ಚಿತ್ರ - ವರದಿ: ಹೆಚ್.ಕೆ.ಜಗದೀಶ್

ಗೋಣಿಕೊಪ್ಪಲು, ಏ.೨೩: ಮನೆಯ ಸಮೀಪದ ಕೊಟ್ಟಿಗೆಯಲ್ಲಿದ್ದ ಎರಡು ಹಸುಗಳ ಮೇಲೆ ಹುಲಿ ದಾಳಿ ನಡೆಸಿ ಎಳೆದೊಯ್ದು ಕೊಂದು ಹಾಕಿದ ಘಟನೆ ಬಾಳೆಲೆ ಹೋಬಳಿಯ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರಮಾಡುವಿನಲ್ಲಿ ನಡೆದಿದೆ.

ಗ್ರಾಮದ ಪಟ್ಟಡ ಬೋಪಯ್ಯ ಎಂಬವರು ಎಂದಿನAತೆ ಹಸುಗಳನ್ನು ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿದ್ದರು. ರಾತ್ರಿಯ ವೇಳೆ ಹುಲಿಯು ಕೊಟ್ಟಿಗೆಯನ್ನು ಪ್ರವೇಶಿಸಿ, ಕೊಟ್ಟಿಗೆಯಲ್ಲಿದ್ದ ಗಬ್ಬದ ಹಸು ಹಾಗೂ ಹಾಲು ಕೊಡುವ ಹಸುವನ್ನು ಕೊಂದು ಹಾಕಿ ನಂತರ ಸಮೀಪದ ಕಾಫಿ ಗಿಡದವರೆಗೂ ಎಳೆದೊಯ್ದು ತಿಂದು ಹಾಕಿದೆ. ಮುಂಜಾನೆ ಎಂದಿನAತೆ ಕೊಟ್ಟಿಗೆ ಬಳಿ ತೆರಳಿದಾಗ ಹಸುಗಳು ಕೊಟ್ಟಿಗೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ಸುತ್ತಮುತ್ತಲಿನ ಜಾಗದಲ್ಲಿ ಹುಡುಕಾಟ ನಡೆಸಿದಾಗ ಕಾಫಿ ಗಿಡದ ಬಳಿ ಎರಡು ಹಸುಗಳು ಬಿದ್ದಿರುವುದು ಕಂಡುಬAದಿದೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದರು. ನಂತರ ಮಾಹಿತಿ ತಿಳಿದ ರೈತ ಸಂಘದ ಪದಾಧಿಕಾರಿಗಳು ಸ್ಥಳದಲ್ಲಿದ್ದ ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶದ ಕಲ್ಲಳ್ಳ ವಲಯದ ಎಸಿಎಫ್ ಅನುಷ, ಆರ್‌ಎಫ್‌ಒ ರಾಜಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಕೂಡಲೇ ಸರ್ಕಾರದಿಂದ ಲಭ್ಯವಾಗುವ ಪರಿಹಾರ ನೀಡಬೇಕೆಂದು ಹಾಗೂ ಹುಲಿ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಹುಲಿಯ ಪತ್ತೆಗಾಗಿ ಕ್ಯಾಮೆರಾಗಳನ್ನು ಅಳವಡಿಸಿ, ಹುಲಿಯ ಸೆರೆಗೆ ಬೋನನ್ನು ಇಟ್ಟಿದ್ದು ಹುಲಿಯನ್ನು ಸೆರೆ ಹಿಡಿಯುವ ಭರವಸೆ ನೀಡಿದರು.

ಕಳೆದ ಹಲವಾರು ವರ್ಷಗಳಿಂದ ರೈತರಾದ ಪಟ್ಟಡ ಬೋಪಯ್ಯ ಹಸುಗಳನ್ನು ಸಾಕುತ್ತ ಆರ್ಥಿಕ ಅಭಿವೃದ್ಧಿ ಕಂಡು ಕೊಂಡಿದ್ದರು. ಇದ್ದ ಹಸುಗಳಲ್ಲಿ ದೊಡ್ಡದಾದ ಹಾಗೂ ಭಾರಿ ಬೆಲೆ ಬಾಳುವ ಹಸುವನ್ನು ಕಳೆದುಕೊಂಡು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಘಟನಾ ಸ್ಥಳದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ತಾಣಚ್ಚಿರ ಲೆಹರ್ ಬಿದ್ದಪ್ಪ ಸೇರಿದಂತೆ ಹಲವು ಪ್ರಮುಖ ಪದಾಧಿಕಾರಿಗಳು ಹಾಜರಿದ್ದರು. ಎರಡು ದಿನದಲ್ಲಿ ಪರಿಹಾರ ಚೆಕ್ಕನ್ನು ನೀಡುವುದಾಗಿ ಸ್ಥಳದಲ್ಲಿದ್ದ ಅಧಿಕಾರಿಗಳು ಭರವಸೆ ನೀಡಿದರು.