ಕೂಡಿಗೆ, ಏ. ೨೬: ೨೦೨೪-೨೫ನೇ ಸಾಲಿನ ಅಖಿಲ ಭಾರತ ಸೈನಿಕ ಶಾಲೆಗಳ ಗುಂಪು ಫುಟ್‌ಬಾಲ್ ಪಂದ್ಯಾವಳಿಯು ಕೂಡಿಗೆ ಸೈನಿಕ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು.

ಬಾಲಕರ ವಿಭಾಗದಲ್ಲಿ ತಮಿಳುನಾಡಿನ ಅಮರಾವತಿ ಸೈನಿಕ ಶಾಲೆಯ ತಂಡ ಪ್ರಥಮ, ಕೇರಳದ ಕಾಜಕೂಟಂ ತಂಡ ದ್ವಿತೀಯ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಆಂಧ್ರಪ್ರದೇಶದ ಕಲಿಕಿರಿ ಸೈನಿಕ ಶಾಲೆಯ ತಂಡ ಪ್ರಥಮ, ಕೊಡಗು ಸೈನಿಕ ಶಾಲೆ ದ್ವಿತೀಯ, ಉಪ ಕಿರಿಯ ಬಾಲಕರ ವಿಭಾಗದಲ್ಲಿ ಕೇರಳದ ಕಾಜಕೂಟಂ ಸೈನಿಕ ಶಾಲೆಯ ತಂಡ ಪ್ರಥಮ, ತಮಿಳುನಾಡಿನ ಅಮರಾವತಿನಗರ ಸೈನಿಕ ಶಾಲಾ ತಂಡ ದ್ವಿತೀಯ ಸ್ಥಾನ ಪಡೆದು ಕೊಂಡವು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸೈನಿಕ ಶಾಲೆಯ ಪ್ರಬಾರ ಪ್ರಾಂಶುಪಾಲ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಭಾರತದ ದಕ್ಷಿಣ ವಲಯದಿಂದ ನಾಲ್ಕು ಸೈನಿಕ ಶಾಲೆಗಳು ಫುಟ್ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.

ಮುಖ್ಯ ಅತಿಥಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಕ್ರೀಡಾಕೂಟದ ಅಂತಿಮ ಘಟ್ಟದ ವರೆಗೂ ಕೌಶಲ್ಯ, ಸಾಂಘಿಕ ಹೋರಾಟ ಮತ್ತು ಕ್ರೀಡಾ ಮನೋಭಾವವನ್ನು ಉತ್ಸಾಹದಿಂದ ಪ್ರದರ್ಶನಗೈದ ಎಲ್ಲಾ ತಂಡಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಪಥಸಂಚಲನವನ್ನು ನಡೆಸಿಕೊಟ್ಟರು. ಸೈನಿಕ ಶಾಲೆ ಕಲಿಕಿರಿ, ಕಜಕೂಟಂ ಮತ್ತು ಅಮರಾವತಿನಗರ ತಂಡಗಳು ಚಾಂಪಿಯನ್ ತಂಡಗಳಾಗಿ ಹೊರಹೊಮ್ಮಿದವು.

ವಿದ್ಯಾರ್ಥಿನಿಯರ ತಂಡದಿAದ ಸೈನಿಕ ಶಾಲೆ ಕಲಿಕಿರಿಯ ಹಾಗೂ ಉಪ ಕಿರಿಯರ ತಂಡದಿAದ ಸೈನಿಕ ಶಾಲೆ ಅಮರಾವತಿ ನಗರದ ಕಡೆಟ್ ಎಂ.ಪಿ. ದೀಪಕ್ ಅತ್ಯುತ್ತಮ ಆಟಗಾರರಾಗಿ ಆಯ್ಕೆಯಾದರು.

ಈ ಸಂದರ್ಭ ಸೈನಿಕ ಶಾಲೆಯ ಹಿರಿಯ ಶಿಕ್ಷಕ ವಿಬಿನ್ ಕುಮಾರ್, ಎಲ್ಲಾ ಶಾಲೆಗಳ ತಂಡದ ವ್ಯವಸ್ಥಾಪಕರು, ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರೂ, ಎನ್‌ಸಿಸಿ ಸಿಬ್ಬಂದಿ ವರ್ಗದವರು, ದೈಹಿಕ ಶಿಕ್ಷಕ ವರ್ಗದವರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.