ಗೋಣಿಕೊಪ್ಪ ವರದಿ, ಏ. ೨೯ : ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅರಮಣಮಾಡ ಕುಟುಂಬ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ೧೫ ತಂಡಗಳು ಮುನ್ನಡೆ ಸಾಧಿಸಿವೆ.
ಮಹಿಳಾ ವಿಭಾಗ
ಅರಮಣಮಾಡಕ್ಕೆ ಕಡೇಮಾಡ ವಿರುದ್ದ ೧೮ ರನ್ಗಳ ಜಯ ಲಭಿಸಿತು. ಅರಮಣಮಾಡ ೨ ವಿಕೆಟ್ ನಷ್ಟಕ್ಕೆ ೫೦ ರನ್, ಕಡೇಮಾಡ ೨ ವಿಕೆಟ್ಗೆ ೩೨ ರನ್ ಗಳಿಸಿತು. ಕಡೇಮಾಡ ಕ್ರಿಷ್ಮಾ ೧೫ ರನ್, ಸೋನಾ ೧ ವಿಕೆಟ್, ಅರಮಣಮಾಡ ೧೮ ಹಾಗೂ ೨ ವಿಕೆಟ್ ಪಡೆದರು. ನಾಗಂಡ ತಂಡವು ಚೇಂದೀರವನ್ನು ೮ ರನ್ಗಳಿಂದ ಮಣಿಸಿತು. ನಾಗಂಡ ೫ ವಿಕೆಟ್ಗೆ ೪೩ ರನ್, ಚೇಂದೀರ ೨ ವಿಕೆಟ್ ನಷ್ಟಕ್ಕೆ ೩೫ ರನ್ ಗಳಿಸಿತು. ಚೇಂದೀರ ನಿಷ್ಮಾ ೧೭ ರನ್, ನಾಗಂಡ ರಿಶಾ ೨೪ ರನ್, ರೇಣಿ ೨ ವಿಕೆಟ್ ಪಡೆದರು.
ಬಾದುಮಂಡ ತಂಡಕ್ಕೆ ಅಜ್ಜಿನಿಕಂಡ ವಿರುದ್ದ ೧೦ ವಿಕೆಟ್ಗಳ ಗೆಲುವು ದೊರೆಯಿತು. ಅಜ್ಜಿನಿಕಂಡ ೨ ವಿಕೆಟ್ ನಷ್ಟಕ್ಕೆ ೪೦ ರನ್, ಬಾದುಮಂಡ ೩ ಒವರ್ಗಳಲ್ಲಿ ಪಂದ್ಯ ಗೆದ್ದುಕೊಂಡಿತು. ಅಜ್ಜಿನಿಕಂಡ ಚಾರ್ವಿ ೧೫ ರನ್, ಬಾದುಮಂಡ ರಶ್ಮಿ ೧ ವಿಕೆಟ್, ಶಯಾ ೨೪ ರನ್ ಗಳಿಸಿದರು. ಪೆಬ್ಬಟ್ಟೀರ ಮಚ್ಚಂಡವನ್ನು ೧೦ ವಿಕೆಟ್ಗಳಿಂದ ಸೋಲಿಸಿತು. ಮಚ್ಚಂಡ ಹರ್ಷಿತಾ ಅವರ ೨೨ ರನ್ ನೆರವಿನಿಂದ ೧ ವಿಕೆಟ್ ನಷ್ಟಕ್ಕೆ ೫೮ ರನ್ ಗುರಿ ನೀಡಿತು. ಪೆಬ್ಬಟ್ಟೀರ ಸುಲಭವಾಗಿ ಗೆಲುವು ದಾಖಲಿಸಿತು.
ಪುರುಷರ ವಿಭಾಗ
ಮಲ್ಲೇಂಗಡವು ಚೀಯಂಡೀರ ವಿರುದ್ಧ ೯ ವಿಕೆಟ್ಗಳ ಜಯ ಸಂಪಾದಿಸಿತು. ಚೀಯಂಡೀರ ೫ ವಿಕೆಟ್ಗೆ ೭೨ ರನ್, ಮಲ್ಲೇಂಗಡ ೧ ವಿಕೆಟ್ ನಷ್ಟಕ್ಕೆ ೭೫ ರನ್ ದಾಖಲಿಸಿತು. ಚೀಯಂಡೀರ ಬೋಪಣ್ಣ ೧೫ ರನ್, ಮಲ್ಲೇಂಗಡ ದಿಲನ್ ೩೫ ರನ್ ಗಳಿಸಿದರು. ಮಾಚಂಗಡಕ್ಕೆ ಬಾಚಮಾಡ ವಿರುದ್ದ ೧೧ ರನ್ಗಳ ಗೆಲುವು ದಾಖಲಿಸಿತು. ಮಾಚಂಗಡ ೪ ವಿಕೆಟ್ ನಷ್ಟಕ್ಕೆ ೧೦೩ ರನ್ ಗುರಿ ನೀಡಿತು. ಬಾಚಮಾಡ ೮ ವಿಕೆಟ್ಗೆ ೯೧ ರನ್ ದಾಖಲಿಸಿತು. ಮಾಚಂಗಡ ದರ್ಶನ್ ೪೪ ರನ್, ಬಾಚಮಾಡ ನಾಣಯ್ಯ ೩೧ ರನ್ ದಾಖಲಿಸಿದರು.
