ಮಡಿಕೇರಿ, ಏ. ೨೩: ಭಾರತದ ಸಂವಿಧಾನವನ್ನು ಬದಲಾವಣೆ ಮಾಡಿ ಮನುಸ್ಮೃತಿ ಜಾರಿ ಮಾಡುವುದು ಭಾರತೀಯ ಜನತಾ ಪಕ್ಷದ ‘ಹಿಡನ್ ಅಜೆಂಡಾ’ ಆಗಿದ್ದು, ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗೆ ಪ್ರತಿಯೊಬ್ಬರು ಒಂದಾಗಬೇಕಾದ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಪರಿಶಿಷ್ಟ ಜಾತಿ ಸಮಾವೇಶದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಕೊನೆಗಾಣಿಸಿ ಮನುವಾದವನ್ನು ಮುನ್ನಲೆಗೆ ತರುವ ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿವೆ. ಅಂಬೇಡ್ಕರ್ ಅವರು ಎಲ್ಲಾ ವರ್ಗದ ಜನರ ಹಕ್ಕು

(ಮೊದಲ ಪುಟದಿಂದ) ಉಳಿಸುವ ಸಲುವಾಗಿ ಸಂವಿಧಾನ ನೀಡಿದ್ದಾರೆ. ಅಮೇರಿಕಾ ಮಾಜಿ ಅಧ್ಯಕ್ಷ ಒಬಾಮ, ‘ನೋವು, ಅಪಮಾನ ಸಹಿಸಿ ಹಕ್ಕು ರಕ್ಷಣೆ ಮಾಡುವ ಶ್ರೇಷ್ಟ ಸಂವಿಧಾನ ಭಾರತದ್ದು’ ಎಂದು ಬಣ್ಣಿಸಿದ್ದಾರೆ. ಇಂತಹ ಸಂವಿಧಾನಕ್ಕೆ ಬಿಜೆಪಿ ಹಾಗೂ ಕೋಮುವಾದಿಗಳಿಂದ ಅಪಾಯವಿದೆ. ಬಿಜೆಪಿ ಆಡಳಿತ ನಿರ್ಧಾರ, ಮನಸ್ಥಿತಿ ಗಮನಿಸಿದರೆ ಇದು ಅರಿವಾಗುತ್ತದೆ. ಅವರಿಗೆ ಹಿಂದೂ ರಾಷ್ಟç ನಿರ್ಮಾಣ ಮಾಡುವ ಗುರಿ ಇದೆ. ಸಿಂಧೂ ನಾಗರಿಕತೆಯಿಂದ ಬಂದ ಆರ್ಯನರಿಂದ ಸಂವಿಧಾನ ಬದಲಿಸುವ ಹುನ್ನಾರ ನಡೆಯುತ್ತಿದೆ ಎಂದು ಕಿಡಿಕಾರಿದರು.

