ಚಿಕ್ಕತ್ತೂರು ಮತಗಟ್ಟೆಯಲ್ಲಿ ಮತದಾನದ ಸಮಯ ಮುಗಿದಿದ್ದರೂ ಮತ ಚಲಾಯಿಸಲು ಸರತಿ ಸಾಲಿನಲ್ಲಿ ೧೫೦ಕ್ಕೂ ಹೆಚ್ಚು ಮತದಾರರು ನಿಂತಿದ್ದ ದೃಶ್ಯ ಕಂಡು ಬಂದಿತು. ಸಾಲಿನಲ್ಲಿ ನಿಂತಿದ್ದವರಿಗೆ ಟೋಕನ್‌ಗಳನ್ನು ನೀಡಿ ೭.೩೦ ಗಂಟೆಯವರೆಗೂ ಮತ ಚಲಾವಣೆಗೆ ಅವಕಾಶ ನೀಡಲಾಯಿತು. ತಾಂತ್ರಿಕ ತೊಂದರೆಯಿAದ ಇವಿಎಂ ಕಾರ್ಯಾಚರಣೆ ನಿಲ್ಲಿಸಿದ್ದು, ಬದಲಿ ಯಂತ್ರದ ಮೂಲಕ ಮತದಾನ ನೆರವೇರಿತು.

ಕುಶಾಲನಗರ : ಕುಶಾಲನಗರ ಮಹಿಳಾ ಸಮಾಜದ ಆವರಣದ ಮತಗಟ್ಟೆಗಳ ಮುಂಭಾಗ ಸಂಜೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಕಾಂಗ್ರೆಸ್ ಕಾರ್ಯಕರ್ತರು ಕೆಲವರು ಮತಗಟ್ಟೆ ಆವರಣದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಕಾರ್ಯಕರ್ತರನ್ನು ಚದುರಿಸಿದರು.

ಸೋಮವಾರಪೇಟೆ : ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇಗಳ್ಳೆ ಕರ್ಕಳ್ಳಿ ಗ್ರಾಮದ ಎನ್. ಸೋಮಶೇಖರ್ ಅವರ ಪುತ್ರಿ ಬಿಂದು ಅವರ ವಿವಾಹ ಪಟ್ಟಣದ ಕೊಡವ ಸಮಾಜದಲ್ಲಿ ಆಯೋಜನೆಗೊಂಡಿದ್ದು, ಹಸೆಮಣೆಗೆ ಏರುವ ಮುಂಚೆ ನೇಗಳ್ಳೆ-ಕರ್ಕಳ್ಳಿ ಶಾಲೆಯ ಬೂತ್‌ನಲ್ಲಿ ಮತ ಚಲಾಯಿಸಿದರು. ಬೆಳಿಗ್ಗೆ ೭. ೨೦ಕ್ಕೆ ಮತದಾನ ಮಾಡಿದ ನಂತರ ಮದುವೆ ಮಂಟಪಕ್ಕೆ ತೆರಳಿ ಹಸೆಮಣೆ ಶಾಸ್ತç ಮುಗಿಸಿ ಮಾಂಗಲ್ಯ ಧಾರಣೆ ಮಾಡಿದರು.

ಮಾಂಗಲ್ಯಧಾರಣೆ ನಂತರ ಮತದಾನ: ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರುಗಳಲೆ ಗ್ರಾಮದ ಬಿ.ಸಿ. ದಯಾಸಾಗರ ಹಾಗೂ ಬಿ.ಎನ್. ಪಂಕಜ ಅವರ ಪುತ್ರಿ ಡಿ. ಪ್ರಿಯಾಂಕ, ಮಾಂಗಲ್ಯಧಾರಣೆಯ ನಂತರ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜನೆಗೊಂಡಿದ್ದ ಮದುವೆ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾಂಕ, ಸಂಜೆ ೫.೪೦ರ ವೇಳೆಗೆ ನೇರುಗಳಲೆ ಬೂತ್‌ಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ನಾಪೋಕ್ಲು: ನಾಪೋಕ್ಲು ಹೋಬಳಿ ವ್ಯಾಪ್ತಿಯ ೩೧ ಮತಗಟ್ಟೆಗಳಲ್ಲಿ ಲೋಕಸಭಾ ಚುನಾವಣೆಯ ಮತದಾನ ಇಂದು ಶಾಂತಿಯುತವಾಗಿ ನಡೆಯಿತು.

