ಸೋಮವಾರಪೇಟೆೆ, ಏ. ೨೯ : ಸಮೀಪದ ಆಲೇಕಟ್ಟೆ ರಸ್ತೆಯಲ್ಲಿ ಪಿಕ್‌ಅಪ್ ವಾಹನಕ್ಕೆ ಸ್ಕೂಟರ್ ಡಿಕ್ಕಿಯಾದ ಪರಿಣಾಮ, ಸ್ಕೂಟರ್ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಆಲೇಕಟ್ಟೆ ರಸ್ತೆಯ ಖಬರಸ್ಥಾನ ಸಮೀಪ ಕಡಬ ಗ್ರಾಮದ ಸತ್ತಾರ್ ಎಂಬವರು ಚಾಲಿಸುತ್ತಿದ್ದ ಪಿಕ್‌ಅಪ್ ವಾಹನ ಬಲಭಾಗಕ್ಕೆ ತಿರುವು ತೆಗೆದುಕೊಳ್ಳುತ್ತಿದ್ದ ಸಂದರ್ಭ, ಹಿಂಬದಿಯಿAದ ಆಗಮಿಸಿದ ಹಾನಗಲ್ಲು ಬಾಣೆ ಗ್ರಾಮದ ದಿವಾಕರ ಎಂಬಾತ ಚಾಲಿಸುತ್ತಿದ್ದ ಸ್ಕೂಟರ್ ಡಿಕ್ಕಿಯಾಗಿದ್ದು, ಅವಘಡದ ತೀವ್ರತೆಗೆ ದ್ವಿಚಕ್ರ ವಾಹನ ಪಿಕ್‌ಅಪ್‌ನ ಕೆಳಭಾಗಕ್ಕೆ ಸಿಲುಕಿ ನಜ್ಜುಗುಜ್ಜಾಗಿದೆ.

ದ್ವಿಚಕ್ರ ವಾಹನ ಚಾಲಕ ದಿವಾಕರ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ನಂತರ ರಸ್ತೆಯಲ್ಲಿಯೇ ಪಿಕ್‌ಅಪ್ ನಿಂತಿದ್ದರಿAದ ಇತರ ವಾಹನಗಳ ಓಡಾಟಕ್ಕೆ ಕೆಲಕಾಲ ಸಮಸ್ಯೆಯಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ ನಂತರ ವಾಹನಗಳನ್ನು ತೆರವುಗೊಳಿಸಿ, ಇತರ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟರು.