ಕೊಡವ ಹಾಕಿ ಉತ್ಸವ ವಿಶೇಷ ಆಕರ್ಷಣೆಯಾಗಿ ನಡೆಯುತ್ತಿದೆ. ಈ ಬಾರಿಯ ಕುಂಡ್ಯೋಳAಡ ಕಪ್ ಮುಂದಿನ ವರ್ಷಗಳ ಉತ್ಸವಕ್ಕೂ ಒಂದು ಮೈಲಿಗಲ್ಲಾಗಿದೆ ಎಂದು ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡೀರ ಪೂಣಚ್ಚ ಅವರು ಹೇಳಿದರು.

ಬೆಳಿಗ್ಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹೂವಿನ ಕುಂಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕುಂಡ್ಯೋಳAಡ ಹಾಕಿ ನಮ್ಮೆಯ ಪರವಾಗಿ ಅವರಿಗೆ ಒಡಿಕತ್ತಿ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪಾಂಡAಡ ಕುಟ್ಟಪ್ಪ ಅವರು ಆರಂಭಿಸಿದ ಕೊಡವ ಹಾಕಿ ನಮ್ಮೆ ಈಗ ವಿಜೃಂಭಣೆಯಿAದ ನಡೆಯುತ್ತಿದೆ. ಕುಂಡ್ಯೋಳAಡ ಕುಟುಂಬಸ್ಥರು ವಿಭಿನ್ನವಾಗಿ ಆರೋಗ್ಯ ಶಿಬಿರ, ಆಹಾರ ಶಿಬಿರ, ಮ್ಯಾರಥಾನ್, ತಂದ್‌ಬೆAದ್ ಕಾರ್ಯಕ್ರಮ, ಅಂತರಾಷ್ಟಿçÃಯ ಆಟಗಾರರ ಗುರುತಿಸುವಿಕೆ, ಅಂಪೈರ್ ಕ್ಲಿನಿಕ್ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಜನಮನ್ನಣೆಗಳಿಸಿದೆ. ಇದು ಮುಂದಿನ ಹಾಕಿ ನಮ್ಮೆಗೆ ದಾರಿದೀಪವಾಗಲಿದೆ. ಅಂತರರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡುವವರನ್ನು ಇಲ್ಲಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಒಲಂಪಿಯನ್ ಡಾ. ಎ.ಬಿ. ಸುಬ್ಬಯ್ಯ, ಎಲ್ಲಾ ಅಂತರರಾಷ್ಟಿçÃಯ ಆಟಗಾರರನ್ನು ಕುಂಡ್ಯೋಳAಡ ಹಾಕಿ ನಮ್ಮೆಯಲ್ಲಿ ಸನ್ಮಾನಿಸಿ ಗೌರವಿಸಿರುವುದು ಸಂತಸ ತಂದಿದೆ. ಇಂತಹ ಅತ್ಯುತ್ತಮ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚು ನಡೆಯಲಿ ಎಂದರು.

ಲೆಫ್ಟೆನೆAಟ್ ಕರ್ನಲ್, ಒಲಂಪಿಯನ್ ಬಾಳೆಯಡ ಸುಬ್ರಮಣಿ ಮಾತನಾಡಿ, ಕುಂಡ್ಯೋಳAಡ ಹಾಕಿ ನಮ್ಮೆಯಲ್ಲಿ ಭಾಗವಹಿಸಿದ ೩೬೦ ಕುಟುಂಬ ತಂಡಗಳು ಹಾಗೂ ಅತೀ ಹೆಚ್ಚು ಪ್ರೇಕ್ಷಕರ ಭಾಗವಹಿಸುವಿಕೆ ಸಿದ್ಧತೆಗಳನ್ನು ನಡೆಸಿದ ಕುಂಡ್ಯೋಳAಡ ಹಾಕಿ ನಮ್ಮೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ, ಹಿರಿಯರಾದ ಪಟ್ಟೆದಾರರಾದ ನಾಣಯ್ಯ ಕುಂಡ್ಯೋಳAಡ, ಹಾಕಿ ನಮ್ಮೆ ಅಧ್ಯಕ್ಷ ರಮೇಶ್ ಮುದ್ದಯ್ಯ ಮತ್ತಿತರರಿದ್ದರು.

