ವೀರಾಜಪೇಟೆ, ಏ. ೨೯: ಮೂವರು ಕಾರ್ಮಿಕರು ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಘಟನೆ ಪಟ್ಟಣದ ಪಂಜರುಪೇಟೆಯಲ್ಲಿ ಸೋಮವಾರ ನಡೆದಿದೆ.
ಪಂಜರುಪೇಟೆಯ ನಿವಾಸಿ ರತ್ನಾಕರ್ (ಬೋಸು) ಹಾಗೂ ದಿನೇಶ್ ಎಂಬುವವರೆ ಹಲ್ಲೆಗೊಳಗಾದವರು. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮೂವರು ಕಾರ್ಮಿಕರಾದ ಮೈಸೂರಿನ ಉದಯಗಿರಿಯ ನಿವಾಸಿಗಳಾದ ರೆಹಮಾನ್, ಸಲ್ಮಾನ್ ಹಾಗೂ ಇಮ್ರಾನ್ ಎಂಬುವವರ ವಿರುದ್ದ ದೂರು ದಾಖಲಾಗಿದೆ. ಈ ಮೂವರು ಕಾರ್ಮಿಕರು ಕಳೆದ ಎರಡು ವರ್ಷಗಳಿಂದ ಪಟ್ಟಣದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮೂವರನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ. ಹಲ್ಲೆಯಿಂದ ಗಾಯಗೊಂಡವರು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.