ಗೋಣಿಕೊಪ್ಪ ವರದಿ, ಏ. ೨೩: ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ೧೪ ತಂಡಗಳು ಗೆದ್ದು ಬೀಗಿದವು. ಅತಿಥೇಯ ಅರಮಣಮಾಡ ಶುಭಾರಂಭ ಮಾಡಿತು.

ಮಹಿಳೆಯರ ವಿಭಾಗ ; ಅಚ್ಚಪಂಡ ತಂಡಕ್ಕೆ ಕಾಂಡAಡ ವಿರುದ್ದ ೭ ವಿಕೆಟ್ ಜಯ ದೊರೆಯಿತು. ಅಚ್ಚಪಂಡ ೩ ವಿಕೆಟ್ ಕಳೆದುಕೊಂಡು ೪೭ ರನ್, ಕಾಂಡAಡ ೩ ವಿಕೆಟ್ ನಷ್ಟಕ್ಕೆ ೨೫ ರನ್ ದಾಖಲಿಸಿತು. ಕೊಂಗAಡಕ್ಕೆ ಮೂಕಳೇರ ವಿರುದ್ದ ೯ ವಿಕೆಟ್ ಜಯ ದೊರೆಯಿತು. ಕೊಂಗAಡ ೪೧ ರನ್ ದಾಖಲಿಸಿತು. ಮೂಕಳೇರ ೩ ವಿಕೆಟ್‌ಗೆ ೩೩ ರನ್ ಗಳಿಸಲಷ್ಟೆ ಶಕ್ತವಾಯಿತು. ಕಡೇಮಾಡ ತಂಡವು ಕೊಣಿಯಂಡ ವಿರುದ್ದ ೧೮ ರನ್‌ಗಳ ಗೆಲುವ ಪಡೆದುಕೊಂಡಿತು. ಕಡೇಮಾಡ ವಿಕೆಟ್ ಕಳೆದುಕೊಳ್ಳದೆ ೪೮ ರನ್ ಗುರಿ ನೀಡಿತು. ಕೊಣಿಯಂಡ ೨೯ ರನ್ ಗಳಿಸಿತು. ಬಾಚಿನಾಡಂಡ ತಂಡವು ಕೋಟ್ರಮಾಡ ತಂಡವನ್ನು ೧೦ ವಿಕೆಟ್‌ಗಳಿಂದ ಸೋಲಿಸಿತು. ಕೋಟ್ರಮಾಡ ವಿಕೆಟ್ ಕಳೆದುಕೊಳ್ಳದೆ ೩೮ ರನ್, ಬಾಚಿನಾಡಂಡ ೩೯ ರನ್ ಗಳಿಸಿತು.

ಪುರುಷರ ಫಲಿತಾಂಶ: ಅತಿಥೇಯ ಅರಮಣಮಾಡಕ್ಕೆ ಚೋವಂಡ ವಿರುದ್ದ ೯ ವಿಕೆಟ್ ಗೆಲುವು ದೊರೆಯಿತು. ಚೋವಂಡ ೮ ವಿಕೆಟ್‌ಗೆ ೫೫ ರನ್, ಅರಮಣಮಾಡ ೧ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಅರಮಣಮಾಡ ಬೋಪಯ್ಯ ೨೪, ಚೋವಂಡ ಪೊನ್ನಣ್ಣ ೧೬ ರನ್ ಗಳಿಸಿದರು.