ಕುಂಡ್ಯೋಳAಡ ಹೇಮಾ ಪೂವಣ್ಣ ಪ್ರಾರ್ಥನೆ, ಹಾಕಿ ನಮ್ಮೆಯ ಸಂಚಾಲಕ ದಿನೇಶ್ ಕಾರ್ಯಪ್ಪ ಸ್ವಾಗತ, ಚೆಪ್ಪುಡಿರ ಕಾರ್ಯಪ್ಪ, ಚೋಕಿರ ಅನಿತಾ ಪ್ರವೀಣ್ ನಿರೂಪಿಸಿ, ವಂದಿಸಿದರು.

ಹಾಕಿ ಉತ್ಸವದ ಅಂಗವಾಗಿ ಕೊಡವ ಜನಾಂಗದಲ್ಲಿ ಅಂತರರಾಷ್ಟಿçÃಯ ಮಟ್ಟದಲ್ಲಿ, ರಾಷ್ಟಿçÃಯ ಮಟ್ಟದಲ್ಲಿ ಪ್ರತಿನಿಧಿಸಿರುವ ಹಾಕಿ ಆಟಗಾರರು, ತೀರ್ಪುಗಾರರು, ತಾಂತ್ರಿಕ ಸಿಬ್ಬಂದಿಗಳನ್ನು ಜನರಿಗೆ ಪರಿಚಯಿಸಿ ಗೌರವಿಸುವ ಕಾರ್ಯಕ್ರಮವನ್ನು ವಿಶೇಷವಾಗಿ ಏರ್ಪಡಿಸಲಾಗಿತ್ತು. ಆಗಮಿಸಿದ ಎಲ್ಲರನ್ನೂ ಮೈದಾನದ ಪ್ರವೇಶ ದ್ವಾರದಲ್ಲಿ ಹಾಕಿ ಉತ್ಸವದ ಜನಕ ಪಾಂಡAಡ ಅವರ ಪುತ್ಥಳಿ ಸಹಿತವಾಗಿ ಇರುವ ಐನಮನೆಯಲ್ಲಿ ಸ್ವಾಗತಿಸಲಾಯಿತು. ಅಲ್ಲಿಂದ ಇವರೆಲ್ಲರನ್ನು ದುಡಿಕೊಟ್ಟ್ ಪಾಟ್ ಸಹಿತವಾಗಿ ಪುಟ್ಟ ಮೆರವಣಿಗೆ ಏನಿಗೆ ಮೂಲಕ ಕುಂಡ್ಯೋಳAಡ ಕುಟುಂಬದವರು ಕೊಡವ ಹಾಕಿ ಅಕಾಡೆಮಿ ಪ್ರಮುಖರು, ಇತರ ಪ್ರಮುಖರು ಸೇರಿ ಮೈದಾನಕ್ಕೆ ಕರೆತಂದು ನಂತರ ವೇದಿಕೆಗೆ ಕರೆದೊಯ್ಯಲಾಯಿತು. ಮಾಜಿ ಒಲಂಪಿಯನ್‌ಗಳು, ಅಂತರರಾಷ್ಟಿçÃಯ, ರಾಷ್ಟಿçÃಯ ಆಟಗಾರರು - ಆಟಗಾರ್ತಿಯರು, ತೀರ್ಪುಗಾರರು, ಕೋಚ್‌ಗಳು, ವೀಕ್ಷಣೆ ವಿವರಣೆಗಾರರು ಮೆರವಣಿಗೆಯಲ್ಲಿ ಸಾಗಿ ಬಂದು ವೇದಿಕೆಯನ್ನೇರುವ ಸಂದರ್ಭ ಸಂಪ್ರದಾಯದAತೆ ‘ಬಂದಿರಾ’ ಎಂಬAತೆ ಸ್ವಾಗತಿಸಲಾಯಿತು. ಬಳಿಕ ಇವರೆಲ್ಲರನ್ನೂ ಅತಿಥಿಗಳಾಗಿ ಪಾಲ್ಗೊಂಡಿದ್ದ ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಅವರು ‘ಗೆಜ್ಜೆತಂಡ್’ ಉಡುಗೊರೆಯ ಮೂಲಕ ಗೌರವಿಸಿದರು. ಕುಂಡ್ಯೋಳAಡ ಕುಟುಂಬದ ಪ್ರಮುಖರಾದ ನಾಣಯ್ಯ ರಮೇಶ್ ಮುದ್ದಯ್ಯ, ದಿನೇಶ್ ಕಾರ್ಯಪ್ಪ ಹಾಗೂ ಪದಾಧಿಕಾರಿಗಳು, ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡAಡ ಬೋಪಣ್ಣ ಹಾಗೂ ಪದಾಧಿಕಾರಿಗಳು ಈ ಕಾರ್ಯಕ್ರಮದ ಜವಾಬ್ದಾರಿ ನಿರ್ವಹಿಸಿದ ಚೆಪ್ಪುಡಿರ ಕಾರ್ಯಪ್ಪ ಹಾಗೂ ತಂಡದವರು ಪಾಲ್ಗೊಂಡಿದ್ದರು.ಅಪ್ಪಚೆಟ್ಟೋಳAಡ ಕುಟುಂಬದ ಘೋಷಣೆ

