ಸುಂಟಿಕೊಪ್ಪ, ಏ.೨೮: ೭ನೇ ಹೊಸಕೋಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಂತ ಸಬಾಸ್ಟೀನ್ರವರ ರೋಮನ್ ಕ್ಯಾಥೋಲಿಕ್ ದೇವಾಲಯ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ತಾ.೩೦ ರಂದು ಲೋಕಾರ್ಪಣೆ ಗೊಳ್ಳಲಿದೆ. ಬೆಳ್ತಂಗಡಿ ಧರ್ಮಕ್ಷೇತ್ರದ ಅಧೀನದಲ್ಲಿ ಬರುವ ಸಿದ್ಧಾಪುರ ಕರಡಿಗೋಡುವಿನ ಸಂತ ಮೇರಿ ದೇವಾಲಯದ ನೇತೃತ್ವದಲ್ಲಿ ಸಂತ ಸಬಾಸ್ಟೀನ್ ಅವರ ರೋಮನ್ ಕ್ಯಾಥೋಲಿಕ್ ದೇವಾಲಯವು ೧೯೮೨ ರಲ್ಲಿ ಆರಂಭಗೊAಡು ಕಾರ್ಯಾ ಚರಿಸುತ್ತಿತ್ತು.
ಈ ದೇವಾಲಯದ ಧರ್ಮ ಗುರುಗಳಾಗಿ ವಂ.ರೆ. ಫಾದರ್ ಸಬಾಸ್ಟೀನ್ ಪೂವತ್ತಿಗಲ್ ಅವರು ೯ ವರ್ಷಗಳ ಹಿಂದೆ ಅಧಿಕಾರ ಸ್ವೀಕರಿಸಿಕೊಂಡರು. ಕಾಲಕ್ರಮೇಣ ಸಮುದಾಯದ ಕುಟುಂಬಗಳ ದ್ವಿಗುಣಗೊಳ್ಳುತ್ತಿದ್ದಂತೆ ದೇವಾಲಯದ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಅನಿವಾರ್ಯವಾಗಿದ್ದು, ಕಂಡುಕೊAಡ ರೇ.ಫಾ.ಸಬಾಸ್ಟೀನ್ ಅವರು ತಮ್ಮ ಕನ್ಯಾಸ್ತಿçà ಹಾಗೂ ಶಿಷ್ಯ ವರ್ಗದವ ರೊಂದಿಗೆ ಚರ್ಚಿಸಿದಾಗ ದೇವಾಲಯ ದ ಅಭಿವೃದ್ಧಿ ಮತ್ತು ವಿಸ್ತರಣೆ ಕುರಿತು ಒಮ್ಮತದ ತಿರ್ಮಾನಕ್ಕೆ ಬಂದ ಹಿನ್ನಲೆಯಲ್ಲಿ ಕರಡಿಗೋಡುವಿನ ಸಂತ ಮೇರಿ ದೇವಾಲಯದ ಮುಖ್ಯಸ್ಥರ ಮೂಲಕ ಬೆಳ್ತಂಗಡಿ ಧರ್ಮಕ್ಷೇತ್ರಕ್ಕೆ ವಿವರವಾದ ನೀಲಿನಕ್ಷೆಯನ್ನು ತಯಾರಿಸಿ ಕಳುಹಿಸಿಕೊಡಲಾಯಿತು. ಅಲ್ಲಿಂದ ಬಂದ ಆದೇಶದ ಪ್ರಕಾರ ದೇವಾಲಯದ ತಳ ಭಾಗದಲ್ಲಿ ೨೨-೦೫-೨೦೧೬ ರಂದು ನೂತನ ದೇವಾಲಯ ನಿರ್ಮಿಸುವ ಕಾರ್ಯಕ್ಕೆ ಆಶೀರ್ವಚನವನ್ನು ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಮಾರ್ ಲಾರೆನ್ಸ್ ಮುಕ್ಕಾಜಿ ಅವರು ನೀಡಿದರು.
