ಇದೊಂದು ಕಲೆ, ವಿದ್ಯೆ. ಮನೋಹರವಾದ ಭಂಗಿ ಎಂದೆಲ್ಲಾ ನೃತ್ಯವನ್ನು ಗುರುತಿಸಬಹುದು.
ಸಂಗೀತಕ್ಕೆ ತಕ್ಕಂತೆ ದೇಹವನ್ನು ಚಲಿಸುವಂತೆ ಮಾಡುವ ಕಲೆಯೇ ನೃತ್ಯ ಎನ್ನಬಹುದು. ಇದು ಸುಂದರ ಕಲಾ ಪ್ರಾಕಾರವಾಗಿ ಆಚರಿಸಲು ವಿಶ್ವ ಮಟ್ಟದಲ್ಲಿ ನೃತ್ಯ ಪ್ರಾಕಾರವನ್ನು ಪೋಷಿಸಲು ಪ್ರತಿವರ್ಷ ಏಪ್ರಿಲ್ ೨೯ರಂದು ಅಂತರರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಗುತ್ತದೆ. ಇದನ್ನು "ವಿಶ್ವ ನೃತ್ಯ ದಿನ' ಎಂದು ಕೂಡ ಕರೆಯುತ್ತಾರೆ. ನೃತ್ಯ ಶಿಕ್ಷಣವನ್ನು ಉತ್ತೇಜಿಸಲು ಅಂತರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಗುತ್ತದೆ.
ಶಿವನೇ ಸಂತೋಷವಾದಾಗ ಕೋಪಗೊಂಡಾಗ ನರ್ತಿಸುತ್ತಿದ್ದ ಹಾಗಾಗಿ ಆತನಿಗೆ ನಟರಾಜ ಎಂಬ ಹೆಸರು ಕೂಡ ಇದೆ.
ಶಿವನ ಅನೇಕ ನೃತ್ಯ ಪ್ರ್ರಾಕಾರಗಳಲ್ಲಿ ಶಿವ ತಾಂಡವವು ಕೂಡ ಒಂದು. ವಿಶೇಷವಾಗಿ ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳೊಂದಿಗೆ ಸಂಬAಧ ಹೊಂದಿರುವುದು ಶಿವನ ರೂಪ. ಶಿವನ ತಾಂಡವ ನೃತ್ಯದಲ್ಲಿ ಏಳು ಪ್ರಾಕಾರಗಳಿವೆ. ಶಿವನ ಪತ್ನಿ ಪಾರ್ವತಿ ಕೂಡ ಶಿವ ಶಕ್ತಿ ತಾಂಡವವನ್ನು ಮಾಡುತ್ತಾಳೆ. ಕಾಳಿ ತಾಂಡವವಾಡುವಾಗ ಶಿವನೊಂದಿಗೆ ಈಕೆಯು ನರ್ತಿಸುತ್ತಾಳೆ. ಕಾಳಿ ರೂಪ ಹೊಂದಿದಾಗ ಕೋಪದಿಂದ ನೃತ್ಯ ಮಾಡುತ್ತಾಳೆ ಎಂಬ ಉಲ್ಲೇಖವಿದೆ.
ಸಿಂಧೂ ಕಣಿವೆ ನಾಗರಿಕತೆಯ ಹಿಂದಿನ ಸಂದರ್ಭದ ಶಿಲ್ಪಗಳು ನೃತ್ಯದ ಚಿತ್ರಗಳಾಗಿವೆ.
