ಮಡಿಕೇರಿ, ಏ. ೨೬: ಹಾಕಿಪಟು ಮಾಜಿ ಒಲಂಪಿಯನ್ ಡಾ. ಎ.ಬಿ. ಸುಬ್ಬಯ್ಯ ಅವರ ಪೋಷಕರಾದ ೯೧ರ ಪ್ರಾಯದ ಅಂಜಪರವAಡ ಸಿ. ಬೋಪಯ್ಯ ಹಾಗೂ ೯೦ರ ಪ್ರಾಯದ ಮಾಯಮ್ಮ ದಂಪತಿ, ಮಡಿಕೇರಿಯ ಸಂತ ಜೋಸೆಫರ ಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಿ ಪ್ರೇರಣೆಯಾದರು.

ದ.ಕೊಡಗಿನ ಕೆಲವು ಭಾಗಗಳಲ್ಲಿ ಕಾಡಾನೆಗಳ ಉಪಟಳ ಇರುವುದನ್ನು ಮನಗಂಡ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆಯಾಕಟ್ಟಿನ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ತಡರಾತ್ರಿಯಲ್ಲಿಯೂ ಕರ್ತವ್ಯ ನಿರ್ವಹಿಸಿದರು.

ಬಿ.ಶೆಟ್ಟಿಗೇರಿ ಬೂತ್‌ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡಿದರು. ಮತದಾನಕ್ಕೆ ಮುಂಜಾನೆಯ ವೇಳೆ ಜನರು ಆಗಮಿಸುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಕಾಡಾನೆಗಳ ಓಡಾಟದ ಬಗ್ಗೆ ವಿಶೇಷ ನಿಗಾ ವಹಿಸಿದ್ದರು.ಮಡಿಕೇರಿ : ಮಡಿಕೇರಿಯ ಹಿರಿಯ ನಾಗರಿಕರಾದ ಉದ್ಯಮಿ ಬೊಟ್ಟೋಳಂಡ ಮಿಟ್ಟು ಚಂಗಪ್ಪ ಅವರು ೩೧ನೆಯ ಬಾರಿಗೆ ತಮ್ಮ ಮತಗಟ್ಟೆಯಲ್ಲಿ ಪ್ರಥಮ ಮತಚಲಾಯಿಸುವ ಮೂಲಕ ಮಾದರಿಯಾದರು. ೧೯೬೨ ರಿಂದ ಇವರು ಎಲ್ಲಾ ಚುನಾವಣೆಗಳಲ್ಲೂ ಪ್ರಥಮ ವ್ಯಕ್ತಿಯಾಗಿ ಮತಚಲಾಯಿಸುತ್ತಾ ಬಂದಿರುವುದು ವಿಶೇಷವಾಗಿದ್ದು, ಈ ಬಾರಿಯೂ ಇದನ್ನು ಪಾಲಿಸಿದರು. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಹಬ್ಬವಿದ್ದಂತೆ,ಮಡಿಕೇರಿ: ಮಡಿಕೇರಿ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಮತದಾನಕ್ಕೆ ಮತದಾರರು ಉತ್ಸಾಹ ತೋರಿದರು. ಗಾಳಿಬೀಡು, ವಣಚಲು, ಕಾಲೂರು, ೧ ಮತ್ತು ೨ನೇ ಮೊಣ್ಣಂಗೇರಿ , ಹೆಬ್ಬೆಟ್ಟಗೇರಿ, ಕೆ.ನಿಡುಗಣೆ, ಕೆ. ಬಾಡಗ, ಕರ್ಣಂಗೇರಿ, ದೇವಸ್ತೂರು, ಕಡಗದಾಳು ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಬೆಳಗ್ಗಿನಿಂದಲೇ ಮತದಾನದಲ್ಲಿ ಉತ್ಸಾಹ ಕಂಡುಬAತು. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತಗಟ್ಟೆಯಲ್ಲಿ ಕಂಡುಬAದರು. ಮಕ್ಕಳಾದಿಯಾಗಿ ಆಗಮಿಸಿ ಹಕ್ಕು ಚಲಾಯಿಸಿದ್ದು, ಗಮನಾರ್ಹವಾಗಿತ್ತು. ಮತಚಲಾಯಿಸುವ ಮೂಲಕ ಇದನ್ನು ಸಂಭ್ರಮಿಸಬೇಕು ಎಂಬ ಸಲಹೆ ಇವರದ್ದು.ಬಸ್‌ಗಳಿಲ್ಲದೆ ಮತ ವಂಚಿತರು...!

