ಮಡಿಕೇರಿ, ಏ. ೨೭: ಮುಳಿಯ ಚಿನ್ನದ ಮಳಿಗೆ ತನ್ನ ಮಡಿಕೇರಿ ಮತ್ತು ಗೋಣಿಕೊಪ್ಪದಲ್ಲಿ ಚಿನ್ನೋತ್ಸವವನ್ನು ಹಮ್ಮಿಕೊಂಡಿದೆ. ಈ ಹಬ್ಬ ಮೇ ೨೦ ರವರೆಗೆ ನಡೆಯಲಿದೆ. ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಮ್ಯಾನೇಜ್ಮೆಂಟ್ ಸಲಹೆಗಾರ ವೇಣು ಶರ್ಮ ಈ ಬಾರಿ ಚಿನ್ನೋತ್ಸವ ಡಿಸೈನ್ಗಳ ಹಬ್ಬವಾಗಿ ಏರ್ಪಡಿಸಲಾಗುವುದು ಎಂದರು.
ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮಡಿಕೇರಿ ಜಿಲ್ಲಾಧ್ಯಕ್ಷ ಪೊನ್ನಚನ ಶ್ರೀನಿವಾಸ್ ಭಾಗವಹಿಸುವರು ಹಾಗೂ ಹೊಸ ಆಭರಣಗಳನ್ನು ಖ್ಯಾತ ಬರಹಗಾರ್ತಿ ರಶ್ಮಿ ಮೇದಪ್ಪ ಅವರು ಅನಾವರಣಗೊಳಿಸುವರು ಎಂದರು. ವಿನೂತನ ಶೈಲಿಯ ಅಂತರರಾಷ್ಟಿçÃಯ ಮತ್ತು ಟ್ರೆಂಡಿ ಡಿಸೈನ್ಗಳನ್ನು ಚಿನ್ನಾಭರಣಗಳನ್ನು ಈ ಸಂದರ್ಭ ಪ್ರದರ್ಶನ ಮತ್ತು ಮಾರಾಟ ಮಾಡಲಾಗುವುದು.
ಮುಳಿಯ ಸಂಸ್ಥೆಯ ಮಡಿಕೇರಿ ಪ್ರಬಂಧಕ ಸೋಮಣ್ಣ ತೀತಿಮಾಡ ಮಾತನಾಡಿ ಈ ಹಬ್ಬದಲ್ಲಿ ವಜ್ರದ ಆಭರಣಗಳ ಮೇಲೆ ವಿಶೇಷವಾದ ಕೊಡುಗೆಗಳಿವೆ. ಈ ಬಾರಿ ಚಿನೋತ್ಸವದಲ್ಲಿ ಹೆಚ್ಚಿನ ವಿನ್ಯಾಸಗಳು ಅನಾವರಣಗೊಳ್ಳಲಿದೆ ಎಂದರು. ಚಿನ್ನದ ಬೆಲೆ ಏರುತ್ತಿರುವ ಈ ಸಂದರ್ಭ ಮಾಸಿಕ ಕಂತುಗಳ ಶಿಸ್ತು ಬದ್ಧ ಹೂಡಿಕೆ ಒಳ್ಳೆಯದು ಎಂದರು.
ಸAಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಶಿವಕೃಷ್ಣಮೂರ್ತಿ ಮಾತನಾಡಿ, ಈ ಬಾರಿಯ ಚಿನ್ನೋತ್ಸವದಲ್ಲಿ ನಿತ್ಯೋಪಯೋಗಿ ಆಭರಣಗಳು, ಸಿಲ್ವರಿಯಾ ಎನ್ನುವ ಬೆಳ್ಳಿಯ ಆಭರಣಗಳ ವಿಶೇಷ ಸಂಗ್ರಹವನ್ನು ತೆರೆದಿಡುತ್ತಿದ್ದೇವೆ ಎಂದರು. ಮುಳಿಯ ಸಂಸ್ಥೆಯ ಗೋಣಿಕೊಪ್ಪ ಶಾಖೆಯ ಪ್ರಬಂಧಕ ಕಿಶೋರ್ ಬಿ.ಎಸ್., ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸಂಜೀವ ಉಪಸ್ಥಿತರಿದ್ದರು.