ಒಮ್ಮೆ ತಮಿಳುನಾಡಿನ ರಾಜನು ಕೇರಳಕ್ಕೆ ಕುದುರೆಯ ಮೇಲೆ ಪ್ರವಾಸ ಕೈಗೊಂಡನು.ಹಾಗೆ ಪ್ರಯಾಣಿಸುವಾಗ ಕರ್ನಾಟಕ ಮೂಲಕ ಹಾದು ಹೋಗುವಾಗ ರಾತ್ರಿಯಾದ ಕಾರಣ ಆತ ಕರ್ನಾಟಕದಲ್ಲಿ ತಂಗುತ್ತಾನೆ. ಆ ರಾತ್ರಿ ಕರ್ನಾಟಕದ ರಾಜ್ಯದ ರಾಜ ನೆರೆ ರಾಜ್ಯದ ರಾಜನಿಗೆ ಮೃಷ್ಟಾನ್ನ ಭೋಜನದ ವ್ಯವಸ್ಥೆಯನ್ನು ಮಾಡಿ ಅವರಿಗೆ ಮನೋರಂಜನೆ ನೀಡುವುದಕ್ಕಾಗಿ ಸಂಜೆ ಕುಣಿತ (ಆಗಿನ ಕಾಲಕ್ಕೆ ನೃತ್ಯಕ್ಕೆ ಕುಣಿತ ಎಂಬ ಶಬ್ದ ಬಳಸುತ್ತಿದ್ದರು) ಏರ್ಪಡಿಸಿದನಂತೆ. ಪುರುಷರು ಮರದ ಕೋಲುಗಳನ್ನು ಮತ್ತು ಮಡಿಕೆಯನ್ನು ಬಡಿಯುತ್ತ ಹಾಡು ಹೇಳುತ್ತ ಸಂಗೀತ ನೀಡಿದರೆ ಮಹಿಳೆಯರು ಕುಣಿಯುತ್ತಿದ್ದರಂತೆ. ಇದನ್ನು ತಮಿಳು ರಾಜನು ತನ್ನ ರಾಜ್ಯಕ್ಕೆ ಹಿಂದಿರುಗಿದ ಮೇಲೆ ಕೃತಿಯಲ್ಲಿ ಉಲ್ಲೇಖಿಸಿದ್ದಾನೆ. ಅಂದರೆ ಒಂದನೇ ಶತಮಾನದ ಹೊತ್ತಿಗೆ ಕನ್ನಡಿಗರಿಗೆ ಹಾಡುವುದು ಮತ್ತು ನೃತ್ಯ ಮಾಡುವುದು ತಿಳಿದಿತ್ತು.
ಭಾರತೀಯ ಸಂಪ್ರದಾಯದಲ್ಲಿ ನೃತ್ಯ ಕಲಿಕೆಗೆ ಪ್ರಮುಖ ಸ್ಥಾನ ಇದೆ. ಭರತನ ‘‘ನಾಟ್ಯ ಶಾಸ್ತç’’ದ ಹೆಸರೇ ಹೇಳುವಂತೆ ಭರತನಾಟ್ಯ ಒಂದು ಅದ್ಭುತವಾದ ಕಲಾ ಪ್ರಾಕಾರ. ಈ ನೃತ್ಯಕ್ಕೆ ಪೂರಕವಾಗಿ ಶಾಸ್ತಿçÃಯ ಸಂಗೀತವಿರುತ್ತದೆ. ಇದೆ ನೃತ್ಯದ ಕುರಿತಾದ ಪ್ರಾಚೀನ ಕೃತಿ. ಇಲ್ಲಿ ನೃತ್ಯದ ಸೃಷ್ಟಿಯು ಬ್ರಹ್ಮ ದೇವನಿಗೆ ಸಲ್ಲುತ್ತದೆ ಎನ್ನಲಾಗಿದೆ. ನೃತ್ಯಕ್ಕೆ ಭದ್ರವಾದ ಅಡಿಪಾಯ ಹಾಕಿದವನು ಎಂದರೆ ಭರತ.
ವಿಶ್ವಾಮಿತ್ರನ ತಪಸ್ಸನ್ನು ಭಂಗಪಡಿಸಿ ಅವನನ್ನೇ ಮದುವೆಯಾದ ಮೇನಕೆಯ ನೃತ್ಯ ವಿಶ್ವಾಮಿತ್ರನ ಮನಸ್ಸನ್ನು ಗೆದ್ದಿತ್ತು.
ಆದಿಕವಿ ಪಂಪನ ಆದಿಪುರಾಣದಲ್ಲಿ ನೀಲಾಂಜನೇಯ ನೃತ್ಯ ಪ್ರಸಂಗವು ದೇವಲೋಕದ ಅಪ್ಸರೆಯರ ನೃತ್ಯವನ್ನು ನೆನಪಿಗೆ ತರುತ್ತದೆ.
ರಾಜರುಗಳ ಕಾಲದಿಂದಲೂ ನೃತ್ಯಕ್ಕೆ ಪ್ರಾಮುಖ್ಯತೆಯೊಂದಿಗೆ ವಿಶಿಷ್ಟ ಸ್ಥಾನವನ್ನು ನೀಡಲಾಗಿದೆ.
ಹೊಯ್ಸಳ ರಾಜ ವಿಷ್ಣುವರ್ಧನನ ಪತ್ನಿ ಶಾಂತಲಾ 'ನಾಟ್ಯದೇವಿ' ಶಾಂತಲಾ ಎಂದೇ ಪ್ರಖ್ಯಾತಳಾಗಿದ್ದಳು.
ಹೊಯ್ಸಳ ಕಾಲದ ವಾಸ್ತುಶಿಲ್ಪಗಳ ಬೀಡು ನೋಡಲು ಹಳೇಬೀಡು ಬೇಲೂರು ಪ್ರಮುಖ ತಾಣವಾಗಿ ಕಣ್ಮನ ಸೆಳೆಯುತ್ತದೆ.
ಜನಪದ : ಗೀತೆಯಂತೆಯೇ ಕುಣಿತವು ನಮಗೆ ಆದಿಕಾಲದಿಂದಲೂ ಕಾಣಸಿಗುತ್ತದೆ. ಜನಪದದಲ್ಲಿ ಕೋಲಾಟ ಎಂಬ ಹೆಸರಿನಲ್ಲಿ ನರ್ತಿಸಲಾಗುತ್ತದೆ. ಕೋಲನ್ನು ಬಡಿಯುತ್ತಾ, ತಾವೇ ಹಾಡನ್ನು ಹೇಳುತ್ತಾ ನರ್ತಿಸುತ್ತಾರೆ. ಸುಗ್ಗಿಯ ಕಾಲದಲ್ಲಿ 'ಸುಗ್ಗಿಯ ಕುಣಿತ' ಎಂಬ ಹೆಸರಿನಿಂದಲೂ ದೇವರ ಹಬ್ಬದ ಕಾಲದಲ್ಲಿ ವೀರಭದ್ರನ ಕುಣಿತ, ಕಂಸಾಳೆ, ನಂದಿ ಕಂಬದ, ಪಟ್ಟದ ಕುಣಿತ, ಯಕ್ಷಗಾನ ಬಯಲಾಟ, ದೊಡ್ಡಾಟ, ಸಣ್ಣಾಟ, ಗೊಂಬೆ ಕುಣಿತಗಳು, ಹುತ್ತರಿ ಕುಣಿತ, ಉಮ್ಮತ್ತಾಟ, ಕೋಲಾಟ ಹೀಗೆ ಹಲವಾರು ರೀತಿಯ ಜಾನಪದ ಪ್ರ್ರಾಕಾರಗಳಿವೆ.
ನೃತ್ಯವು ಒಂದು ಭೂಪ್ರದೇಶದಿಂದ ಮತ್ತೊಂದು ಭೂ ಪ್ರದೇಶಕ್ಕೆ ಭಿನ್ನತೆಯನ್ನು ಹೊಂದಿದೆ.
ಅವರವರ ಸಂಪ್ರದಾಯಕ್ಕೆ ಅನುಗುಣವಾಗಿ ನೃತ್ಯ ಮಾಡಲಾಗುತ್ತದೆ. ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ನೃತ್ಯ ಪ್ರಾಕಾರಗಳು ಕೇರಳದ ಕಥಕ್ಕಳಿ, ಮೋಹಿನಿ ಆಟಂ, ಮಣಿಪುರಿ, ಆಂಧ್ರದ ಕೂಚಿ ಪುಡಿ, ಒಡಿಸ್ಸಾದ ಒಡಿಸ್ಸಿ, ಪಂಜಾಬ್ನ ಭಾಂಗ್ರ, ಗುಜರಾತಿನ ಗರ್ಬಾ, ಕಾಶ್ಮೀರದ ದುಂಹಲ್, ರಾಜಸ್ಥಾನದ ಘೊಮರ್, ಅಸ್ಸಾಂನ ಬಿಹು, ಮಹಾರಾಷ್ಟçದ ಲಾವಣಿ ಪ್ರಮುಖವಾದವು.