ಮಡಿಕೇರಿ : ಜಿಲ್ಲೆಯ ಬಹುತೇಕ ಮಂದಿ ಹೊರಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ವಿದ್ಯಾರ್ಜನೆ, ಉದ್ಯೋಗ ನಿಮಿತ್ತ ಮೈಸೂರು, ಬೆಂಗಳೂರು, ಹಾಸನ, ಮಂಗಳೂರು ಹೀಗೆ ಬೇರೆ - ಬೇರೆ ಕಡೆಗಳಲ್ಲಿ ನೆಲೆಸಿದ್ದಾರೆ. ಅವರುಗಳು ತಮ್ಮ ಹಕ್ಕು ಚಲಾಯಿಸಲೆಂದು ಜಿಲ್ಲೆಯತ್ತ ಹೊರಟಿದ್ದವರಿಗೆ ಬಸ್ ಸೌಕರ್ಯವಿಲ್ಲದೆ, ನಿರಾಸೆ ಅನುಭವಿಸುವಂತಾಯಿತು.

ವಾಹನ ವ್ಯವಸ್ಥೆಯುಳ್ಳವರು ಹೇಗೋ ವಾಹನಗಳಲ್ಲಿ ಬಂದು ತಲುಪಿದ್ದಾರೆ. ಕೆಲ ಯುವಕರು ವಿಧಿಯಿಲ್ಲದೆ ತಮ್ಮ ಬೈಕ್, ಬುಲ್ಲೆಟ್‌ಗಳಲ್ಲಿ ಆಗಮಿಸಿದ್ದಾರೆ. ಇನ್ನೂ ಕೆಲವರು ದುಬಾರಿ ಹಣ ತೆತ್ತು ಟ್ಯಾಕ್ಸಿ, ಖಾಸಗಿ ಬಸ್‌ಗಳಲ್ಲಿ ಬಂದಿದ್ದಾರೆ. ಆದರೆ ಬಹಳಷ್ಟು ಮಂದಿ ಬಸ್ ಸಿಗದೆ ಬಾರದೆ ಸುಮ್ಮನಾಗಿದ್ದಾರೆ. ಬಹುತೇಕ ಸಾರಿಗೆ ಸಂಸ್ಥೆ ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಂಡಿದ್ದರಿAದ ಹಲವಾರು ಮಂದಿ ಮತದಾನದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಎಲ್ಲಾ ಕಡೆಗಳಲ್ಲಿಯೂ ಅಸಮಾಧಾನದ ಮಾತುಗಳು ಕೇಳಿಬರುತ್ತಿದ್ದವು.

ವೀರಾಜಪೇಟೆ : ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ದುಬಾರೆ ಅರಣ್ಯ ನಿರೀಕ್ಷಣಾ ಮಂದಿರದಲ್ಲಿ ಸಾಕಾನೆ ಶಿಬಿರದ ಸಿಬ್ಬಂದಿ ಮತ ಚಲಾವಣೆ ಮಾಡಿದರು.