೨೦೨೩ರಲ್ಲಿ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವ ಆಯೋಜಿಸಿದ್ದ ಅಪ್ಪಚೆಟ್ಟೋಳಂಡ ಕುಟುಂಬ ಹಾಕಿಯ ಉತ್ತೇಜನಕ್ಕೆ ಭಾರೀ ಮೊತ್ತದ ಸಹಕಾರವನ್ನು ಪ್ರಕಟಿಸಿದೆ.

ಕೊಡವ ಹಾಕಿ ಅಕಾಡೆಮಿಯಲ್ಲಿ ರೂ. ೫ ಲಕ್ಷ ಹಣವನ್ನು ಠೇವಣಿ ಇಡಲಿದ್ದು, ಇದರ ಬಡ್ಡಿ ಹಣದಲ್ಲಿ ಇನ್ನು ಮುಂದೆ ವರ್ಷಂಪ್ರತಿಯ ಕೌಟುಂಬಿಕ ಹಾಕಿ ಉತ್ಸವದಲ್ಲಿ ಉದಯೋನ್ಮುಖ ಪ್ರತಿಭೆಗಳಾಗಿ ಹೊರಹೊಮ್ಮಲಿರುವ ಇಬ್ಬರು ಯುವ ಆಟಗಾರರಿಗೆ (ಯುವಕ - ಯುವತಿ) ಇದರಲ್ಲಿ ಬಹುಮಾನ ನೀಡಲು ತೀರ್ಮಾನಿಸಲಾಗಿದೆ.

ಇದರೊಂದಿಗೆ ಕೊಡವ ಹಾಕಿ ಅಂಪರ‍್ಸ್ಗಳಿಗೆ ನೆರವಾಗುವಂತೆ ಅವರ ಕ್ಷೇಮ ನಿಧಿಗೆ ರೂ. ೨ ಲಕ್ಷದ ಠೇವಣಿ ನೀಡುವುದಾಗಿ ಪ್ರಕಟಿಸಲಾಗಿದೆ. ವರ್ಷಂಪ್ರತಿ ಬಲ್ಲಮಾವಟಿಯಲ್ಲಿ ನಡೆಯುತ್ತಿದ್ದ ಅಂತರಗ್ರಾಮ ನಾಲ್‌ನಾಡ್ ಹಾಕಿ ಪಂದ್ಯಾವಳಿ ೧೨ ವರ್ಷದಿಂದ ನಿಂತು ಹೋಗಿದ್ದು, ಅದರ ಪುನರಾರಂಭಕ್ಕೆ ಈ ವರ್ಷ ರೂ. ೧ ಲಕ್ಷದ ಪ್ರಾಯೋಜಕತ್ವ ಹಾಗೂ ನಾಲ್‌ನಾಡ್ ಕಪ್ ಹಾಕಿ ಸಮಿತಿ ವತಿಯಿಂದ ಇನ್ನುಮುಂದೆ ವರ್ಷಂಪ್ರತಿ ಅಪ್ಪಚೆಟ್ಟೋಳಂಡ ಕುಟುಂಬದ ಪ್ರಾಯೋಜಕತ್ವದಲ್ಲಿ ನೇತಾಜಿ ವಿದ್ಯಾಸಂಸ್ಥೆ ಆಟದ ಮೈದಾನದಲ್ಲಿ ಹಾಕಿ ಕೋಚಿಂಗ್ ಕ್ಯಾಂಪ್ ಆಯೋಜನೆಗೆ ಸಹಕಾರ ನೀಡಲೂ ಉದ್ದೇಶಿಸಲಾಗಿದೆ.