ನಂದೇಟಿರ ತಂಡವು ಚಾರಿಮಂಡವನ್ನು ೧೦ ವಿಕೆಟ್ಗಳಿಂದ ಸೋಲಿಸಿತು. ಚಾರಿಮಂಡ ೭ ವಿಕೆಟ್ಗೆ ೫೮ ರನ್, ನಂದೇಟಿರ ೨.೫ ಒವರ್ಗಳಲ್ಲಿ ಗುರಿ ಮುಟ್ಟಿತು. ಚಾರಿಮಂಡ ನಂದಾ ೧೩ ರನ್, ನಂದೇಟಿರ ಅಪ್ಪಿ ಕುಶಾಲಪ್ಪ ೨೯ ರನ್ ದಾಖಲಿಸಿದರು. ಚೋಡುಮಾಡವು ಅಜ್ಜಿನಿಕಂಡವನ್ನು ೫೬ ರನ್ಗಳಿಂದ ಮಣಿಸಿತು. ಚೋಡುಮಾಡ ೩ ವಿಕೆಟ್ಗೆ ೧೧೦ ರನ್, ಅಜ್ಜಿನಿಕಂಡ ೫೪ ರನ್ಗಳಿಗೆ ಸರ್ವಪಥನಗೊಂಡಿತು. ಚೋಡುಮಾಡ ಗಣಪತಿ ೫೯, ತೇಜು ಮುತ್ತಪ್ಪ ೨೨ ರನ್, ಅಜ್ಜಿನಿಕಂಡ ರಾಖಿ ೧೫ ರನ್ ಹೊಡೆದರು.
ಚಿಮ್ಮಣಮಾಡಕ್ಕೆ ಸಣ್ಣುವಂಡ ವಿರುದ್ದ ೩೫ ರನ್ಗಳ ಗೆಲುವು ದೊರೆಯಿತು. ಚಿಮ್ಮಣಮಾಡ ೪ ವಿಕೆಟ್ಗೆ ೧೦೮ ರನ್, ಸಣ್ಣುವಂಡ ೭ ವಿಕೆಟ್ಗೆ ೭೩ ರನ್ ದಾಖಲಿಸಿತು. ಚಿಮ್ಮಣಮಾಡ ಸಜನ್ ೫೭, ಸಣ್ಣುವಂಡ ಕಾರ್ತಿಕ್ ೨೨ ರನ್, ಸಣ್ಣುವಂಡ ಅಯ್ಯಪ್ಪ ೨ ವಿಕೆಟ್ ಪಡೆದರು. ನಾಯಕಂಡಕ್ಕೆ ಅಜ್ಜಮಕ್ಕಡ ವಿರುದ್ದ ೮ ವಿಕೆಟ್ ಜಯ ದೊರೆಯಿತು. ಅಜ್ಜಮಕ್ಕಡ ವಿನು ಕುಶಾಲಪ್ಪ ಬಾರಿಸಿದ ೩೦ ರನ್ಗಳ ನೆರವಿನಿಂದ ೭ ವಿಕೆಟ್ ನಷ್ಟಕ್ಕೆ ೪೫ ರನ್ ಗುರಿ ನೀಡಿತು. ನಾಯಕಂಡ ನರು ೩೨, ಕೌಶಿಕ್ ೧೪ ರನ್ ಹೊಡೆದು ೨ ವಿಕೆಟ್ ನಷ್ಟಕ್ಕೆ ತಂಡವನ್ನು ಗೆಲುವಿನ ದಡ ಸೇರಿಸಿದರು. ನಾಯಕಂಡ ಸೋಮಣ್ಣ ೩ ವಿಕೆಟ್ ಕಬಳಿಸಿದರು.