ಅಂದಿನಿAದ ನಿರಂತರವಾಗಿ ದೇವಾಲಯದ ಪುನರ್ ನಿರ್ಮಾಣ ಮತ್ತು ವಿಸ್ತರಣಾ ಕಾರ್ಯ ನಡೆದು ಕೊಂಡು ಬಂದಿದೆ. ಧರ್ಮಗುರು ಗಳೊಂದಿಗೆ ಕನ್ಯಾಸ್ತಿçÃಯರು ಹಣಕಾಸು ಸಮಿತಿಯೊಂದನ್ನು ರಚಿಸಿಕೊಳ್ಳ ಲಾಯಿತು. ಈ ಸಮಿತಿಯಲ್ಲಿ ಇ.ಬಿ.ಜೋಸೆಫ್, ಜೋಣಿಪಾಲತ್, ಜೋಯಿ ಅರಕಲ್, ವಿಲಿ ಜೇಕಬ್ ಅವರು ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ. ದೇವಾಲಯದ ಮುಖ್ಯ ಪ್ರಾರ್ಥನಾ ಮಂದಿರವು ಸರಿಸುಮಾರು ೫೦೦ ಮಂದಿಗೆ ಸ್ಥಳವಕಾಶವಿದ್ದು, ಸಮುದಾಯ ಭವನವು ೪೦೦ ಮಂದಿಗೆ ಸ್ಥಳವಕಾಶವನ್ನು ಹೊಂದಿದೆ.
ಅತ್ಯಂತ ಆಕರ್ಷಣೆಯ ವಾಸ್ತುಶಿಲ್ಪ ಕೆತ್ತನೆ ಕೆಲಸ ಮತ್ತು ಯೇಸು ತಮ್ಮ ಶಿಷ್ಯರೊಂದಿಗೆ ಕೊನೆಯ ಬೋಧನೆ ಮಾಡುತ್ತಿರುವ ದೃಶ್ಯವನ್ನು ಶಿಲ್ಪಕಲಾಕೃತಿಗಳ ಮೂಲಕ ಬಲಿ ಅರ್ಪಣ ಪೀಠದಲ್ಲಿ ನಿರ್ಮಿಸಲಾಗಿದೆ. ಇವುಗಳಿಗೆ ಆಕರ್ಷಕವಾದ ಭಕ್ತಿ ಪ್ರಧಾನವಾದ ಬಾವನೆಗಳನ್ನು ಹೊಮ್ಮಿಸುವ ಬಣ್ಣದ ದೀಪಗಳ ಅಲಂಕಾರ ವ್ಯವಸ್ಥೆಯನ್ನು ಧ್ವನಿ ಬೆಳಕಿನ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇಡೀ ದೇವಾಲಯವನ್ನು ಚಪ್ಪಡಿ ಕಲ್ಲು ಶಿಲಾಕಲ್ಲಿನಿಂದ ಸುತ್ತಲೂ ಗೋಡೆಯನ್ನು ನಿರ್ಮಿಸಲಾಗಿದ್ದು ಎತ್ತರದ ಗೋಪುರ ಆಕೃತಿಯಲ್ಲಿ ಮೇಲ್ಚಾವಣಿಯನ್ನು ನಿರ್ಮಿಸಲಾಗಿದೆ.
ಇದರಿಂದ ಹೊರಗಿನ ವಾತವರಣ ಎಷ್ಟೇ ಬಿಸಿಯಾಗಿದ್ದರೂ, ಒಳಗೆ ಅತ್ಯಂತ ತಂಪಾಗಿ ಇರುವಂತೆ ನಿರ್ಮಿಸಲಾಗಿದೆ. ಇದರ ಹೊರ ಭಾಗದಲ್ಲಿ ಸುಮಾರು ೭೫ ಅಡಿಗಳಷ್ಟು ಎತ್ತರವಾದ ದೇವಾಲಯ ಗೋಪುರವನ್ನು ನಿರ್ಮಿಸಲಾಗಿದೆ. ಗೋಪುರದ ಮುಂದೆ ಅಷ್ಟೇ ಆಕರ್ಷಕವಾದ ಧ್ವಜಸ್ತಂಭ ಸುಮಾರು ೭೦ ಅಡಿಗಳಷ್ಟು ಎತ್ತರದ್ದಾಗಿದೆ. ಹಾಗೂ ಕ್ರೆöÊಸ್ತರ ಶೃದ್ಧಾ ಶಿಲುಬೆಯನ್ನು ೩೦ ಅಡಿಗಳಷ್ಟು ಎತ್ತರದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಹೊರ ಆವರಣದಲ್ಲಿ ಯೇಸುವಿನ ಸಾಕು ತಂದೆ ಜೋಸೆಫ್ ಮತ್ತು ತಾಯಿ ಮರಿಯಮ್ಮ ಅವರುಗಳ ಪೂರ್ಣ ಪ್ರಮಾಣದ ಬಾವಚಿತ್ರಗಳನ್ನು ವಿಶೇಷ ಗಾಜಿನ ಫಲಕದಲ್ಲಿ ನಿರ್ಮಿಸಲಾಗಿದೆ. ಅದರ ಮೇಲ್ಬಾಗದಲ್ಲಿ ಕ್ರೆöÊಸ್ತ ಸಮುದಾಯದಲ್ಲಿ ಸಂತರುಗಳ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಪ್ರಧಾನ ಬಲಿಪೀಠದಲ್ಲಿ ಶಿಲ್ಪ ಕಲಾಕೃತಿಗಳ ಹಿಂಭಾಗದಲ್ಲಿ ಯೇಸು ಶಿಲುಬೆ ಪ್ರಾಣವನ್ನು ತ್ಯಾಗ ಪೀತ ತಂದೆಯೊAದಿಗೆ ಸಮ್ಮಿಲನದ ದೃಶ್ಯವು ಅತ್ಯಂತ ಮಹತ್ವಪೂರ್ಣವಾಗಿ ಬಿಂಬಿತವಾಗಿದೆ.
ಈ ಸಂದರ್ಭ ದೇವಾಲಯದ ಪುನರ್ ನಿರ್ಮಾಣ ಮತ್ತು ವಿಸ್ತರಣಾ ಕಾರ್ಯದ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ವಂ.ರೆ.ಫಾದರ್ ಸಬಾಸ್ಟೀನ್ ಪೂವತ್ತಿಗಲ್, ಎಲ್ಲರಿಗೂ ತಿಳಿದಿರುವಂತೆ ೭ನೇ ಹೊಸಕೋಟೆ ಪ್ರದೇಶವು ರಾಷ್ಟಿçÃಯ ಹೆದ್ದಾರಿಯಲ್ಲಿ ಮಡಿಕೇರಿ ಕುಶಾಲನಗರ ನಡುವೆ ಬರುವ ಒಂದು ಪ್ರಮುಖ ಸ್ಥಳವಾಗಿದ್ದು, ಇಲ್ಲಿ ಧಾರ್ಮಿಕ ಸಾಮಾಜಿಕ ಮತ್ತು ಭಾವೈಕ್ಯತೆಯ ಸಹಬಾಳ್ವೆ ಇದೆ ಎನ್ನುವುದಕ್ಕೆ ಚರ್ಚಿನ ಮುಂಭಾಗದಲ್ಲಿ ಶ್ರೀಮಹಾಗಣಪತಿ ಹಾಗೂ ಶ್ರೀಕೃಷ್ಣ ದೇವಸ್ಥಾನ ಚರ್ಚಿನ ಬಲಪಾರ್ಶ್ವದಲ್ಲಿ ಮಸೀದಿ ಇದ್ದು, ಯಾವುದೇ ಗೊಂದಲಗೊಜಲುಗಳು ಇಲ್ಲದೆ ಪರಸ್ಪರ ಸಹೋದರತ್ವ ಧಾರ್ಮಿಕ ಭಾವೈಕ್ಯತೆಯಿಂದ ಬಾಳುತ್ತಿದ್ದೇವೆ. ಈಗಾಗಲೇ ಕೊಡಗು ಪ್ರವಾಸೋದ್ಯಮಕ್ಕೆ ತೆರೆದುಕೊಂಡಿದ್ದು, ೭ನೇ ಹೊಸಕೋಟೆಯು ನಮ್ಮ ದೇವಾಲಯದ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆದು ಪ್ರವಾಸೋದ್ಯಮಕ್ಕೆ ಇನ್ನಷ್ಟು ಇಂಬುಕೊಡುವ ನಿಟ್ಟಿನಲ್ಲಿ ದೇವಾಲಯದ ಪುನರ್ ನಿರ್ಮಾಣವಾಗಿದೆ. ದೇವಾಲಯದ ತಳಭಾಗದಲ್ಲಿರುವ ಸುಸಜ್ಜಿತವಾದ ಸಮುದಾಯ ಭವನ ಸಾರ್ವಜನಿಕರ ಉಪಯೋಗಕ್ಕೆ ಲೋಕಾರ್ಪಣೆ ಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
ಸರಕಾರದ ಅನುದಾನದ ಮಾಹಿತಿ ನೀಡಿದ ಅವರು ದೇವಾಲಯದ ಜೀರ್ಣೋದ್ದಾರಕ್ಕಾಗಿ ರೂ. ೨೫,೦೦೦,೦೦ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ರೂ. ೫೦,೦೦೦,೦೦ ಮೊತ್ತವನ್ನು ನೀಡಿದೆ ಇದರಲ್ಲಿ ರೂ. ೫,೦೦೦,೦೦ ಬಾಕಿ ಇದ್ದು ಶೀಘ್ರದಲ್ಲೇ ಮಂಜೂರು ಮಾಡಲಾಗುತ್ತದೆ ಎಂಬ ಮಾಹಿತಿ ಬಂದಿದೆ ಎಂದು ತಿಳಸಿದರು.
