ಮಡಿಕೇರಿ, ಏ. ೨೭: ನಿನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಶೆ.೭೦.೬೨ ಪ್ರಮಾಣದಲ್ಲಿ ಮತದಾನವಾಗಿದ್ದು, ಅರ್ಹ ಪುರುಷ ಮತದಾರರ ಪೈಕಿ ಶೇ.೭೧.೩೮ ಹಾಗೂ ಅರ್ಹ ಮಹಿಳಾ ಮತದಾರರ ಪೈಕಿ ಶೇ.೬೯.೯೦ ರಷ್ಟು ಮತದಾನ ನಡೆದಿದೆ. ಶೇ.೨೧.೨೦ ಪ್ರಮಾಣದಲ್ಲಿ ಇತರರು ಮತ ಚಲಾಯಿಸಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಒಟ್ಟು ೮ ವಿಧಾನಸಭಾ ಕ್ಷೇತ್ರಗಳು ಒಳಪಟ್ಟಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೧,೧೬,೧೪೩ ಪುರುಷ, ೧,೨೨,೫೮೧ ಮಹಿಳಾ ಹಾಗೂ ೯ ಇತರ ಮತದಾರರ ಪೈಕಿ ೮೮,೧೯೬ ಪುರುಷರು, ೯೧,೮೪೧ ಮಹಿಳೆಯರು ಮತದಾನ ಮಾಡಿದ್ದಾರೆ. ಶೇ.೭೫.೯೪ ಪ್ರಮಾಣದಲ್ಲಿ ಪುರುಷರು , ಶೇ. ೭೪.೯೨ ಪ್ರಮಾಣದಲ್ಲಿ ಮಹಿಳೆಯರು ಮತ ಚಲಾಯಿಸಿ ಒಟ್ಟು ಶೇ.೭೫.೪೧ ದಾಖಲಾಗಿದೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿನ ಅರ್ಹ ೧,೧೪,೪೨೫ ಪುರುಷ ಮತದಾರರು, ೧,೧೭,೬೦೧ ಅರ್ಹ ಮಹಿಳಾ ಮತದಾರರು ಹಾಗೂ ೭ ಇತರ ಮತದಾರರ ಪೈಕಿ ೮೪,೭೨೮ ಪುರುಷರು, ೮೬,೬೯೮ ಮಹಿಳೆಯರು ಮತದಾನ ಮಾಡಿದ್ದಾರೆ. ಪುರುಷರು ಶೇ.೭೪.೦೫ ಹಾಗೂ ಮಹಿಳೆಯರು ಶೆ.೭೩.೭೨ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ. ಒಟ್ಟು ಶೆ. ೭೩.೮೮ ಪ್ರಮಾಣದಲ್ಲಿ ಮತ ಚಲಾವಣೆಗೊಂಡಿದೆ.

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಶೇ. ೮೦.೧೯, ಹುಣಸೂರು ಶೇ. ೭೭.೯೧, ಚಾಮುಂಡೇಶ್ವರಿ ಶೇ. ೭೩.೪೦, ಕೃಷ್ಣರಾಜ ಶೇ. ೬೦.೮೭, ಚಾಮರಾಜ ಶೇ. ೬೦.೯೮ ಹಾಗೂ ನರಸಿಂಹರಾಜ ಕ್ಷೇತ್ರದಲ್ಲಿ ಶೇ. ೬೫.೫೫ ಮತ ಚಲಾವಣೆಯಾಗಿದೆ.