ಕ್ರೀಡೆಯಂತೆ: ಮನಸಿಗೆ ಸಂತೋಷವನ್ನು ಉಲ್ಲಾಸವನ್ನು ನೀಡುತ್ತದೆ.ಇದೊಂದು ವ್ಯಾಯಾಮದಂತೆ ದೇಹವನ್ನು ಕಾಯಿಲೆ ಮುಕ್ತವನ್ನಾಗಿ ಮಾಡುತ್ತದೆ. ಹಿಂದೆ ಮಹಿಳೆಯರಿಗೆ ಮಾತ್ರ ಮೀಸಲಾಗಿದ್ದ ನೃತ್ಯ ಇಂದು ಪುರುಷರು ಅದರಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.
ಹಿಂದೆ ಹಳ್ಳಿಗಳಲ್ಲಿ ರಂಗಮAದಿರದಲ್ಲಿ ನಾಟಕಗಳನ್ನು ಪ್ರದರ್ಶಿಸುವಾಗ ನೃತ್ಯ ಮಾಡುವುದಕ್ಕೆ ಪ್ರತ್ಯೇಕ ನೃತ್ಯಗಾರರು ಇರುತ್ತಿದ್ದರು. ನೃತ್ಯವಿಲ್ಲದೆ ಆ ನಾಟಕ ಪರಿಪೂರ್ಣವಾಗುತ್ತಿರಲಿಲ್ಲ. ಮುಂದುವರಿದAತೆ ಸಿನಿಮಾದಲ್ಲಿ ಹಲವಾರು ವಿಧದ ರೀತಿಯ ನೃತ್ಯಗಳನ್ನು ಕಾಣುತ್ತೇವೆ. ಸಿನಿಮಾದಲ್ಲಿ ನೃತ್ಯವಿಲ್ಲದೆ ಅದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸಿನಿಮಾ ಹಾಡಿಗೆ ಹೆಜ್ಜೆಯಾಗುವ ಕಾಲುಗಳು ಲೆಕ್ಕವಿಲ್ಲದಷ್ಟು. ನಿಂತು ನರ್ತಿಸುವವರು ಹಲವರಾದರೆ ಕುಳಿತಲ್ಲೇ ಕಾಲುಗಳನ್ನು, ತಲೆಯನ್ನು ತೂಗಿ ನರ್ತಿಸುವವರು ಇದ್ದಾರೆ.
ಮದುವೆ ಮನೆಗಳಲ್ಲಿ ಹಾಡು ಇಲ್ಲದೆ ಕೇವಲ ಓಲಗಕ್ಕೆ ನರ್ತಿಸುವ ಸಂಭ್ರಮ ಹೇಳಲು ಅಸಾಧ್ಯ. ಅಬಾಲವೃದ್ಧರಾದಿಯಾಗಿ ಲಿಂಗಭೇದವಿಲ್ಲದೆ ನರ್ತಿಸುವುದು ಮನಮೋಹಕ. ಕೊಡಗಿನ ಉಮ್ಮತ್ ಆಟ ವಿಶಿಷ್ಟವಾದ ಕಲೆ. ಇದರಲ್ಲಿ ನರ್ತಿಸುವವರು ಮಹಿಳೆಯರೇ. ಸಮುದ್ರ ಮಂಥನ ಕಾಲದಲ್ಲಿ ವಿಷ್ಣು ಮೋಹಿನಿಯ ರೂಪ ತಾಳಿ ಉಮಾದೇವಿಯ ನಾನಾ ರೀತಿಯ ನೃತ್ಯಗಳಿಂದ ದೇವತೆಗಳು ಮತ್ತು ರಾಕ್ಷಸರ ಮನವೊಲಿಸಿ ಅವರನ್ನೆಲ್ಲ ಬೆರಗು ಮಾಡಿ ಅಮೃತವನ್ನು ಹಂಚಿದ ಸಂಕೇತವೇ ಎಂದು ನಂಬಲಾಗಿದೆ.
