ಚೆಟ್ಟಳ್ಳಿ, ಏ. ೨೩: ಐತಿಹಾಸಿಕ ಹಿನ್ನೆಲೆಯೊಂದಿಗೆ ವರ್ಷಂಪ್ರತಿ ಜರುಗುವ ಹತ್ತು ಹಲವಾರು ವಿಶೇಷತೆಯ ಚೆಂಬೆಬೆಳ್ಳೂರು ಬೋಡ್ ನಮ್ಮೆ ಸಂಭ್ರಮದೊAದಿಗೆ ಜರುಗಿತು. ಮೈಗೆ ಬಣ್ಣ ಹಚ್ಚಿ ನಿಜವಾದ ವ್ಯಾಘ್ರÀ್ರನಂತೆ ಘರ್ಜಿಸುವ ಹುಲಿವೇಷದಾರಿಗಳು, ದೇವರಿಗೆ ಪ್ರಿಯವಾದ ದೋಳ್ ಪಾಟ್, ಕೆಸರನ್ನೆಲ್ಲ ಮೈಗೆ ಹಚ್ಚಿಕೊಂಡ ಬಂಡ್ ಕಳಿ (ಕೆಸರು ವೇಷ), ಹುಲ್ಲನ್ನೆಲ್ಲ ಹೊದ್ದುಕೊಂಡ ಪಿಲ್ಲ್ಭೂತ, ಕಾಪಳ, ವೇಷದಾರಿಗಳೆಲ್ಲ ದೇವನೆಲೆಯಲ್ಲಿ ಸೇರಿ ಹಿರಿಯರು, ಕಿರಿಯರೆಲ್ಲ ದೇವರ ನೆಲೆಯ ಸುತ್ತಲೂ ಕುಣಿಯುತಾ ಪ್ರದಕ್ಷಿಣೆ ಬಂದು ಹರಕೆ ಕಾಣಿಕೆಯನ್ನು ದೇವರಿಗೆ ಅರ್ಪಿಸುವ ಕೊಡಗಿನ ವಿಶಿಷ್ಟ ರೀತಿಯ ಪ್ರಸಿದ್ದಿ ಪಡೆದ ಚೆಂಬೆಬೆಳ್ಳೂರು ಭದ್ರಕಾಳಮ್ಮೆ ತಾಯಿ ಬೋಡು ಹಬ್ಬದ ದೃಶ್ಯ ವಿಶೇಷ ಗಮನ ಸೆಳೆಯಿತು.

ಹಲವು ಹುಲಿವೇಷದ ತಂಡಗಳು ಗಮನ ಸೆಳೆದರೆ ವಿವಿಧ ಬಗೆಯ ಹೆಣ್ಣಿನ ವೇಷ, ಗಗನ ಸಖಿಯರ ತಂಡ, ಲಂಬಾಣಿ ವೇಷ, ರಾಮಲಕ್ಷö್ಮಣರು, ರಾಜಸ್ತಾನಿ ನೃತ್ಯ ಇತ್ಯಾದಿ ವೈಭವ ಕಣ್ಮನ ಸೆಳೆಯಿತು.

ದೇವಾಲಯದ ಸಾಂಪ್ರದಾಯಿಕ ಆಚರಣೆಯಂತೆ ಇದೇ ತಾ. ೧೪ರ ಬೆಳಿಗ್ಗೆ ಊರಿನವರೆಲ್ಲ ದೇವರ ನೆಲೆಯಲ್ಲಿ ಸೇರಿ ಹಬ್ಬಕಟ್ಟು ಬೀಳಲಾಗಿತ್ತು. ಅಂದಿನಿAದ ಕಟ್ಟು ಮುಗಿಯುವರೆಗೂ ಮದು ಮಾಂಸ ಸೇವನೆ, ಮರ ಕಡಿಯುವುದು ನಿಷೇಧದ ನಿಯಮವನ್ನೆಲ್ಲ ಪಾಲಿಸಲಾಗಿದ್ದು. ತಾ. ೨೧ರಂದು ಪಟ್ಟಣಿ ಹಬ್ಬ.