ಒಟ್ಟು ೧೯೪ ಮತದಾರರು ಮತದಾನದಲ್ಲಿ ತೊಡಗಿಸಿಕೊಂಡರು. ಚುನಾವಣಾ ಬೂತ್ ಇದ್ದ ಹಿನ್ನೆಲೆಯಲ್ಲಿ ಸಾಕಾನೆ ಶಿಬಿರದಲ್ಲಿ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿತ್ತು. ಬಹುತೇಕ ಕಾವಾಡಿ-ಮಾವುತರಿರುವ ಈ ಮತಗಟ್ಟೆಯಲ್ಲಿ ಅವರುಗಳ ಕುಟುಂಬಸ್ಥರೂ ಆಗಮಿಸಿ ಮತದಾನ ಮಾಡಿದರು.ಮಡಿಕೇರಿ: ಮಡಿಕೇರಿ ತಾಲೂಕಿನ ಸೂಕ್ಷö್ಮ ಮತಗಟ್ಟೆಯಲ್ಲಿ ಒಂದಾದ ವಣಚಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಶಾಂತಿಯುತ ಮತದಾನ ನಡೆಯಿತು. ಆದರೆ, ಮೂಲಭೂತ ಸೌಲಭ್ಯ ಇಲ್ಲದೆ ಸಿಬ್ಬಂದಿಗೆ ಸ್ಥಳೀಯರು ನೀರು ಒದಗಿಸುವ ಮೂಲಕ ಸಹಾಯ ಮಾಡಿದರು. ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಸಿಬ್ಬಂದಿ, ಕೆ.ಎಸ್.ಆರ್.ಪಿ. ತುಕಡಿ ಸೇರಿ ೮ ಮಂದಿ ಸಿಬ್ಬಂದಿ ಭದ್ರತೆಗಾಗಿ ನೇಮಕಗೊಂಡಿದ್ದರು. ಕೆಲ ವರ್ಷಗಳ ಹಿಂದೆ ಮತಗಟ್ಟೆಯಿಂದ ಸ್ವಲ್ಪ ದೂರದಲ್ಲಿ ನಕ್ಸಲರು ಕಂಡುಬAದಿದ್ದರು. ಸೂಕ್ಷ್ಮ ಪ್ರದೇಶ ಆಗಿರುವ ಕಾರಣಕ್ಕೆ ಹೆಚ್ಚಿನ ಭದ್ರತೆಯ ಅವಶ್ಯಕತೆ ಇಲ್ಲಿಗೆ ಇತ್ತು ಎಂದು ಸಾರ್ವಜನಿಕರು ತಿಳಿಸಿದರು.

೧೯೪ ಮತದಾರರನ್ನು ಹೊಂದಿರುವ ಈ ಬೂತ್‌ನಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ. ಪಂಚಾಯಿತಿAದಲೂ ಪರ್ಯಾಯ ಕ್ರಮವಾಗಿಲ್ಲ. ಇದರಿಂದ ಸಿಬ್ಬಂದಿ ವರ್ಗಕ್ಕೆ ಕಷ್ಟವಾಯಿತು. ಮನೆಯಿಂದಲೇ ಬಿಂದಿಗೆ ಮೂಲಕ ನೀರು ಪೂರೈಸಲಾಗಿದೆ. ವಣಚಲಿನಿಂದ ಮಡಿಕೇರಿಗೆ ನೀರು ಹೋಗುತ್ತದೆ. ಇಲ್ಲಿಗೆ ನೀರಿಲ್ಲದ ಪರಿಸ್ಥಿತಿ ಇದೆ. ಊಟವೂ ಸರಿಯಾದ ಸಮಯಕ್ಕೆ ಬಾರದೆ ಸಿಬ್ಬಂದಿ ವರ್ಗ ಪರದಾಡಬೇಕಾಯಿತು ಎಂದು ಸ್ಥಳೀಯ ನಿವಾಸಿ ಅಯ್ಯರಣಿಯಂಡ ಮಂಜು ತಿಮ್ಮಯ್ಯ ಹೇಳಿದರು.

ಮುಚ್ಚಿಸಿದ್ದ ಅಂಗಡಿಯನ್ನು ತೆರೆಸಿದ ಡಿ.ಸಿ.

ಮಡಿಕೇರಿ: ಇದೇ ಮೊದಲ ಬಾರಿಗೆ ಮಡಿಕೇರಿಯ ಮಂಗೇರಿರ ಮುತ್ತಣ್ಣ ವೃತ್ತದ ಕೆಲವು ಅಂಗಡಿಗಳನ್ನು ಮತಕೇಂದ್ರದ ೨೦೦ ಮೀಟರ್ ವ್ಯಾಪ್ತಿಗೆ ಬರುತ್ತದೆ ಎಂಬ ಕಾರಣ ಹೇಳಿ ಪೊಲೀಸರು ಬೆಳಿಗ್ಗೆ ಅಂಗಡಿಯನ್ನು ಮುಚ್ಚಿಸಿದ್ದರು. ಇದರಿಂದ ಹೂವು, ಹೊಟೇಲ್, ದಿನಸಿ ಮಳಿಗೆ, ಬೇಕರಿಗಳು ಮುಚ್ಚಲ್ಪಟ್ಟು ವ್ಯಾಪಾರಿಗಳು ತೊಂದರೆಗೆ ಒಳಗಾದರು.

ನಂತರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ವಿಷಯ ತಿಳಿದು ಸ್ಥಳಕ್ಕಾಗಮಿಸಿ ಅಂಗಡಿಯನ್ನು ತೆರೆಸಿ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂದರ್ಭ ಉಪವಿಭಾಗಾಧಿಕಾರಿ ವಿನಾಯಕ್ ನರ್ವಾಡೆ ಇದ್ದರು. ಬಳಿಕ ವೃತ್ತ ನಿರೀಕ್ಷಕ ರಾಜು ಆಗಮಿಸಿ ಅಂಗಡಿಗಳ ಎದುರು ರಾಜಕೀಯ ಪಕ್ಷಗಳಿಗೆ ಪ್ರಚಾರ ನಡೆಸಲು ಅವಕಾಶ ನೀಡಬಾರದು ಎಂದು ತಾಕೀತು ಮಾಡಿದರು.

ಮುಚ್ಚಿಸಿದ್ದ ಅಂಗಡಿಯನ್ನು ತೆರೆಸಿದ ಡಿ.ಸಿ.

ಮಡಿಕೇರಿ: ಇದೇ ಮೊದಲ ಬಾರಿಗೆ ಮಡಿಕೇರಿಯ ಮಂಗೇರಿರ ಮುತ್ತಣ್ಣ ವೃತ್ತದ ಕೆಲವು ಅಂಗಡಿಗಳನ್ನು ಮತಕೇಂದ್ರದ ೨೦೦ ಮೀಟರ್ ವ್ಯಾಪ್ತಿಗೆ ಬರುತ್ತದೆ ಎಂಬ ಕಾರಣ ಹೇಳಿ ಪೊಲೀಸರು ಬೆಳಿಗ್ಗೆ ಅಂಗಡಿಯನ್ನು ಮುಚ್ಚಿಸಿದ್ದರು. ಇದರಿಂದ ಹೂವು, ಹೊಟೇಲ್, ದಿನಸಿ ಮಳಿಗೆ, ಬೇಕರಿಗಳು ಮುಚ್ಚಲ್ಪಟ್ಟು ವ್ಯಾಪಾರಿಗಳು ತೊಂದರೆಗೆ ಒಳಗಾದರು.

ನಂತರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ವಿಷಯ ತಿಳಿದು ಸ್ಥಳಕ್ಕಾಗಮಿಸಿ ಅಂಗಡಿಯನ್ನು ತೆರೆಸಿ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂದರ್ಭ ಉಪವಿಭಾಗಾಧಿಕಾರಿ ವಿನಾಯಕ್ ನರ್ವಾಡೆ ಇದ್ದರು. ಬಳಿಕ ವೃತ್ತ ನಿರೀಕ್ಷಕ ರಾಜು ಆಗಮಿಸಿ ಅಂಗಡಿಗಳ ಎದುರು ರಾಜಕೀಯ ಪಕ್ಷಗಳಿಗೆ ಪ್ರಚಾರ ನಡೆಸಲು ಅವಕಾಶ ನೀಡಬಾರದು ಎಂದು ತಾಕೀತು ಮಾಡಿದರು.

ಸಖಿ ಬೂತ್, ಸಾಂಪ್ರದಾಯಿಕ ಮತಗಟ್ಟೆ, ದಿವ್ಯಾಂಗ ಮತಗಟ್ಟೆ, ಯುವ ಮತದಾರರ ಬೂತ್ ರೀತಿಯ ೨೩ ವಿಶೇಷ ಮತಗಟ್ಟೆಗಳನ್ನು ಈ ಬಾರಿ ರಚನೆ ಮಾಡಲಾಗಿತ್ತು. ಆಕರ್ಷಕವಾಗಿ ಇವುಗಳನ್ನು ಸಿಂಗಾರ ಮಾಡಿ ಮತದಾರರನ್ನು ಸೆಳೆಯುವ ಪ್ರಯತ್ನವಾಯಿತು.