ಮಂಡAಗಡ ತಂಡಕ್ಕೆ ಆದೇಂಗಡ ವಿರುದ್ದ ೯ ವಿಕೆಟ್ ಜಯ ದೊರೆಯಿತು. ಆದೇಂಗಡ ೨ ವಿಕೆಟ್‌ಗೆ ೬೭ ರನ್ ದಾಖಲಿಸಿತು. ಮಂಡAಗಡ ೧ ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು. ಮಂಡAಗಡ ಚಿರಣ್ ೩೮ ರನ್, ಆದೇಂಗಡ ಮಂಜು ೩೨ ರನ್ ದಾಖಲಿಸಿದರು. ಅಚ್ಚಪಂಡ ನಂದಿನೆರವAಡ ತಂಡವನ್ನು ೧೦ ವಿಕೆಟ್‌ಗಳಿಂದ ಮಣಿಸಿತು. ನಂದಿನೆರವAಡ ೬ ವಿಕೆಟ್‌ಗೆ ೪೧ ರನ್, ಅಚ್ಚಪಂಡ ೨ ಓವರ್‌ಗಳಲ್ಲಿ ಪಂದ್ಯ ಮುಗಿಸಿತು. ಅಚ್ಚಪಂಡ ಅಯ್ಯಪ್ಪ ೨೩ ರನ್, ನಂದಿನೆರವAಡ ಕರಣ್ ೧೦ ರನ್ ದಾಖಲಿಸಿದರು.

ಚೆರುಮಂದAಡ ತಂಡಕ್ಕೆ ಕಾಳಮಂಡ ವಿರುದ್ದ ೪೬ ರನ್‌ಗಳ ಜಯ ದೊರೆಯಿತು. ಚೆರುಮಂದAಡ ಗಣಪತಿ ಬಾರಿಸಿದ ೪೯ ರನ್‌ಗಳ ನೆರವಿನಿಂದ ೬ ವಿಕೆಟ್ ಕಳೆದುಕೊಂಡು ೧೧೯ ರನ್ ದಾಖಲಿಸಿತು. ಕಾಳಮಂಡ ೪ ವಿಕೆಟ್ ಕಳೆದುಕೊಂಡು ೭೩ ರನ್ ಗಳಿಸಿತು. ಕಾಳಮಂಡ ಅಪ್ಪಚ್ಚು ೪೯ ರನ್ ಬಾರಿಸಿದರು.

ಮಚ್ಚೇಟಿರಕ್ಕೆ ಚಂಙಣಮಾಡ ವಿರುದ್ದ ೬ ವಿಕೆಟ್ ಜಯ ದೊರೆಯಿತು. ಚಂಙಣಮಾಡ ಮದನ್ ೨೮, ಸೂರಜ್ ೨೯ ರನ್‌ಗಳ ಕಾಣಿಕೆಯಿಂದ ವಿಕೆಟ್ ನಷ್ಟವಿಲ್ಲದೆ ೬೫ ರನ್ ದಾಖಲಿಸಿತು. ಮಚ್ಚೇಟಿರ ೪ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಕಿರಣ್ ಪೂವಯ್ಯ ೩೨ ರನ್‌ಗಳಿಂದ ಪಂದ್ಯ ಗೆಲ್ಲಿಸಿದರು. ಕಾಳಮಂಡ ದಿವಿನ್ ೨ ವಿಕೆಟ್ ಪಡೆದರು.

ಬಾಚಿನಾಡಂಡಕ್ಕೆ ಕೋಡಿಮಣಿಯಂಡ ವಿರುದ್ಧ ೧೦ ವಿಕೆಟ್ ಗೆಲುವು ದೊರೆಯಿತು. ಕೋಡಿಮಣಿಯಂಡ ೪ ವಿಕೆಟ್‌ಗೆ ೭೦ ರನ್ ಗಳಿಸಿತು. ಬಾಚಿನಾಡಂಡ ಶ್ರೇಯಸ್ ೪೨, ನಿಖಿಲ್ ೩೩ ರನ್ ಕಾಣಿಕೆಯಿಂದ ೭೫ ರನ್ ಗಳಿಸಿತು. ಕೋಡಿಮಣಿಯಂಡ ನವೀನ್ ೩೦ ರನ್ ದಾಖಲಿಸಿದರು.

