ಮಡಿಕೇರಿ, ಏ. ೨೬: ಬಿಟ್ಟಂಗಾಲ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಆ್ಯಕ್ಟಿವಿಟಿ ಅಕಾಡಮಿ ವತಿಯಿಂದ ಬಿಟ್ಟಂಗಾಲದಲ್ಲಿನ ಒಳಾಂಗಣ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಕೊಡಗಿನ ಪ್ರತಿಭಾವಂತ ಮಕ್ಕಳಿಗೆ ಜೂನಿಯರ್ ಸೀಡಿಂಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ೫೦ಕ್ಕೂ ಅಧಿಕ ಕ್ರೀಡಾಪಟುಗಳು ಟೂರ್ನಿಯಲ್ಲಿ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ವಿಜೇತರಾಗಿ ಬಹುಮಾನ ಪಡೆದುಕೊಂಡರು.

ಅAಡರ್ ೧೭ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಅಪ್ಪಾರಂಡ ತನವ್ ಪೂವಣ್ಣ ವಿಜೇತರಾದರೆ, ಹೇಮಂತ್ ಶಿವಕುಮಾರ್ ರನ್ನರ್ ಸ್ಥಾನ ಗಳಿಸಿದರು. ಅಂಡರ್ ೧೭ ಡಬಲ್ಸ್ನಲ್ಲಿ ಅಪ್ಪಾರಂಡ ತನಿಷ್ ಮುತ್ತಪ್ಪ-ತನವ್ ಪೂವಣ್ಣ ಜೋಡಿ ಪ್ರಥಮ, ಹೇಮಂತ್ ಶಿವಕುಮಾರ್-ನಿಶ್ಚಯ್ ಜೋಡಿ ದ್ವಿತೀಯ ಸ್ಥಾನ ಗಳಿಸಿತು. ಅಂಡರ್ ೧೫ ಬಾಲಕರ ವಿಭಾಗದಲ್ಲಿ ಅಪ್ಪಾರಂಡ ತನವ್ ಪೂವಣ್ಣ ಪ್ರಥಮ, ಪ್ರಮಿಥ್ ದ್ವಿತೀಯ ಸ್ಥಾನ ಗಳಿಸಿದರು. ಡಬಲ್ಸ್ನಲ್ಲಿ ತನವ್ ಪೂವಣ್ಣ-ಮುಕ್ಕಾಟಿರ ಧ್ರುವ್ ಜೋಡಿ ಪ್ರಥಮ, ಪ್ರಮಿಥ್ ಕೆ.ಎಸ್-ನಿಶ್ಚಯ್ ಟಿ.ಎಮ್ ದ್ವಿತೀಯ ಸ್ಥಾನ ಗಳಿಸಿದರು. ಅಂಡರ್ ೧೩ ಬಾಲಕರ ಸಿಂಗಲ್ಸ್ನಲ್ಲಿ ಪೊನ್ನಕಚ್ಚಿರ ಪುಜನ್ ಪೂವಣ್ಣ ಪ್ರಥಮ, ನೆಲ್ಲಮಕ್ಕಡ ಆರ್ಥವ್ ಅಚ್ಚಪ್ಪ ದ್ವಿತೀಯ ಸ್ಥಾನ ಗಳಿಸಿದರು. ಅಂಡರ್ ೧೩ ಬಾಲಕರ ಡಬಲ್ಸ್ನಲ್ಲಿ ನೆಲ್ಲಮಕ್ಕಡ ಆರ್ಯನ್ ಅಪ್ಪಚ್ಚು-ಸಣ್ಣುವಂಡ ಆರವ್ ಗಣಪತಿ ಪ್ರಥಮ, ಪೊನ್ನಕಚ್ಚಿರ ಪುಜನ್ ಪೂವಣ್ಣ-ಆರ್ಥವ್ ಅಚ್ಚಪ್ಪ ದ್ವಿತೀಯ ಸ್ಥಾನ ಗಳಿಸಿದರು. ಅಂಡರ್ ೧೧ ಸಿಂಗಲ್ಸ್ನಲ್ಲಿ ಸಣ್ಣುವಂಡ ಆರವ್ ಗಣಪತಿ ಪ್ರಥಮ, ಆರ್ಥವ್ ಅಚ್ಚಪ್ಪ ದ್ವಿತೀಯ ಸ್ಥಾನ ಗಳಿಸಿದರು. ಅಂಡರ್ ೯ ಬಾಲಕರ ವಿಭಾಗದಲ್ಲಿ ಚೆರಿಯಂಡ ಯುವನ್ ಪ್ರಥಮ, ಚೆಕ್ಕೆರ ಆಧ್ವಿಕ್ ದ್ವಿತೀಯ ಸ್ಥಾನ ಗಳಿಸಿದರು.

ಬಾಲಕಿಯರ ವಿಭಾಗದಲ್ಲಿ ಅಂಡರ್ ೧೫ ಸಿಂಗಲ್ಸ್ನಲ್ಲಿ ರಕ್ಷಾ ವಿ. ಪ್ರಥಮ, ಮರ್ಚಂಡ ಶಿವಾನಿ ದ್ವಿತೀಯ ಸ್ಥಾನ ಗಳಿಸಿದರು. ಅಂಡರ್ ೧೩ ವಿಭಾಗದಲ್ಲಿ ಮಾಚಿಮಾಡ ವರ್ಷಿತ ಪ್ರಥಮ, ಚೆರಿಯಂಡ ಯೂಮಿ ದ್ವಿತೀಯ ಸ್ಥಾನ ಗಳಿಸಿದರು. ಅಂಡರ್ ೯ ವಿಭಾಗದಲ್ಲಿ ಮಾದಂಡ ಆದ್ಯ ತಿಮ್ಮಯ್ಯ ಪ್ರಥಮ, ಬೊಳ್ತಂಡ ಮಹಿಕ ದ್ವಿತೀಯ ಸ್ಥಾನ ಗಳಿಸಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಟೂರ್ನಿಯಲ್ಲಿ ೫೦ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಸಂದರ್ಭ ಶಾಸಕ ಎ.ಎಸ್ ಪೊನ್ನಣ್ಣ ಹಾಗೂ ಮಾಜಿ ಎಂ.ಎಲ್.ಸಿ. ಅರುಣ್ ಮಾಚಯ್ಯ, ಪ್ರಮುಖರಾದ ವಂಶಿ ಮೆರ್ಲ, ವಕೀಲ ಮಲ್ಲಂಗಡ ರಾಕೇಶ್, ಪ್ರಮುಖರಾದ ಪಡಿಕಲ್ ಸಂತೋಷ್, ಸಂದೀಪ್, ಜಂಪ್ ಸ್ಕಾö್ಯಷ್ ಅಕಾಡೆಮಿಯ ಶರತ್ ಹಾಗೂ ಇತರರು ಇದ್ದರು.