‘ಥೀಮ್ ಬೇಸ್ಡ್’ ಮತಗಟ್ಟೆಗಳಾಗಿ ಕುಶಾಲನಗರದ ರಂಗಸಮುದ್ರ, ಮಡಿಕೇರಿಯ ಹಿಲ್ ರಸ್ತೆ, ಪೊನ್ನಂಪೇಟೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯನ್ನು ಮಾಡಲಾಗಿತ್ತು. ಇಲ್ಲಿ ಕಾಫಿಯ ಹಿನ್ನೆಲೆ ಬಿಂಬಿಸುವ ಪೆಂಟಿAಗ್‌ಗಳನ್ನು ಮಾಡಿ ವರ್ಣರಂಜಿತಗೊಳಿಸಿ ಬರುವ ಮತದಾರರಿಗೆ ಕುಡಿಯಲು ಕಾಫಿ ವ್ಯವಸ್ಥೆಯನ್ನೂ ಮಾಡಿದ್ದು ಮತ್ತೊಂದು ವಿಶೇಷವಾಗಿತ್ತು.

ಗಿರಿಜನರ ಬದುಕು ಪರಿಚಯಿಸುವ ನಿಟ್ಟಿನಲ್ಲಿ ಮಾಲಂಬಿ, ಹೇರೂರು, ಪೊನ್ನಂಪೇಟೆಯ ಸಿ.ಬಿ. ಹಳ್ಳಿ, ಹೆಬ್ಬಾಲೆ, ನಾಗರಹೊಳೆ, ತಿತಿಮತಿ ಬೂತ್‌ಗಳನ್ನು ಸಾಂಪ್ರದಾಯಿಕ ಮತಗಟ್ಟೆಗಳಾಗಿ ಮಾಡಲಾಗಿತ್ತು. ಇಲ್ಲಿ ವರ್ಣ ಕಲಾಪ್ರಕಾರದ ಚಿತ್ರಗಳ ಮೂಲಕ ಬುಡಕಟ್ಟು ಸಮುದಾಯ ಜೀವನ ಚಿತ್ರಿಸಲಾಗಿತ್ತು. ಯುವ ಸಿಬ್ಬಂದಿ ತಂಡದಿAದ ನಿರ್ವಹಣೆಯಾಗುವ ಯುವ ಬೂತ್‌ಗಳನ್ನು ಆರ್ಜಿ ಕಲ್ಲುಬಾಣೆಯ ಬದ್ರಿಯಾ, ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ವಿಶೇಷ ಚೇತನರಿಂದ ನಿರ್ವಹಣೆಯಾಗುವ ಮತಗಟ್ಟೆಯಾಗಿ ಮಡಿಕೇರಿ ಸಂತ ಮೈಕಲರ ಶಾಲೆ, ವೀರಾಜಪೇಟೆ ಸಂತ ಅನ್ನಮ್ಮ ಶಾಲೆಯನ್ನು ಮಾಡಲಾಗಿತ್ತು.

ಮಹಿಳೆಯರಿಂದ ನಿರ್ವಹಣೆಯಾಗುವ ಸಖಿ ಮತಗಟ್ಟೆ (ಪಿಂಕ್ ಬೂತ್) ಮಡಿಕೇರಿ ಎ.ವಿ. ಶಾಲೆ, ಶಿರಂಗಾಲ ಸರಕಾರಿ ಪಿ.ಯು. ಕಾಲೇಜು, ಮಡಿಕೇರಿ ಎಫ್‌ಎಂಸಿ ಕಾಲೇಜು, ಸೋಮವಾರಪೇಟೆ ಎಸ್.ಜಿ.ಎಂ. ಬಾಲಕಿಯರ ಪ್ರೌಢಶಾಲೆ, ಮುಳ್ಳುಸೋಗೆ ಹಿರಿಯ ಪ್ರಾಥಮಿಕ ಶಾಲೆ, ತಿತಿಮತಿ ಗ್ರಾ.ಪಂ. ಕಚೇರಿ, ವೀರಾಜಪೇಟೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಪೊನ್ನಂಪೇಟೆ ಜೂನಿಯರ್ ಕಾಲೇಜು, ಗೋಣಿಕೊಪ್ಪ ಮಹಿಳಾ ಸಮಾಜ ಕಟ್ಟಡ, ವೀರಾಜಪೇಟೆ ಜಯಪ್ರಕಾಶ್ ಬಾಲಕಿಯರ ಪ್ರೌಢಶಾಲೆಯಲ್ಲಿ ತೆರೆಯಲಾಗಿತ್ತು.