ಮುಕ್ಕಾಟೀರ (ಕುಂಬಳದಾಳ್) ತಂಡವು ಕೇತಿರವನ್ನು ೧೦ ವಿಕೆಟ್‌ಗಳಿಂದ ಸೋಲಿಸಿತು. ಕೇತಿರ ೨ ವಿಕೆಟ್‌ಗೆ ೨೮ ರನ್ ದಾಖಲಿಸಿತು. ಮುಕ್ಕಾಟೀರ ವಿಕೆಟ್ ಕಳೆದುಕೊಳ್ಳದೆ ಗುರಿ ಸಾಧಿಸಿತು. ಪಾರುವಂಗಡವು ಮಾಚಿಮಾಡವನ್ನು ೯ ವಿಕೆಟ್‌ಗಳಿಂದ ಸೋಲಿಸಿತು. ಪಾರುವಂಗಡ ೧ ವಿಕೆಟ್ ನಷ್ಟಕ್ಕೆ ೯೦ ರನ್, ಮಾಚಿಮಾಡ ೨ ವಿಕೆಟ್ ಕಳೆದುಕೊಂಡು ೮೨ ರನ್ ಗಳಿಸಿ ಸೋಲನುಭವಿಸಿತು. ಕೋಡಿಮಣಿಯಂಡಕ್ಕೆ ನಾಪಂಡ ವಿರುದ್ದ ೨೫ ರನ್‌ಗಳ ಗೆಲುವು ದೊರೆಯಿತು. ಕೋಡಿಮಣಿಯಂಡ ೮ ವಿಕೆಟ್ ನಷ್ಟಕ್ಕೆ ೧೦೭ ರನ್, ನಾಪಂಡ ೬ ವಿಕೆಟ್‌ಗೆ ೮೨ ರನ್ ಗಳಿಸಿತು.

ಬಾಚಿನಾಡಂಡ ತಂಡಕ್ಕೆ ನುಚ್ಚಿಮಣಿಯಂಡ ವಿರುದ್ದ ೮ ವಿಕೆಟ್ ಜಯ ದೊರೆಯಿತು. ನುಚ್ಚಿಮಣಿಯಂಡ ೮ ವಿಕೆಟ್ ಕಳೆದುಕೊಂಡು ೫೯ ರನ್, ಬಾಚಿನಾಡಂಡ ೨ ವಿಕೆಟ್ ನಷ್ಟಕ್ಕೆ ೬೦ ರನ್ ಗಳಿಸಿತು. ಉಳುವಂಗಡ ಕುಂಞÂರ ವಿರುದ್ಧ ೯ ವಿಕೆಟ್‌ಗಳ ಜಯಗಳಿಸಿತು. ಕುಂಞÂರ ೫೪ ರನ್, ಉಳುವಂಗಡ ೧ ವಿಕೆಟ್ ನಷ್ಟಕ್ಕೆ ೬೦ ರನ್ ಸಿಡಿಸಿತು.

ಆದೇಂಗಡ ಮಂಜು, ನಂದಿನೆರವAಡ ಕರಣ್, ಚೋವಂಡ ಪೊನ್ನಣ್ಣ, ಕಾಳಮಂಡ ಅಪ್ಪಚ್ಚು, ಚಂಙಣಮಾಡ ಸೂರಜ್, ಕೋಡಿಮಣಿಯಂಡ ನವೀನ್, ಕೇತಿರ ಮೋಹಿತ್, ಕಾಂಡAಡ ಕೀರ್ತನಾ, ಮೂಕಳೇರ ಮೀರಾ ಅಶೋಕ್, ಕೊಣಿಯಂಡ ಅಮೂಲ್ಯ, ಕೋಟ್ರಮಾಡ ಶೀತಲ್, ಮಾಚಿಮಾಡ ಕಾರ್ಯಪ್ಪ, ನಾಪಂಡ ವಿಶು, ನುಚ್ಚಿಮಣಿಯಂಡ ಕುಶಾಲಪ್ಪ, ಕುಂಞÂರ ಭರತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.