ಪೊದಕೇರಿ, ಪೊದಕೋಟೆ ಹಾಗೂ ನಡಿಕೇರಿ ಮೂರು ಕೇರಿಗಳ ಬಿದಿರಿನ ಕೃತಕ ಕುದುರೆಯನ್ನು ದೇವಾಲಯಕ್ಕೆ ಸಾಂಪ್ರದಾಯಬದ್ಧವಾಗಿ ತಂದು ದೇವರಿಗೆ ಭಕ್ತಿಯನ್ನು ಸಮರ್ಪಿಸಿ ದೇವಾಲಯದ ಹೊರಗಡೆ ಕುದುರೆಯನ್ನು ಬಿಚ್ಚಿಡಲಾಯಿತು.

ತಾ. ೨೨ರಂದು ರಾತ್ರಿ ಊರಿನವರೆಲ್ಲ ಸೇರಿ ವಿವಿಧ ವೇಷಧರಿಸಿ ಊರಿನ ಪ್ರತಿ ಮನೆ ಮನೆಗಳಿಗೂ ತೆರಳಿ ಮನೆಯವರ ಸತ್ಕಾರವನ್ನು ಪಡೆದರು. ತಾ. ೨೩ರ ಮಂಗಳವಾರ ಸಂಜೆ ೪ ಗಂಟೆಗೆ ವೇಷದಾರಿಗಳು ತಮಟೆ ವಾದ್ಯಕ್ಕೆ ಹೆÀಜ್ಜೆ ಹಾಕುತ್ತಾ ದೇವಾಲಯಕ್ಕೆ ತಂಡೋಪತAಡವಾಗಿ ಬಂದು ದೇವರ ನೆಲೆಯಲ್ಲಿ ಭಕ್ತಿಯನ್ನು ಅರ್ಪಿಸಿದರು.

ಹಿಂದೆ ೧೦೧ ಕುಟುಂಬಗಳಿದ್ದು ಅತೀ ದೊಡ್ಡ ಊರೆಂಬ ಹೆಗ್ಗಳಿಕೆ ಇತ್ತು. ಸುಮಾರು ೯೦೦ ವರ್ಷಗಳ ಇತಿಹಾಸ ಹೊಂದಿರುವ ಚೆಂಬೆಬೆಳ್ಳೂರಿನ ಉಗ್ರರೂಪಿಣಿಯಾದ ಭದ್ರಕಾಳಿ ಹಿಂದೆ ಅಜ್ಜಿಯ ರೂಪದಲ್ಲಿ ಗ್ರಾಮಕ್ಕೆ ಬಂದಾಗ ಚೇಂದAಡ ಕುಟುಂಬದವರು ನೆಲೆ ಕರುಣಿಸಿದರು. ನಂತರದಲ್ಲಿ ದೇವರೆಂದು ಊರಿನವರಿಗೆ ಅರಿವಾಗಿ ನೆಲೆ ನೀಡಿದರೆಂದೂ ಪುರಾತನ ಕಾಲದಲ್ಲಿ ಈ ನೆಲೆಯಲ್ಲಿ ಮನುಷ್ಯರನ್ನು ಬಲಿ ನೀಡುತ್ತಿದ್ದ ಬಗ್ಗೆ ಹಿರಿಯರು ಹೇಳುತ್ತಾರೆ. ದೇವರ ಶಕ್ತಿ ಅಪಾರ ಶಕ್ತಿನೆಲೆಯಾಗಿದ್ದು ಇಲ್ಲಿ ಬೇಡಿಕೊಂಡದೆಲ್ಲ ನೆರವೇರಿದ ಉದಾರಣೆಗಳು ಬಹಳಷ್ಟಿದೆ. ಜೊತೆಗೆ ಹಿಂದಿನಿAದÀ ನಡೆದು ಬಂದ ಸಾಂಪ್ರದಾಯಿಕ ಉತ್ಸವದ ಆಚರಣೆಗೆ ಊರಿನವರು ಎಲ್ಲೇ ಇದ್ದರೂ ಬಂದು ವಿವಿಧ ವೇಷಧÀರಿಸಿ ಹರಕೆ ತೀರಿಸುತ್ತಾರೆ. -ಪುತ್ತರಿರ ಕರುಣ್ ಕಾಳಯ್ಯ