ನಕ್ಸಲೈಟ್ ಪೀಡಿತ ಅತಿ ಸೂಕ್ಷö್ಮ ಪ್ರದೇಶವಾದ ಚೈಯಂಡಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊನ್ನೋಳ ಸರಕಾರಿ ಪ್ರಾಥಮಿಕ ಶಾಲಾ ಮತದಾನ ಕೇಂದ್ರ ಹಾಗೂ ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ ಸರಕಾರಿ ಶಾಲಾ ಮತದಾನ ಕೇಂದ್ರಗಳÀಲ್ಲಿ ವಿಶೇಷ ಭದ್ರತೆಯನ್ನು ಒದಗಿಸಲಾಗಿತ್ತು.

ಕರ್ನಾಟಕ ಪಬ್ಲಿಕ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಬೊಪ್ಪೆರ ಕಾವೇರಪ್ಪ(೯೮) ಮಾತನಾಡಿ ಮತ ಹಾಕಿ ಹಕ್ಕು ಚಲಾಯಿಸಿದ್ದೇನೆ. ಮತದಾನ ಮಾಡದಿದ್ದರೆ ದೇಶಕ್ಕೆ ದ್ರೋಹ ಬಗೆದಂತೆ ವೋಟು ಹಾಕಿ ನಮ್ಮ ಹಕ್ಕನ್ನು ಚಲಾಯಿಸಬೇಕು ಎಂದರು.ಬಹಿಷ್ಕಾರವನ್ನು ಹಿಂಪಡೆದು ಮತದಾನ

ಪೊನ್ನಂಪೇಟೆ: ಕಳೆದ ೩೦ ವರ್ಷಗಳಿಂದ ಗ್ರಾಮಕ್ಕೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲರಾಗಿರುವ ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಈ ಚುನಾವಣೆಯಲ್ಲಿ ಮತ ಬಹಿಷ್ಕಾರವನ್ನು ಘೋಷಿಸಿದ್ದ ವೀರಾಜಪೇಟೆ ಸಮೀಪದ ಬಿಟ್ಟಂಗಾಲ ಗ್ರಾ. ಪಂ. ವ್ಯಾಪ್ತಿಯ ಅಂಬಟ್ಟಿಯ ಮತದಾರರು ಮತಬಹಿಷ್ಕಾರವನ್ನು ಹಿಂಪಡೆದು ಶುಕ್ರವಾರ ಮತದಾನದಲ್ಲಿ ಪಾಲ್ಗೊಂಡರು.

ಮೂಲಭೂತ ಸೌಲಭ್ಯಗಳನ್ನು ಗ್ರಾಮಕ್ಕೆ ಕಲ್ಪಿಸುವವರೆಗೂ ಯಾವುದೇ ಪಕ್ಷಗಳು ಮತ್ತು ಮುಖಂಡರು ಮತಯಾಚನೆಗಾಗಿ ನಮ್ಮ ಗ್ರಾಮವನ್ನು ಪ್ರವೇಶಿಸಬೇಡಿ' ಎಂದು ಬ್ಯಾನರ್ ನಲ್ಲಿ ಬರೆದು ಗಮನ ಸೆಳೆಯಲಾಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.

ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ರಾತ್ರೋರಾತ್ರಿ ಕಾಂಗ್ರೆಸ್ ಪ್ರಮುಖರೊಂದಿಗೆ ಅಂಬಟ್ಟಿ ಗ್ರಾಮಕ್ಕೆ ತೆರಳಿ ಸ್ಥಳೀಯರ ಅಹವಾಲು ಆಲಿಸಿದರು. ಬಳಿಕ ಮಾತನಾಡಿದ ಶಾಸಕರು ಮತಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿದು ಮತದಾನದಲ್ಲಿ ಪಾಲ್ಗೊಂಡು ಹಕ್ಕು ಚಲಾಯಿಸುವಂತೆ ಮನವಿ ಮಾಡಿದರಲ್ಲದೆ ಚುನಾವಣೆಯ ನಂತರ ಅಂಬಟ್ಟಿ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದರು. ಶಾಸಕರ ಭರವಸೆಯಂತೆ ಮತ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿದ ಅಂಬಟ್ಟಿ ಗ್ರಾಮಸ್ಥರು, ಶುಕ್ರವಾರ ನಡೆದ ಮತದಾನದಲ್ಲಿ ಪಾಲ್ಗೊಂಡರು.ಕಣಿವೆ : ಕುಶಾಲನಗರದ ಕಲ್ಯಾಣ ಮಂಟಪವೊAದರಲ್ಲಿ ಮಧುವಣಗಿತ್ತಿಯೊಬ್ಬರು ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಅವರ ಪುತ್ರಿ ಬಿ.ಎನ್.ಅಪೂರ್ವ ಅವರ ವಿವಾಹ ಏಪ್ರಿಲ್ ೨೬ ರ ಮತದಾನದ ದಿನದಂದು ಇಲ್ಲಿನ ಮಾರುತಿ ಸಭಾಂಗಣದಲ್ಲಿ ನಡೆದಿತ್ತು.

ಮಧ್ಯಾಹ್ನ ವಿವಾಹದ ಧಾರ್ಮಿಕ ವಿಧಿಗಳನ್ನು ಪೂರೈಸಿದ ಮಧುವಣಗಿತ್ತಿ ಕುಶಾಲನಗರದ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು. ಈ ಸಂದರ್ಭ ಮಧುಮಗ ಧನಂಜಯ ಗುಪ್ತ ಸಾಥ್ ನೀಡಿದರು.

ಮುಳ್ಳೂರು: ಶುಕ್ರವಾರ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಶನಿವಾರಸಂತೆ-ಕೊಡ್ಲಿಪೇಟೆ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತದಾರರು ಬಿಸಿಲಿನ ತಾಪಕ್ಕೆ ಅಂಜಿ ಸಂಜೆಯ ವೇಳೆ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದರು. ಶನಿವಾರಸಂತೆಯ ೪ ಮತಗಟ್ಟೆಗಳು ಸೇರಿದಂತೆ ಆಲೂರು-ಸಿದ್ದಾಪುರ, ಮಾಲಂಬಿ, ಹೊಸಗುತ್ತಿ, ನಿಡ್ತ, ಹಾರೆಹೊಸೂರು, ಅಂಕನಹಳ್ಳಿ, ಗೋಪಾಲಪುರ, ಕೊಡ್ಲಿಪೇಟೆಯ ೫ ಮತಗಟ್ಟೆಗಳು ಸೇರಿದಂತೆ ಬೆಸೂರು, ಬ್ಯಾಡಗೊಟ್ಟ, ಹಂಡ್ಲಿ ಮತಗಟ್ಟೆಗಳಲ್ಲಿ ಮತದಾರರು ಬೆಳಿಗ್ಗೆ ೭ ಗಂಟೆಗೆ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದರು ಬೆಳಿಗ್ಗೆ ೯.೩೦ ಗಂಟೆವರೆಗೆ ಈ ವ್ಯಾಪ್ತಿಯ ಕೆಲವು ಮತಗಟ್ಟೆಗಳಲ್ಲಿ ಮತದಾನ ಚುರುಕುಗೊಂಡಿತು. ಇದರಿಂದ ಈ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಬೆಳಿಗ್ಗೆ ೯.೩೦ ಗಂಟೆಯ ಸಮಯದಲ್ಲಿ ಶೇ. ೧೩ ರಷ್ಟು ಮತದಾನವಾಗಿತ್ತು.