ನಂದೀರ ತಂಡವು ಬಟ್ಟಿಯಂಡವನ್ನು ೭೭ ರನ್ಗಳಿಂದ ಸೋಲಿಸಿತು. ನಂದೀರ ಸಜನ್ ಸುಬ್ಬಯ್ಯ ೭೦ ರನ್ ನೆರವಿನಿಂದ ೧ ವಿಕೆಟ್ ನಷ್ಟಕ್ಕೆ ೧೩೪ ರನ್ ದಾಖಲಿಸಿತು. ಬಟ್ಟಿಯಂಡ ಚೆಂಗಪ್ಪ ೩೧ ರನ್ ಕಾಣಿಕೆಯಿಂದ ೬ ವಿಕೆಟ್ ಕಳೆದುಕೊಂಡು ೫೭ ರನ್ ದಾಖಲಿಸಿತು. ಚಿರಿಯಪಂಡಕ್ಕೆ ಬೊಜ್ಜಂಗಡ ವಿರುದ್ದ ೬ ವಿಕೆಟ್ ಜಯ ಲಭಿಸಿತು. ಬೊಜ್ಜಂಗಡ ೩ ವಿಕೆಟ್ಗೆ ೭೪ ರನ್, ಚಿರಿಯಪಂಡ ೪ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಬೊಜ್ಜಂಗಡ ವಿಜುತೋಶ್ ೩೪ ರನ್ ಗಳಿಸಿದರು.
ಕೋದೇಂಗಡಕ್ಕೆ ಪಾರುವಂಗಡ ವಿರುದ್ದ ೯ ವಿಕೆಟ್ ಜಯ ಸಿಕ್ಕಿತು. ಪಾರುವಂಗಡ ೭ ವಿಕೆಟ್ ನಷ್ಟಕ್ಕೆ ೪೮ ರನ್ಗಳ ಗುರಿ ನೀಡಿತು. ಕೋದೇಂಗಡ ೧ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಪಾರುವಂಗಡ ಹರ್ಷ ೧೭ ರನ್ ಗಳಿಸಿದರು. ಪೆಬ್ಬಟ್ಟೀರಕ್ಕೆ ಕೊಳುವಂಡ ವಿರುದ್ಧ ೨೨ ರನ್ಗಳ ಜಯ ದೊರೆಯಿತು. ಬಟ್ಟೀರ ೨ ವಿಕೆಟ್ಗೆ ೯೨ ರನ್, ಕೊಳುವಂಡ ೫ ವಿಕೆಟ್ಗೆ ೭೦ ರನ್ ಗಳಿಸಿತು. ಕೊಳುವಂಡ ದೇವಯ್ಯ ೨೬ ರನ್, ಪೊನ್ನಣ್ಣ ೧೮ ರನ್, ಪೆಬ್ಬಟ್ಟೀರ ಈರಪ್ಪ ೩೧ ರನ್ ದಾಖಲಿಸಿದರು.
ಚೆನ್ನಪಂಡ ತಂಡವು ಬೇರೆರವನ್ನು ೯ ವಿಕೆಟ್ಗಳಿಂದ ಮಣಿಸಿತು. ಚೇರೇರ ೮ ವಿಕೆಟ್ಗೆ ೪೧ ರನ್, ಚೆನ್ನಪಂಡ ೧ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಬೇರೆರ ಬೋಜಣ್ಣ ೧೪ ರನ್, ಚೆನ್ನಪಂಡ ದರ್ಶನ್ ೧೮, ದೀಕ್ಷಿತ್ ೧೮ ರನ್ ದಾಖಲಿಸಿದರು. ಕಡೇಮಾಡ ಸೋನಾ, ಚೀಯಂಡೀರ ಪೊನ್ನಪ್ಪ, ಬಾಚಮಾಡ ಚಿಣ್ಣಪ್ಪ, ಚಾರಿಮಂಡ ನಂದ, ಅಜ್ಜಿನಿಕಂಡ ರಾಖಿ, ಸಣ್ಣುವಂಡ ಅಯ್ಯಪ್ಪ, ಅಜ್ಜಮಕ್ಕಡ ವಿನು ಕುಶಾಲಪ್ಪ, ಬಟ್ಟಿಯಂಡ ಚೆಂಗಪ್ಪ, ಚೇಂದಿರ ನಿಷ್ಮಾ, ಅಜ್ಜಿನಿಕಂಡ ಚಾರ್ವಿ, ಮಚ್ಚಂಡ ಹರ್ಷಿತಾ, ಬೊಜ್ಜಂಗಡ ವಿಜುತೋಶ್, ಪಾರುವಂಗಡ ಹರ್ಷ, ಕೊಳುವಂಡ ದೇವಯ್ಯ, ಬೇರೇರ ಬೋಜಣ್ಣ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.