ಹಣಕಾಸು ಸಮಿತಿಯ ಸದಸ್ಯರಲ್ಲಿ ಒಬ್ಬರು ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿರುವ ಇ.ಬಿ.ಜೋಸೆಫ್ ಪತ್ರಿಕೆಯೊಂದಿಗೆ ಮಾತನಾಡಿ ಧರ್ಮಗುರು ಸಬಾಸ್ಟೀನ್ ಪೂವತ್ತಿಗಲ್ ಅವರ ನಾಯಕತ್ವ ಪ್ರಾರ್ಥನೆಯ ಫಲವಾಗಿ ೯ ವರ್ಷಗಳ ಸುದೀರ್ಘ ಶ್ರಮದಿಂದ ಈ ಭವ್ಯ ಮಂದಿರ ಸಾಕಾರಗೊಂಡಿದೆ. ಪ್ರತೇಕ್ಷವಾಗಿ ಪರೋಕ್ಷವಾಗಿ ಸುತ್ತ ಮುತ್ತಲಿನ ಜನರು ನಾಡಿನ ಆನೇಕ ಧರ್ಮಕ್ಷೇತ್ರಗಳು ನೀಡಿದ ತನು ಮನ ಧನ ದೇಣಿಗೆಯಿಂದ ನಮ್ಮ ಕನಸು ಸಾಕರಗೊಳ್ಳಲು ಕಾರಣವಾಗಿದೆ. ಒಟ್ಟಾರೆಯಾಗಿ ದೇವಾಲಯವು ೩.೫ ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿದ್ದು ಇಂಟರ್ಲಾಕ್ ಅಳವಡಿಕೆ ಸೇರಿದಂತೆ ಅಂತಿಮ ಹಂತದ ಕೆಲಸಗಳು ಬಾಕಿ ಇವೆಯೆಂದು ಮಾಹಿತಿ ನೀಡಿದರು.
ತಾ. ೩೦ ರಂದು ಲೋಕಾರ್ಪಣೆ
ಈ ಭವ್ಯ ದೇವಾಲಯವನ್ನು ತಾ.೩೦ ರಂದು ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಧ್ಯಕ್ಷರಾದ ಪರಮ ಪೂಜ್ಯ ಬಿಷೋಪ್ ಮಾರ್ಲಾರೆನ್ಸ್ ಮುಕುಜಿ ಅವರು ಆಶೀರ್ವಚನ ನೀಡುವ ಮೂಲಕ ಲೋಕಾರ್ಪಣೆಗೊಳಿಸ ಲಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಡಿಕೇರಿ ಶಾಸಕರಾದ ಡಾ. ಮಂತರ್ಗೌಡ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬೆಳ್ತಂಗಡಿ ಧರ್ಮಕ್ಷೇತ್ರದ ಜೋಸೆಫ್ ವಲಿಯಪರಂಬಿಲ್, ಸಿದ್ದಾಪುರ ಸಂತ ಮೇರಿ ಚರ್ಚಿನ ವಲಯ ಧರ್ಮ ಗುರುಗಳಾದ ಜೋಜಿ ವಡಕ್ಕಿವೀಟಿ, ಮೈಸೂರಿನ ಸೆಂಟ್ ಪೌಲಸ್ ಪ್ರಾಂತ್ಯದ ಧರ್ಮಗುರು ಅಗಸ್ಟೀನ್ ಪಾಯಂಪಳ್ಳಿ, ತಲಚೇರಿಯ ಸಂತ ಜೋಸೆಫರ ಪ್ರಾಂತ್ಯದ ಧರ್ಮಗುರು ಡಾ. ತ್ರೇಸಾ ಪಾಲಕ್ಕಾಡ್, ಚೆರುಪುಜಾ ಪ್ರಾಂತ್ಯದ ಧರ್ಮಗುರು ಜೋಸ್ ವೆಲ್ಟಿಕಲ್, ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಬಿ.ಜೋಸೆಫ್ ಪಾಲ್ಗೊಳ್ಳಲಿದ್ದಾರೆ ಎಂದು ಧರ್ಮಗುರು ಸಬಾಸ್ಟೀನ್ ಪೂವತ್ತಿಗಲ್ ತಿಳಿಸಿದ್ದಾರೆ.