ಬಿಸಿಲಿನ ತಾಪ ಏರಿಕೆಯಾಗುತ್ತಿದ್ದಂತೆ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಕ್ಷೀಣಿಸುತ್ತಾ ಬಂತು. ಹಂಡ್ಲಿ, ಶನಿವಾರಸಂತೆಯ ತ್ಯಾಗರಾಜ ಕಾಲೋನಿಯ ಮತಗಟ್ಟೆಗಳಲ್ಲಿ ಬಿಸಿಲು ಹೆಚ್ಚಾಗಿದ್ದರಿಂದ ಮತದಾರರು ಸರದಿ ಸಾಲಿನಲ್ಲಿ ನಿಂತುಕೊಳ್ಳಲು ಸಾಧ್ಯವಾಗದೆ ತತ್ತರಿಸಿದರು. ಕೊಡ್ಲಿಪೇಟೆಯ ವಿವಿಧ ಮತಗಟ್ಟೆಗಳಲ್ಲೂ ಇದೆ ಸ್ಥಿತಿಯಾಗಿತ್ತು. ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಮಧ್ಯಾಹ್ನ ೧ ಗಂಟೆವರೆಗೂ ಮಂದಗತಿಯಲ್ಲಿ ಮತದಾನ ಸಾಗಿತು. ಈ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮಧ್ಯಾಹ್ನ ೧ ಗಂಟೆಗೆ ಸರಾಸರಿ ಶೇ. ೩೦ ರಷ್ಟು ಮಾತ್ರ ಮತದಾನವಾಗಿತ್ತು. ಇದೆ ಸಮಯದಲ್ಲಿ ಕೆಲವೊಂದು ಮತಗಟ್ಟೆಗಳಲ್ಲಿ ವಿರಳ ಸಂಖ್ಯೆಯಲ್ಲಿ ಮತದಾರರಿದ್ದದ್ದು ಕಂಡು ಬಂದಿತು.

ಬಿಸಿಲಿನ ತಾಪಕ್ಕೆ ಅಂಜಿದ ವಿವಿಧ ಪಕ್ಷದ ಕಾರ್ಯಕರ್ತರು ತುಂಬಾ ದೂರದಲ್ಲಿ ನೆರಳು ಇರುವಂತ ಸ್ಥಳದಲ್ಲಿ ನಿಂತುಕೊAಡು ಪ್ರಚಾರ ಮಾಡುತ್ತಿದ್ದರು. ಮಧ್ಯಾಹ್ನ ೩ ಗಂಟೆ ಮೇಲೆ ಮತಗಟ್ಟೆಗಳಲ್ಲಿ ಸ್ವಲ್ಪಮಟ್ಟಿಗೆ ಮತದಾನ ಚುರುಕುಗೊಂಡಿತು. ಶನಿವಾರಸಂತೆ ವ್ಯಾಪ್ತಿಯಲ್ಲಿ ಸಂಜೆ ೪ ಗಂಟೆ ನಂತರ ಮತದಾನ ತುಸು ಚುರುಕುಗೊಂಡಿತು. ಕೆಲವು ಮತಗಟ್ಟೆಗಳಲ್ಲಿ ವಿವಿಧ ಪಕ್ಷದ ವತಿಯಿಂದ ಮತದಾರರು ವಿಶ್ರಮಿಸಲು ಶಾಮಿಯಾನದ ವ್ಯವಸ್ಥೆ ಮಾಡಲಾಗಿತ್ತು.

ಕುಶಾಲನಗರ: ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ೨೦, ಗ್ರಾಮಾಂತರ ವ್ಯಾಪ್ತಿಯ ೩೮ ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಕುಶಾಲನಗರ ಮತಗಟ್ಟೆ ಸಂಖ್ಯೆ ೧೭೦- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ನಿಧಾನಗತಿಯಲ್ಲಿ ಮತದಾನ ಪ್ರಕ್ರಿಯೆ ನಡೆದಿದ್ದು, ಎರಡು ಗಂಟೆಗಳಿAದ ಸಾಲಿನಲ್ಲಿ ಮತದಾರರು ಕಾದರು. ನಂತರ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.