ವ್ಯಕ್ತಿ ಪೂಜೆ ಸರ್ವಾಧಿಕಾರ ನೀತಿಯನ್ನು ಪ್ರತಿಪಾದಿಸುತ್ತದೆ. ಇದರಿಂದ ಪ್ರಜಾಪ್ರಭುತ್ವ ಧ್ವಂಸವಾಗುತ್ತದೆ. ಬಿಜೆಪಿ ಕೇವಲ ಮೋದಿ ಬಗ್ಗೆ ಮಾತ್ರ ಮಾತಾನಾಡುತ್ತದೆ. ಇದು ಸರ್ವಾಧಿಕಾರಿಯನ್ನು ಸೃಷ್ಟಿ ಮಾಡುವ ಪೂರ್ವಭಾವಿಯಾಗಿದೆ ಎಂದರು. ಈ ಚುನಾವಣೆ ಅತ್ಯಂತ ಮಹತ್ತರವಾಗಿದೆ. ಬಿಜೆಪಿ ಗೆದ್ದರೆ ಪ್ರಜಾಪ್ರಭುತ್ವದ ಕೊನೆ ಚುನಾವಣೆ ಇದಾಗುತ್ತದೆ. ‘ಒಂದು ರಾಷ್ಟç, ಒಂದು ಚುನಾವಣೆ’ ಪ್ರಜಾಪ್ರಭುತ್ವ ವಿರೋಧಿ ನಡೆ. ಇದರ ಮೂಲಕ ಒಕ್ಕೂಟ, ಸಂಸತ್ ವ್ಯವಸ್ಥೆ ನಾಶ ಮಾಡುವ ಸಂಚು ನಡೆಯುತ್ತಿದೆ. ಕಾಂಗ್ರೆಸ್ ಇದುವರೆಗೂ ಸಂವಿಧಾನದ ತಂಟೆಗೆ ಹೋಗಿಲ್ಲ. ೧೯೯೫ರಲ್ಲಿ ವಾಜಪೇಯಿ ಸಂವಿಧಾನ ವಿಮರ್ಶೆಗೆ ಮುಂದಾದರು. ಇದಕ್ಕೆ ನಾವು ಬಿಡಲಿಲ್ಲ. ಸಮುದಾಯಗಳು ಒಗ್ಗಟ್ಟಾಗಿ ಸಂವಿಧಾನ ರಕ್ಷಣೆ ಮಾಡಿದರೆ, ನಮ್ಮನ್ನು ಸಂವಿಧಾನ ರಕ್ಷಣೆ ಮಾಡುತ್ತದೆ ಎಂದು ಪ್ರತಿಪಾದಿಸಿದರು.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಬಿಜೆಪಿ ಮೊದಲು ದೇಶದ ಇತಿಹಾಸ ತಿಳಿದುಕೊಳ್ಳಬೇಕು. ನಮ್ಮ ಸರಕಾರದಲ್ಲಿ ಪರಿಶಿಷ್ಟ ವರ್ಗಕ್ಕೆ ಆದ್ಯತೆ ನೀಡಿ ಸರಕಾರಿ ಸಂಸ್ಥೆ, ಸ್ಥಳೀಯ ಆಡಳಿತಗಳಿಗೆ ನಾಮನಿರ್ದೇಶನ ಮಾಡಲಾಗಿದೆ. ಸಾಮಾಜಿಕ ನ್ಯಾಯ ನೀಡುವ ಉದ್ದೇಶ ನಮ್ಮದು. ಗ್ಯಾರಂಟಿ ಯೋಜನೆಯಡಿ ಮಾಸಿಕ ಮಹಿಳೆಯರಿಗೆ ದೊರೆಯುವ ರೂ. ೨ ಸಾವಿರ ಸಾಮಾನ್ಯರ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರಿದೆ. ಜಿಲ್ಲೆಯಲ್ಲಿ ೧.೭೫ ಲಕ್ಷ ಮಹಿಳೆಯರಿಗೆ ಗೃಹಲಕ್ಷಿö್ಮ ಲಾಭ ದೊರೆಯುತ್ತಿದೆ ಎಂದರು.

ಕೆಪಿಸಿಸಿ ಸದಸ್ಯ ಹೆಚ್.ಎಂ. ನಂದಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸಂವಿಧಾನ ಬದಲಾವಣೆಯ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿವೆ. ದಲಿತರ ಬದುಕಿನ ಆಶಾಕಿರಣ ಸಂವಿಧಾನವನ್ನು ಉಳಿಸುವ ಕೆಲಸವಾಗಬೇಕು. ಅದಕ್ಕಾಗಿ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರ ಬರಬೇಕೆಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಲಕ್ಷö್ಮಣ್ ಗೆಲುವಿಗೆ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಜಾತ್ಯತೀತ ನಿಲುವಿಗೆ ಜನತೆ ಬೆಂಬಲ ನೀಡುತ್ತಾರೆ ಎಂಬ ನಂಬಿಕೆ ಇದೆ. ಚುನಾವಣಾ ಪೂರ್ವ ನೀಡಿದ್ದ ಗ್ಯಾರಂಟಿ ಭರವಸೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ. ಇದರಿಂದ ಕೋಟ್ಯಂತರ ಜನರಿಗೆ ಸಹಾಯವಾಗಿದೆ. ಅದೇ ರೀತಿ ಕೇಂದ್ರ ನಾಯಕರು ನೀಡಿರುವ ಭರವಸೆಯೂ ಈಡೇರುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್, ವಿಧಾನ ಪರಿಷತ್ತು ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ. ಲೋಕೇಶ್, ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾನಗಲ್ಲು, ಮಡಿಕೇರಿ ಬ್ಲಾಕ್ ಅಧ್ಯಕ್ಷ ಹಂಸ, ಜಿ.ಪಂ. ಮಾಜಿ ಅಧ್ಯಕ್ಷ ಪಾಪು ಸಣ್ಣಯ್ಯ, ಕೆಪಿಸಿಸಿ ಸದಸ್ಯರುಗಳಾದ ಕೆ.ಎ. ಯಾಕೂಬ್, ಮಂಜುನಾಥ್ ಗುಂಡುರಾವ್, ತಾ.ಪಂ. ಮಾಜಿ ಸದಸ್ಯ ಪಾಲಾಕ್ಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಂದೀಪ್ ಸ್ವಾಗತಿಸಿ, ಮೋಹನ್ ಮೌರ್ಯ ನಿರೂಪಿಸಿ, ವಂದಿಸಿದರು. ಮಹೇಶ್ ಹನ್ಕೋಡ್ ಕ್ರಾಂತಿ ಗೀತೆ ಹಾಡಿದರು.