ಮನೆಯ ಮಕ್ಕಳನ್ನು ನೃತ್ಯ ಶಾಲೆಗೆ ಸೇರಿಸಿ ಸಂತೋಷಪಡುವ ಪೋಷಕರು ಒಂದು ಕಡೆಯಾದರೆ, ಮನೆಯಲ್ಲೇ ನರ್ತಿಸಿ ಖುಷಿಪಟ್ಟುಕೊಳ್ಳುವವರು ಮತ್ತೊಂದು ಕಡೆ, ನೃತ್ಯದಿಂದಲೇ ತಮ್ಮ ಬದುಕು ಕಟ್ಟಿಕೊಂಡವರು ಹಲವು ಮಂದಿ. ಯಾವುದೇ ಹಬ್ಬಗಳಾಗಲಿ, ಕಾರ್ಯಕ್ರಮಗಳಾಗಲಿ, ದಸರಾ, ಗಣೇಶ ಹಬ್ಬ, ಶಾಲಾ ಕಾಲೇಜು ವಾರ್ಷಿಕೋತ್ಸವಗಳಲ್ಲಿ, ನೃತ್ಯಕ್ಕೆ ಪ್ರಮುಖ ಸ್ಥಾನ ಸಿನಿಮಾ ಹಾಡಿಗೆ ಜಾನಪದ ಗೀತೆಗೆ ವಿಶಿಷ್ಟ ರೀತಿಯಲ್ಲಿ ಹೆಜ್ಜೆಯಾಗುವ ಪರಿ ಅಮೋಘ.
ಯಕ್ಷಗಾನದ ನೃತ್ಯವು ಮತ್ತೊಂದು ರೀತಿಯಲ್ಲಿ ಮನಸೆಳೆಯುತ್ತದೆ.
ನೃತ್ಯ ಕೇವಲ ಮನುಷ್ಯರು ಮಾತ್ರ ಮಾಡುವಂಥದ್ದಲ್ಲ ! ನವಿಲು 'ನಾಟ್ಯಮಯೂರಿ' ಅದರ ನೃತ್ಯವನ್ನು ನೋಡದವರು ಖುಷಿಪಡದವರು ಯಾರಿದ್ದಾರೆ.
ದೇವಸ್ಥಾನಗಳಲ್ಲಿ ನಡೆಯುವ ಉತ್ಸವ ಹಬ್ಬಗಳಲ್ಲೂ ಕೂಡ ದೈವಿ ನರ್ತಕರು ವಿಶಿಷ್ಟ ರೀತಿಯಲ್ಲಿ ನರ್ತಿಸುವುದು, ಅವರು ನರ್ತಿಸುವ ನರ್ತನವು ಸಾಮಾನ್ಯ ನರ್ತಕರ ನೃತ್ಯಕ್ಕಿಂತ ವಿಭಿನ್ನವಾಗಿದ್ದು ಭಕ್ತಿಪರವಶತೆಯಿಂದ ಕೂಡಿರುತ್ತದೆ.
ಒಟ್ಟಿನಲ್ಲಿ ನೃತ್ಯ ಸರ್ವರನ್ನು ಆಕರ್ಷಿಸಿ ಸರ್ವಮಯವಾಗಿ, ಶಿವಮಯವಾಗಿ, ದೈವಮಯವಾಗಿ, ಮನುಷ್ಯನ ಜೀವನದ ಹಾಸು ಹೊಕ್ಕಾಗಿ ನಮ್ಮೊಂದಿಗಿದೆ.
-ಎA.ಎಸ್. ರಜನಿ,
ಸಹಾಯಕ ಪ್ರಾಧ್ಯಾಪಕಿ, ಕಾವೇರಿ ಕಾಲೇಜು, ಗೋಣಿಕೊಪ್ಪ.