ಮತಗಟ್ಟೆ ಸಂಖ್ಯೆ ೧೭೯ರ ಮಾದಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡ ಪಾರ್ಶ್ವದಲ್ಲಿಯೂ ನಿಧಾನ ಗತಿಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಚುನಾವಣಾ ಸಿಬ್ಬಂದಿಯೊಬ್ಬರಿಗೆ ದೃಷ್ಟಿ ದೋಷ ಆರೋಪ ಕೇಳಿ ಬಂದಿದ್ದು, ಮತಗಟ್ಟೆ ಅಧಿಕಾರಿಯಿಂದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

ಗೋಣಿಕೊಪ್ಪಲು: ಗೋಣಿಕೊಪ್ಪಲುವಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಚೇತನರಿಗಾಗಿ ತರಿಸಿಲಾಗಿದ್ದ ವ್ಹೀಲ್ ಚೇರ್ ಮುರಿದು ಹೋದ ಘಟನೆ ಜರುಗಿತು. ಕೂಡಲೇ ಗ್ರಾಮ ಪಂಚಾಯಿತಿ ವತಿಯಿಂದ ನೂತನ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಯಿತು.

ಕಣಿವೆ: ಇಲ್ಲಿನ ಸೋಮಣ್ಣ ಎಂಬವರ ಪುತ್ರ ಕೆ.ಎಸ್.ಶ್ರೀನಿವಾಸ್ ಮೈಸೂರಿನ ಕಲ್ಯಾಣ ಮಂಟಪದಿAದ ಕೂಡಿಗೆಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿ ತಮ್ಮ ಜವಬ್ದಾರಿ ಮೆರೆದರು.

ಇವರೊಂದಿಗೆ ಇವರ ಪತ್ನಿ ಕಾವ್ಯಶ್ರೀ ಕೂಡ ಮೈಸೂರಿನ ಮತಗಟ್ಟೆಯಲ್ಲಿ ಮತಚಲಾಯಿಸಿ ಕೂಡಿಗೆಗೆ ಧಾವಿಸಿದರು.ಸಿದ್ದಾಪುರ ವ್ಯಾಪ್ತಿಯಲ್ಲಿ ಮಂದಗತಿಯ ಮತದಾನ

ಸಿದ್ದಾಪುರ: ಸಿದ್ದಾಪುರ ವ್ಯಾಪ್ತಿಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನವು ಮಂದಗತಿಯಿAದ ಸಾಗಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗುಂಪು ಗುಂಪಾಗಿ ಮತದಾನ ಮಾಡಲು ಬರುತ್ತಿದ್ದ ಮತದಾರರು ಈ ಬಾರಿ ಅಷ್ಟೊಂದು ಸಂಖ್ಯೆಯಲ್ಲಿ ಬರುತ್ತಿರುವುದು ಕಂಡುಬರಲಿಲ್ಲ. ಉರಿಬಿಸಿಲ ನಡುವೆ ಮತದಾರರು ತಮ್ಮ ಮತಗಳನ್ನು ಚಲಾಯಿಸಲು ನಿಧಾನ ಗತಿಯಲ್ಲಿ ಬರುತ್ತಿದ್ದರು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಉತ್ಸಾಹದಿಂದ ಮತ ಚಲಾಯಿಸಲು ಬಂದಿದ್ದರು. ಮತದಾರರನ್ನು ಮನವೊಲಿಸುತ್ತಿದ್ದ ರಾಜಕೀಯ ಪಕ್ಷದ ಕಾರ್ಯಕರ್ತರು ಕೂಡ ಕಡಿಮೆ ಸಂಖ್ಯೆಯಲ್ಲಿ ಪ್ರಚಾರ ಮಾಡುತ್ತಿರುವುದು ಮೇಲ್ನೊಟಕ್ಕೆ ಕಂಡುಬAತು. ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.