ಮಂದಿರ ಸಾಕಾರಗೊಂಡಿದೆ. ಪ್ರತೇಕ್ಷವಾಗಿ ಪರೋಕ್ಷವಾಗಿ ಸುತ್ತ ಮುತ್ತಲಿನ ಜನರು ನಾಡಿನ ಆನೇಕ ಧರ್ಮಕ್ಷೇತ್ರಗಳು ನೀಡಿದ ತನು ಮನ ಧನ ದೇಣಿಗೆಯಿಂದ ನಮ್ಮ ಕನಸು ಸಾಕರಗೊಳ್ಳಲು ಕಾರಣವಾಗಿದೆ. ಒಟ್ಟಾರೆಯಾಗಿ ದೇವಾಲಯವು ೩.೫ ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿದ್ದು ಇಂಟರ್ಲಾಕ್ ಅಳವಡಿಕೆ ಸೇರಿದಂತೆ ಅಂತಿಮ ಹಂತದ ಕೆಲಸಗಳು ಬಾಕಿ ಇವೆಯೆಂದು ಮಾಹಿತಿ ನೀಡಿದರು.
ತಾ. ೩೦ ರಂದು ಲೋಕಾರ್ಪಣೆ
ಈ ಭವ್ಯ ದೇವಾಲಯವನ್ನು ತಾ.೩೦ ರಂದು ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಧ್ಯಕ್ಷರಾದ ಪರಮ ಪೂಜ್ಯ ಬಿಷೋಪ್ ಮಾರ್ಲಾರೆನ್ಸ್ ಮುಕುಜಿ ಅವರು ಆಶೀರ್ವಚನ ನೀಡುವ ಮೂಲಕ ಲೋಕಾರ್ಪಣೆಗೊಳಿಸ ಲಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಡಿಕೇರಿ ಶಾಸಕರಾದ ಡಾ. ಮಂತರ್ಗೌಡ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬೆಳ್ತಂಗಡಿ ಧರ್ಮಕ್ಷೇತ್ರದ ಜೋಸೆಫ್ ವಲಿಯಪರಂಬಿಲ್, ಸಿದ್ದಾಪುರ ಸಂತ ಮೇರಿ ಚರ್ಚಿನ ವಲಯ ಧರ್ಮ ಗುರುಗಳಾದ ಜೋಜಿ ವಡಕ್ಕಿವೀಟಿ, ಮೈಸೂರಿನ ಸೆಂಟ್ ಪೌಲಸ್ ಪ್ರಾಂತ್ಯದ ಧರ್ಮಗುರು ಅಗಸ್ಟೀನ್ ಪಾಯಂಪಳ್ಳಿ, ತಲಚೇರಿಯ ಸಂತ ಜೋಸೆಫರ ಪ್ರಾಂತ್ಯದ ಧರ್ಮಗುರು ಡಾ. ತ್ರೇಸಾ ಪಾಲಕ್ಕಾಡ್, ಚೆರುಪುಜಾ ಪ್ರಾಂತ್ಯದ ಧರ್ಮಗುರು ಜೋಸ್ ವೆಲ್ಟಿಕಲ್, ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಬಿ.ಜೋಸೆಫ್ ಪಾಲ್ಗೊಳ್ಳಲಿದ್ದಾರೆ ಎಂದು ಧರ್ಮಗುರು ಸಬಾಸ್ಟೀನ್ ಪೂವತ್ತಿಗಲ್ ತಿಳಿಸಿದ್ದಾರೆ.