ಚೆಟ್ಟಳ್ಳಿ, ಏ. ೨೦: ಕಾಫಿಮಂಡಳಿ ಕಾಫಿಬೆಳೆಗಾರರಿಗೆ ರೋಬಸ್ಟಾ ಕ್ಲೋನಲ್ ಕಸಿಗಿಡಗಳ ಅಭಿವೃದ್ಧಿಯ ಬಗ್ಗೆ ಹಾಗು ವಿವಿಧ ಕಸಿಕಟ್ಟುವ ವಿಧಾನದ ಬಗ್ಗೆ ತರಬೇತಿ ನೀಡಲು ಉದ್ದೇಶಿಸಿದ್ದು ತಾ. ೨೯ರಂದು ಚೆಟ್ಟಳ್ಳಿ ಕಾಫಿಸಂಶೋಧನಾ ಉಪಕೇಂದ್ರ ದಲ್ಲಿ ಪ್ರಾಯೋಗಿಕವಾಗಿ ತರಬೇತಿಕಾರ್ಯಗಾರ ನಡೆಯಲಿದೆ. ಏಪ್ರಿಲ್ ೨೬ರ ಒಳಗಾಗಿಗೆ ಬೆಳೆಗಾರರು ಶುಲ್ಕ ಪಾವತಿಸಿ ಆನ್ಲೈನ್ ಮೂಲಕ ನೊಂದಾಯಿಸಿ ಕೊಳ್ಳುಬೇಕೆಂದು ಕಾಫಿಮಂಡಳಿ ತಿಳಿಸಿದೆ.
ಪ್ರತೀವರ್ಷ ಕಾಫಿಮಂಡಳಿ ಅಭಿವೃದ್ಧಿ ಪಡಿಸಲಾದ ರೋಬಸ್ಟಾ ಕ್ಲೋನಲ್ಲ್ ಗಿಡಗಳನ್ನು ವಿತರಿಸಲಾಗು ತಿದೆಯಾದರೂ ಬೆಳೆಗಾರರ ಬೇಡಿಕೆಗೆ ತಕ್ಕಂತೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಬೆಳೆಗಾರರಿಗೆ ತಳಿ ಅಭಿವೃದ್ಧಿ ಬಗ್ಗೆ ಸಂಪೂರ್ಣ ತರಬೇತಿ ನೀಡುವ ಮೂಲಕ ತಳಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ.
ತಾ. ೨೯ರಂದು ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ಬೆಳಿಗೆ ೧೦ರಿಂದ ಸಂಜೆ೪ರವರೆಗೆ ಪ್ರಾಯೋಗಿಕವಾಗಿ ತರಬೇತಿ ಹಾಗು ತಜ್ಞರಿಂದ ಮಾಹಿತಿ ಕಾರ್ಯಗಾರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ೯೯೬೪೦೨೭೩೯೨, ೭೮೯೯೭೪೯೫೨೯, ೮೭೬೨೧೨೩೫೨೬, ೯೪೮೨೫೪೪೭೧೧, ೯೯೦೨೦೧೭೮೬೭.