ಇದರೊಂದಿಗೆ ಇಂದು ಕುಂಡ್ಯೋಳAಡ ಕಪ್ ಹಾಕಿ ಸಂದರ್ಭ ನಡೆಸಿದ ಕೊಡವ ಫ್ಯಾಮಿಲಿ ರನ್‌ಗೆ ಬಹುಮಾನವಾಗಿ ರೂ. ೧ ಲಕ್ಷ ಪ್ರಾಯೋಜಿಸಿರುವದಾಗಿಯೂ ಅಪ್ಪಚೆಟ್ಟೋಳಂಡ ಕಪ್‌ನ ಸಂಚಾಲಕರಾಗಿದ್ದ ಮನು ಮುತ್ತಪ್ಪ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಪ್ರತಿಷ್ಠಿತವಾದ ಹಾಗೂ ಅಸಂಖ್ಯಾತ ಕ್ರೀಡಾಭಿಮಾನಿಗಳನ್ನು ಆಕರ್ಷಿಸುವ ಹಾಕಿ ಪಂದ್ಯಾವಳಿಯಲ್ಲಿ ವೀಕ್ಷಕರ ವಿವರಣೆಗಾರರದ್ದು ಪ್ರಮುಖ ಪಾತ್ರ. ಇವರು ಇಡೀ ಮೈದಾನವನ್ನು ಪ್ರತಿಷ್ಠಿತವಾದ ಹಾಗೂ ಅಸಂಖ್ಯಾತ ಕ್ರೀಡಾಭಿಮಾನಿಗಳನ್ನು ಆಕರ್ಷಿಸುವ ಹಾಕಿ ಪಂದ್ಯಾವಳಿಯಲ್ಲಿ ವೀಕ್ಷಕರ ವಿವರಣೆಗಾರರದ್ದು ಪ್ರಮುಖ ಪಾತ್ರ. ಇವರು ಇಡೀ ಮೈದಾನವನ್ನು ಹಿಡಿದಿಡಬೇಕಾಗುತ್ತದೆ. ಈ ಬಾರಿ ವೀಕ್ಷಕ ವಿವರಣೆಗಾರರಾಗಿ ಮುಖ್ಯ ವೀಕ್ಷಕ ವಿವರಣೆಗಾರರಾಗಿ ಚೆಪ್ಪುಡಿರ ಕಾರ್ಯಪ್ಪ, ಮಾಳೇಟಿರ ಶ್ರೀನಿವಾಸ್, ಕುಲ್ಲೇಟಿರ ಅರುಣ್ ಬೇಬ, ಚೋಕಿರ ಅನಿತಾ ಪ್ರವೀಣ್, ಅಜ್ಜೆಟ್ಟಿರ ವಿಕ್ರಂ, ಮೂಡೆರ ಹರೀಶ್ ಕಾಳಯ್ಯ, ಬೊಳಿಯಾಡಿರ ಸಂತು ಸುಬ್ರಮಣಿ, ಮಣವಟ್ಟಿರ ದಯಾ ಚಿಣ್ಣಪ್ಪ, ಕಂಗಾAಡ ಜಾಲಿ ಪೂವಪ್ಪ, ಬೊಟ್ಟೋಳಂಡ ಸೌಮ್ಯ ಕಾರ್ಯನಿರ್ವಹಿಸಿದರು.ಅಂತರರಾಷ್ಟಿçÃಯ ಮಟ್ಟದ ಕ್ರಿಕೆಟ್, ಫುಟ್‌ಬಾಲ್ ಪಂದ್ಯಾವಳಿ ಸಂದರ್ಭ ಪ್ರೇಕ್ಷಕರನ್ನು ಉತ್ತೇಜಿಸುವ ಚಿಯರ್ ಗರ್ಲ್ಸ್ ಮಾದರಿಯಲ್ಲಿ ಕುಂಡ್ಯೋಳAಡ ಪುಟಾಣಿಗಳು ಹೆಜ್ಜೆ ಹಾಕುವ ಮೂಲಕ ಹಾಕಿ ಅಭಿಮಾನಿಗಳನ್ನು ಹುರಿದುಂಬಿಸುವ ಪ್ರಯತ್ನ ನಡೆಸಿದ್ದು ವಿಶೇಷವಾಗಿತ್ತು.ಮತ್ತೊಂದು ವಿಶೇಷತೆಯಾಗಿ ಕೊಂಬೊಮೀಸೆರ ಬಂಬೊ ಹಾಗೂ ಬೋಜಿ ಜಡೆರ ಬೋಜಕ್ಕ ಎಂಬ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ದೊಡ್ಡಗಾತ್ರದ ಮೀಸೆ ಬಿಟ್ಟವರು, ಉದ್ದುದ್ದ ಜಡೆ ಹೊಂದಿದ್ದ ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗಿಗಳಾಗಿದ್ದರು.

