ಮಡಿಕೇರಿ, ಏ. ೨೭: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಗೌಳಿಬೀದಿಯ ಶ್ರೀ ಕಂಚಿಕಾಮಾಕ್ಷಿ ದೇವಾಲಯದ ೧೭ನೇ ವರ್ಷದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ತಾ. ೨೬ ಹಾಗೂ ೨೭ ರಂದು ೨ ದಿನಗಳ ಕಾಲ ಕೇರಳದ ಪಯ್ಯನೂರಿನ ಶ್ರೀ ಈಶ್ವರಿ ನಂಬೂದರಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು.
ತಾ. ೨೬ ರಂದು ದೇವಾಲಯದಲ್ಲಿ ಪುಣ್ಯಾಹ ಶುದ್ಧಿ, ದೇವಿ ಪೂಜೆ, ಸುದರ್ಶನ ಹೋಮ ನಡೆಯಿತು. ತಾ. ೨೭ ರಂದು ಮಹಾಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ, ಕಳಸ ಪೂಜೆ, ದೇವಿಗೆ ಅಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ ನಡೆದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ನಗರದ ವಿವಿಧೆಡೆಗಳಿಂದ ಭಕ್ತಸಮೂಹ ಪೂಜೆಯಲ್ಲಿ ಪಾಲ್ಗೊಂಡಿತ್ತು.