ನಾಪೋಕ್ಲು, ಏ. ೨೩: ಕೊಡವ ಕೌಟುಂಬಿಕ ಹಾಕಿ ಉತ್ಸವ ಇದೀಗ ಎಂಟರ ಘಟ್ಟದತ್ತ ತಲುಪಿದೆ. ಹಾಕಿ ಉತ್ಸವದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ನೆರವಂಡ ತಂಡ ಕ್ವಾರ್ಟರ್ ಫೈನಲ್‌ಗೆ ತಲುಪಿದ ಸಾಧನೆ ಮಾಡಿರುವುದು ಒಂದೆಡೆಯಾದರೆ, ಕಳೆದ ವರ್ಷವೂ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದ ಪುದಿಯೊಕ್ಕಡ ತಂಡವೂ ಈ ಬಾರಿಯ ಸೆಮಿಫೈನಲ್ ಕನಸ್ಸಿನಲ್ಲಿದೆ.

ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ಚಾಂಪಿಯನ್‌ಗಳಾದ ಅಂಜಪರವAಡ, ಕೂತಂಡ ಹಾಗೂ ಕಲಿಯಂಡ ತಂಡಗಳು ಪರಾಭವ ಗೊಂಡು ಪಂದ್ಯಾವಳಿಯಿAದ ನಿರ್ಗಮಿಸಿವೆ. ಮತ್ತೊಂದು ಮಾಜಿ ಚಾಂಪಿಯನ್ ತಂಡವಾದ ನೆಲ್ಲಮಕ್ಕಡ ಹಾಗೂ ಹಾಲಿ ಚಾಂಪಿಯನ್ ಕುಪ್ಪಂಡ (ಕೈಕೇರಿ) ತಂಡಗಳೂ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿವೆ.

ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಇಂದು ನಡೆದ ಕುಂಡ್ಯೋಳAಡ ಕಪ್ ಹಾಕಿ ಕಾರ್ನಿವಾಲ್‌ನ ಮೊದಲ ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಅಂಜಪರವAಡ, ನೆಲ್ಲಮಕ್ಕಡ ಎದುರು ೪-೦ ಗೋಲಿನಿಂದ, ನಾಲ್ಕು ಬಾರಿಯ ಚಾಂಪಿಯನ್ ತಂಡ ಪುದಿಯೊಕ್ಕಡ ವಿರುದ್ಧ ೩-೧ ಗೋಲಿನಿಂದ ಹಾಗೂ ಕಲಿಯಂಡ ತಂಡ ಕುಪ್ಪಂಡ ಎದುರು ಟ್ರೆöÊಬ್ರೇಕರ್‌ನಲ್ಲಿ ೪-೨ ಗೋಲಿನಿಂದ ಪರಾಭವಗೊಂಡವು. ನೆರವಂಡ ತಂಡ ಮುಕ್ಕಾಟಿರ (ಬೋಂದ) ತಂಡದ ಎದುರು ಟ್ರೆöÊಬ್ರೇಕರ್‌ನಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.

ಪಂದ್ಯದ ವಿವರ :ಮೈದಾನ ೧ರಲ್ಲಿ ಮಾಜಿ ಚಾಂಪಿಯನ್‌ಗಳಾದ ಅಂಜಪರವAಡ ಮತ್ತು ನೆಲ್ಲಮಕ್ಕಡ ತಂಡಗಳ ನಡುವಿನ ಮೊದಲ ಪಂದ್ಯದ ಸೆಣಸಾಟದಲ್ಲಿ ನೆಲ್ಲಮಕ್ಕಡ ತಂಡವು ಅಂಜಪರವAಡ ತಂಡವನ್ನು ೪-೦ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ನೆಲ್ಲಮಕ್ಕಡ ಪರ ಸೋಮಯ್ಯ, ರೋಹನ್ ಹಾಗೂ ಅಯ್ಯಪ್ಪ (೨) ಗೋಲು ಬಾರಿಸಿದರು.

ಮಾಜಿ ಚಾಂಪಿಯನ್ ಕೂತಂಡ ಮತ್ತು ಪುದಿಯೊಕ್ಕಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪುದಿಯೊಕ್ಕಡ ತಂಡವು ೩-೧ ಗೋಲುಗಳ ಅಂತರದಿAದ ಕೂತಂಡ ತಂಡವನ್ನು ಸೋಲಿಸಿತು.

