ಸುಂಟಿಕೊಪ್ಪ, ಏ. ೨೩: ಸುಂಟಿಕೊಪ್ಪದಲ್ಲಿ ವಿಪಿ ಯೋಧ ಕ್ರಿಯೇಟಿವ್ ಅಕಾಡೆಮಿ ಮಾರ್ಷಲ್ ಆರ್ಟ್ಸ್ ಅಂಡ್ ಫಿಟ್ನೆಸ್ ವತಿಯಿಂದ ಆಯೋಜಿಸಲಾದ ಕರಾಟೆ ಬ್ಲಾö್ಯಕ್ ಬೆಲ್ಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಹಾಗೂ ಬ್ಲಾö್ಯಕ್ ಬೆಲ್ಟ್ಗಳನ್ನು ವಿತರಿಸಲಾಯಿತು.

ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು ೪೦ ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಸತೀಶ್-ಪ್ರಶಾಂತಿನೀ ದಂಪತಿಯ ಪುತ್ರ ಅಕ್ಷಯ್ ಕೆ.ಎಸ್, ೭ನೇ ಹೊಸಕೋಟೆ ನಿವಾಸಿ ಶ್ರೀಧರ್ ಎಚ್.ಎನ್ ಹಾಗೂ ಅನಿತಾ ದಂಪತಿಯ ಪುತ್ರ ಅಂಕಿತ್ ಎಸ್, ಕೊಡಗರಹಳ್ಳಿ ಅಂದಗೋವೆಯ ವಾಲಂಡ ಕಾಶಿಯಪ್ಪ ಹಾಗೂ ವಾಲಂಡ ಗೌರಮ್ಮ ಅವರ ಪುತ್ರಿ ವಾಲಂಡ ಕೆ. ಹರಿಪ್ರಿಯಾ ಅವರುಗಳು ಬ್ಲಾö್ಯಕ್ ಬೆಲ್ಟ್ ಪಡೆದುಕೊಂಡರು. ಇವರಿಗೆ ರೆನ್ಸಿ ಬಿ.ಎಂ ಮುಖೇಶ್ ಹಾಗೂ ರೆನ್ಸಿ ಅವರು ತರಬೇತಿಯನ್ನು ನೀಡಿರುತ್ತಾರೆ.