ಉದ್ದ ಜಡೆ ಬೋಜಕ್ಕ ಸ್ಪರ್ಧೆಯ ಹುಡುಗಿಯರ ವಿಭಾಗದಲ್ಲಿ ಬಿದ್ದಾಟಂಡ ಲೀಕ್ಷಾ ಪೂಣಚ್ಚ ಪ್ರಥಮ, ಮಂಡೆಡ ಸಿಂಚನ್ ಮುತ್ತಪ್ಪ ದ್ವಿತೀಯ, ಬಟ್ಟಿರ ನಿಮಿಷಾ ನೀಲಮ್ಮ ತೃತೀಯ ಸ್ಥಾನ ಪಡೆದರು. ಹೆಂಗಸರ ವಿಭಾಗದಲ್ಲಿ ಚಾಮೆರ ಮಾನಸ ಪ್ರಥಮ, ಬಾಚಿನಾಡಂಡ ಶೀತಲ್ ಪೊನ್ನಪ್ಪ ದ್ವಿತೀಯ, ಕಾಳೆಯಂಡ ಅನಿತಾ ತೃತೀಯ ಸ್ಥಾನಗಳಿಸಿದರು. ಕೊಂಬ ಮೀಸೆ ಬಂಬ ಸ್ಪರ್ಧೆಯಲ್ಲಿ ಚೆಪ್ಪುಡಿರ ಸುಜು ಕರುಂಬಯ್ಯ ಪ್ರಥಮ, ಕಾಳಚಂಡ ರವಿ ತಮ್ಮಯ್ಯ ದ್ವಿತೀಯ, ಬೊಟ್ಟೋಳಂಡ ನಂದಾ ಕಾರ್ಯಪ್ಪ ತೃತೀಯ ಸ್ಥಾನಗಳಿಸಿದರು.ಹಾಕಿ ಉತ್ಸವದಲ್ಲಿ ಕೊಡವ ಹಾಕಿ ಅಕಾಡೆಮಿ ಕೂಡ ಪ್ರಮುಖವಾದದ್ದು. ಹಾಕಿ ಉತ್ಸವದ ಯಶಸ್ಸಿಗೆ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಸೇರಿದಂತೆ, ಪದಾಧಿಕಾರಿಗಳಾದ ಕುಕ್ಕೆರ ಜಯಾ ಚಿಣ್ಣಪ್ಪ, ಚೆಯ್ಯಂಡ ಸತ್ಯ, ಚೇನಂಡ ಸುರೇಶ್, ಕಲಿಯಂಡ ಸಂಪತ್ ಸೇರಿದಂತೆ ಇಡೀ ತಂಡ ಶ್ರಮಿಸಿದೆ.