಿಂದ ವಾರ್ಷಿಕ ತಪಾಸಣೆಯನ್ನು ಕೈಗೊಳ್ಳಲಾಗಿದ್ದು, ತಪಾಸಣಾ ಅಧಿಕಾರಿ ಕಮಡೋರ್ ರಾಜೇಶ್ ಕೆ ಶರ್ಮಾ ಅವರು ನವದೆಹಲಿಯಿಂದ ಆಗಮಿಸಿ ಕೂಡಿಗೆ ಸೈನಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಕ್ಷಣಾ ಸಚಿವಾಲಯದ ವ್ಯವಹಾರಗಳ ಚುಕ್ಕಾಣಿ ಹಿಡಿದಿರುವ ಇವರು ಎಲ್ಲಾ ೩೩ ಸೈನಿಕ ಶಾಲೆ ಗಳನ್ನು ಹಾಗೂ ನೂತನವಾಗಿ ಆರಂಭವಾದ ಪಿಪಿಪಿ ಮೋಡ್ನ ಸೈನಿಕ ಶಾಲೆಗಳ ತಪಾಸಣಾಧಿಕಾರಿ ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಾಲೆಯಲ್ಲಿನ ‘ಯುದ್ಧ ವೀರರ ಸ್ಮಾರಕಕ್ಕೆ’ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಯುದ್ಧ ವೀರರಿಗೆ ಗೌರವ ವಂದನೆ ಸಲ್ಲಿಸಿದರು. ನಂತರ ಶಾಲೆಯ ಅಶ್ವದಳದ ನೇತೃತ್ವದಲ್ಲಿ ಆಗಮಿಸಿದ ಅಧಿಕಾರಿಗೆ ಗೌರವ ವಂದನೆಯೊAದಿಗೆ, ಸ್ವಾಗತಿಸ ಲಾಯಿತು. ಶಾಲೆಯ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಭೆೆ ಯಲ್ಲಿ ೨೦೨೪-೨೫ನೇ ಸಾಲಿನ ಸೈನಿಕ ಶಾಲೆಯಲ್ಲಿ ನೂತನವಾಗಿ ರಚನೆ ಯಾದ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭವನ್ನು ಆಯೋಜಿಸ ಲಾಗಿತ್ತು.
ಈ ಸಂದರ್ಭ ಮುಖ್ಯ ಅತಿಥಿ ಗಳು ವಿದ್ಯಾರ್ಥಿಗಳ ಭುಜದ ಮೇಲಿನಿಂದ ಬ್ಯಾಡ್ಜ್ಗಳನ್ನು ಅನಾವರಣ ಗೊಳಿಸುವುದರ ಮೂಲಕ ಜವಾಬ್ದಾರಿಗಳನ್ನು ವಿತರಿಸಿದರು. ಹಾಗೆಯೇ ಪದಗ್ರಹಣಗೊಂಡ ವಿದ್ಯಾರ್ಥಿ ನಾಯಕರು ಶಾಲೆಯ ಧ್ಯೇಯವಾಕ್ಯವಾದ ವೀರತೆ, ದೃಢತೆ ಮತ್ತು ಪ್ರಾಮಾಣಿಕತೆಯನ್ನು ಉನ್ನತ ಹಂತದಲ್ಲಿ ಗೌರವಯುತವಾಗಿ ಎತ್ತಿ ಹಿಡಿಯಲು ಮತ್ತು ತಮ್ಮ ಸಾಮರ್ಥ್ಯ, ವಿಶ್ವಾಸದೊಂದಿಗೆ ತಮ್ಮ ಕರ್ತವ್ಯ ಗಳನ್ನು ನಿರ್ವಹಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೆಡೆಟ್ ಆದಿತ್ಯ ಕುಮಾರ್ ಶಾಲೆಯ ವಿದ್ಯಾರ್ಥಿ ನಾಯಕನಾಗಿ ಅಧಿಕಾರ ವಹಿಸಿ ಕೊಂಡರು.
ಸಮಾರಂಭದಲ್ಲಿ ವಿದ್ಯಾರ್ಥಿನಿ ಕೆಡೆಟ್ ದೀಪ್ತಿ ಮತ್ತು ತಂಡದವರು ಸ್ವಾಗತ ನೃತ್ಯವನ್ನು ಪ್ರದರ್ಶಿಸಿದರು. ಹಾಗೆಯೇ ಕೆಡೆಟ್ ರಾಮನ್ ಮತ್ತು ತಂಡದಿAದ ಸ್ವಾಗತ ಗೀತೆ ಗಾಯನ ನಡೆಯಿತು. ಈ ಸಂದರ್ಭ ವಿದ್ಯಾರ್ಥಿ ಗಳನ್ನುದ್ದೇಶಿಸಿ ಮಾತನಾಡಿದ ಶಾಲಾ ತಪಾಸಣಾಧಿಕಾರಿ ವಿದ್ಯಾರ್ಥಿಗಳಿಗೆ ಜವಾಬ್ದಾರಿಯ ಪ್ರಾಮುಖ್ಯತೆಯನ್ನು ತಿಳಿಸಿದರು. ಹಾಗೆಯೇ ತಮ್ಮ ಸಹಪಾಠಿಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸಲು ತಿಳಿಸಿದರು. ಇದರೊಂದಿಗೆ ಶಾಲೆಯ ವಿದ್ಯಾರ್ಥಿ ಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ದೇಶದ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ಸ್ಥಳೀಯ ಕಲಾ ಪ್ರಕಾರ ಗಳನ್ನು ಅನ್ವೇಷಿಸಲು ಮತ್ತು ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿ ಗಳಿಗೆ ಕಿವಿಮಾತು ಹೇಳಿದರು.
ತಪಾಸಣಾಧಿಕಾರಿ ರಾಜೇಶ್ ಶರ್ಮಾ ಶೈಕ್ಷಣಿಕ ಮತ್ತು ಆಡಳಿತ ಸಿಬ್ಬಂದಿಯೊAದಿಗೆ ಸಂವಾದ ನಡೆಸಿದರು. ಶಾಲೆಯ ವಿದ್ಯಾರ್ಥಿಗಳ ಎನ್ಡಿಎಗೆ ಸೇರ್ಪಡೆಯ ಸಂಖ್ಯೆಯನ್ನು ಹೆಚ್ಚಿಸಲು ಶಾಲೆಯು ಕೈಗೊಂಡ ಯೋಜನೆಯನ್ನು ಶ್ಲಾಘಿಸುವುದರೊಂದಿಗೆ, ತಮ್ಮ ಸಲಹೆಗಳನ್ನೂ ನೀಡಿದರು.
ಈ ಸಂದರ್ಭ ಶಾಲೆಯ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ರಾವ್, ಉಪ ಪ್ರಾಂಶುಪಾಲರಾದ ಸ್ಕಾ÷್ವಡ್ರನ್ ಲೀಡರ್ ಮನ್ಪ್ರೀತ್ ಸಿಂಗ್, ಹಿರಿಯ ಶಿಕ್ಷಕರಾದ ವಿಬಿನ್ ಕುಮಾರ್, ಬೋಧಕ - ಬೋಧಕೇತರ ಸಿಬ್ಬಂದಿ, ಎನ್ಸಿಸಿ ಮತ್ತು ದೈಹಿಕ ಶಿಕ್ಷಕವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.