ಚೆಟ್ಟಳ್ಳಿ, ಏ. ೨೮: ಲೋಕಸಭಾ ಚುನಾವಣೆಯಲ್ಲಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕಿ ವಿ.ಟಿ. ವಿಸ್ಮಯಿ ಅವರ ನೇತೃತ್ವದಲ್ಲಿ ಚೆಟ್ಟಳ್ಳಿ ಭಾಗದ ಆರು ಮತಗಟ್ಟೆಗಳಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು.
ಯಾವುದೇ ಗೊಂದಲಗಳಿಲ್ಲದೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸೂತ್ರವಾಗಿ ಚುನಾವಣೆ ನಡೆಯಿತು. ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂತ್ ಸಂಖ್ಯೆ ೨೩೬ ಪೊನ್ನತ್ಮೊಟ್ಟೆ ಮತಗಟ್ಟೆಯಲ್ಲಿ ೩೦೯ ಪುರುಷರು, ೩೦೩ ಮಹಿಳೆಯರು ಸೇರಿ ಒಟ್ಟು ೬೧೨ ಮಂದಿ ಮತಚಲಾಯಿಸಿದರು. ಶೇಕಡವಾರು ೬೯.೮೬ ಮತಚಲಾವಣೆಯಾಯಿತು. ಪೊನ್ನತ್ಮೊಟ್ಟೆ ಶಾಲೆಯ ಬೂತ್ ಸಂಖ್ಯೆ ೨೩೭ ಕಂಡಕರೆ ಬೂತ್ನಲ್ಲಿ ೩೩೭ ಪುರುಷರು, ೩೪೯ ಮಹಿಳೆಯರು ಸೇರಿ ಒಟ್ಟು ೬೮೬ ಮಂದಿ ಮತ ಚಲಾಯಿಸಿದರು. ಶೇಕಡವಾರು ೭೭.೨ ಮತದಾನ ದಾಖಲಾಗಿದೆ.
ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ಮತಗಟ್ಟೆಗಳಲ್ಲಿ ಕಂಡಕರೆ ಬೂತ್ನಲ್ಲಿ ಅತೀ ಹೆಚ್ಚು ಮತದಾನ ಪ್ರಮಾಣ ದಾಖಲಾಗಿದೆ. ಬೂತ್ ಸಂಖ್ಯೆ ೨೪೨ ಕುಡ್ಲೂರು ಚೆಟ್ಟಳ್ಳಿ, ಮಲಕೋಡು ಮತಗಟ್ಟೆಯಲ್ಲಿ ೨೯೪ ಪುರುಷರು ಮತ್ತು ೩೦೨ ಮಹಿಳೆಯರು ಸೇರಿ ಒಟ್ಟು ೫೯೬ ಮಂದಿ ಮತಚಲಾಯಿಸಿದ್ದು, ಶೇ. ೭೪.೫ ಮತದಾನ ಪ್ರಮಾಣ ದಾಖಲಾಗಿದೆ. ಬೂತ್ ಸಂಖ್ಯೆ ೨೩೫ ಕಾಫಿ ಬೋರ್ಡ್ ಬೂತ್ನಲ್ಲಿ ಒಟ್ಟು ೪೮೯ ಮಂದಿ ಮತ ಚಲಾಯಿಸಿದ್ದು, ಶೇ. ೭೨.೯೩ ಮತದಾನ ದಾಖಲಾಗಿದೆ. ಬೂತ್ ಸಂಖ್ಯೆ ೨೩೮ ಚೆಟ್ಟಳ್ಳಿ ಟೌನ್ ಬೂತ್ನಲ್ಲಿ ಒಟ್ಟು ೬೬೪ ಮಂದಿ ಮತ ಚಲಾಯಿಸಿದ್ದು, ಶೇ. ೬೪.೨೭ ಮತದಾನ ಪ್ರಮಾಣ ದಾಖಲಾಗಿದೆ.
ಈರವಳಮುಡಿ (ಅಬ್ಯಾಲ) ಮತಗಟ್ಟೆಯಲ್ಲಿ ಒಟ್ಟು ೨೯೭ ಮಂದಿ ಮತಚಲಾಯಿಸಿದ್ದು, ಶೇ. ೭೧ ಮತದಾನ ಪ್ರಮಾಣ ದಾಖಲಾಗಿದೆ.