ಸಿದ್ದಾಪುರ, ಏ. ೨೭: ವಾಲ್ನೂರು ಗ್ರಾಮದ ಕಾವೇರಿ ನದಿಯಲ್ಲಿ ಶುಕ್ರವಾರದಂದು ನೀರಿನಲ್ಲಿ ಮುಳುಗಿ ಸಾವಿಗೀಡಾದ ಯುವಕನ ಮೃತದೇಹವು ಶನಿವಾರದಂದು ನದಿಯಲ್ಲಿ ಪತ್ತೆಯಾಗಿದೆ. ಶುಕ್ರವಾರ ಸಂಜೆ ಸುಂಟಿಕೊಪ್ಪ ಸಮೀಪದ ಮತ್ತಿಕಾಡು ನಿವಾಸಿ ನಿಶಾಂತ್ ಎಂಬಾತನು ತನ್ನ ಮೂವರು ಸ್ನೇಹಿತರೊಂದಿಗೆ ವಾಲ್ನೂರು ಗ್ರಾಮದ ಕಾವೇರಿ ನದಿಗೆ ಸ್ನಾನ ಮಾಡಲು ಬಂದಿದ್ದು, ಈ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ. ಶುಕ್ರವಾರದಂದು ಪೊಲೀಸರು ಬೋಟ್ ಮೂಲಕ ಹುಡುಕಾಡಿzರೂ ನೀರುಪಾಲಾದ ಯುವಕನ ಸುಳಿವು ದೊರೆತಿಲ್ಲ. ನಂತರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಶನಿವಾರದಂದು ದುಬಾರೆ ರ‍್ಯಾಫ್ಟಿಂಗ್ ತಂಡದವರು ನದಿಯಲ್ಲಿ ಶೋಧ ಕಾರ್ಯ ಮುಂದುವರಿಸಿದಾಗ ಯುವಕನ ಮೃತದೇಹವು ಬೆಳಿಗ್ಗೆ ಪತ್ತೆಯಾಯಿತು. ನಂತರ ಸಿದ್ದಾಪುರ ಪೊಲೀಸರ ಸಮ್ಮುಖದಲ್ಲಿ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಘಟನೆಯ ಸಂಬAಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.