(ಮೊದಲ ಪುಟದಿಂದ) ಪುದಿಯೊಕ್ಕಡ ತಂಡದ ಪರ ಪ್ರಧಾನ್ ಸೋಮಣ್ಣ ಪಂದ್ಯ ಆರಂಭದ ೬ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸುವುದರ ಮೂಲಕ ತಂಡದ ಗೆಲುವಿನ ಮನ್ಸೂಚನೆ ನೀಡಿದರು. ಮಿಥುನ್ ಪೊನ್ನಪ್ಪ ೧೬ನೇ ನಿಮಿಷದಲ್ಲಿ ೨ನೇ ಗೋಲು ದಾಖಲಿಸಿ ತಂಡಕ್ಕೆ ಆಸರೆಯಾದರು. ಕೂತಂಡ ರಿಕ್ಕಿ ಕುಶಾಲಪ್ಪ ೪೦ನೇ ನಿಮಿಷದಲ್ಲಿ ತಂಡದ ಪರ ಮೊದಲ ಗೋಲು ದಾಖಲಿಸಿ ತಮ್ಮ ಹೋರಾಟ ಮುಂದುವರೆಸಿದರು. ಆದರೆ ಪುದಿಯೊಕ್ಕಡ ಪ್ರಧಾನ ಸೋಮಣ್ಣ ೫೦ನೇ ನಿಮಿಷದಲ್ಲಿ ೩ನೇ ಗೋಲು ದಾಖಲಿಸುವುದರ ಮೂಲಕ ತಂಡದ ಗೆಲುವನ್ನು ಖಾತರಿಪಡಿಸಿದರು. ಮುಕ್ಕಾಟಿರ (ಬೋಂದ) ಮತ್ತು ನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನೆರವಂಡ ನಾಚಪ್ಪ ೧ನೇ ನಿಮಿಷದಲ್ಲಿ ಗೋಲು ದಾಖಲಿಸುವುದರ ಮೂಲಕ ತಂಡದ ಖಾತೆ ತೆರೆದರು. ಮುಕ್ಕಾಟಿರ ನಿಶಾಂತ್ ೧೧ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸಮಬಲ ಸಾಧಿಸಿದರು. ನೆರವಂಡ ದಿಶಾನ್ ದೇವಯ್ಯ ೨೦ನೇ ನಿಮಿಷದಲ್ಲಿ ತಂಡದ ಪರ ಎರಡನೇ ಗೋಲು ದಾಖಲಿಸಿದರಾದರೂ, ಮುಕ್ಕಾಟಿರ ಅಯ್ಯಪ್ಪ ೩೦ನೇ ನಿಮಿಷದಲ್ಲಿ ಗೋಲು ದಾಖಲಿಸಿ ಮತ್ತೆ ಸಮಬಲ ಸಾಧಿಸಿದರು. ನಂತರ ನಡೆದ ಟೈಬ್ರೇಕರ್‌ನಲ್ಲಿ ನೆರವಂಡ ತಂಡವು ಮುಕ್ಕಾಟಿರ ತಂಡವನ್ನು ಪರಾಭವಗೊಳಿಸಿ ವಿಜಯದ ನಗೆ ಬೀರಿತು. ಮಾಜಿ ಚಾಂಪಿಯನ್ ಕಲಿಯಂಡ ಮತ್ತು ಹಾಲಿ ಚಾಂಪಿಯನ್ ಕುಂಪAಡ(ಕೈಕೇರಿ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಆರಂಭದ ನಿಮಿಷದಲ್ಲೇ ಕುಪ್ಪಂಡ ಸೋಮಯ್ಯ ಗೋಲು ಗಳಿಸುವುದರ ಮೂಲಕ ತಮ್ಮ ತಂಡದ ಖಾತೆ ತೆರೆದರು. ಇದರ ವಿರುದ್ಧ ಬಿರುಸಿನ ಆಟ ಪ್ರದರ್ಶಿಸಿದ ಕಲಿಯಂಡ ತಂಡ ೧೮ನೇ ನಿಮಿಷದಲ್ಲಿ ಭರತ್ ದಾಖಲಿಸಿದ ಗೋಲಿನಿಂದ ಸಮಬಲ ಸಾಧಿಸಿತು. ನಂತರ ಆಟದಲ್ಲಿ ಎರಡೂ ತಂಡಗಳು ಗೋಲು ದಾಖಲಿಸಿದ ಕಾರಣ ನಡೆದ ಟೈಬ್ರೇಕರ್‌ನಲ್ಲಿ ಕುಪ್ಪಂಡ ತಂಡ ಕಲಿಯಂಡ ತಂಡದ ವಿರುದ್ಧ ವಿಜಯ ಪತಾಕೆ ಹಾರಿಸಿತು.

-ಪಿ.ವಿ. ಪ್ರಭಾಕರ್