ವೀರಾಜಪೇಟೆ, ಏ. ೨೦: ನಾಗರಿಕ ಸೇವಾ ಪರೀಕ್ಷೆಯು ಒಂದೇ ಒಂದು ಸೇವೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಡೆಸುವ ಪರೀಕ್ಷೆ ಅಲ್ಲ, ಹಲವಾರು ಸೇವೆಗಳಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಡೆಸುವ ಒಂದು ಪರೀಕ್ಷೆ. ‘ನಾಗರಿಕ ಸೇವಾ ಪರೀಕ್ಷೆ' ಎಂದೇ ಕರೆಯಲಾಗುವ ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಅವರ ಶ್ರೇಣಿಗಳ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ ಎಂದು ‘ನಮ್ಮ ಕೆ.ಪಿ.ಎಸ್.ಸಿ’ ಸಂಸ್ಥೆಯ ಡಾ.ಅರ್ಜುನ್ ಬೋಪಣ್ಣ ಅವರು ಹೇಳಿದರು.
ಎ.ಕೆ. ಸುಬ್ಬಯ್ಯ-ಪೊನ್ನಮ್ಮ ದತ್ತಿನಿಧಿ, eviಜhಥಿಚಿ.ಛಿom ಸಹಯೋಗದಲ್ಲಿ ವೀರಾಜಪೇಟೆ ದಂತ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಿವಿಲ್ ಸರ್ವಿಸ್ ಪರೀಕ್ಷೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ದೃಢಸಂಕಲ್ಪ, ಆತ್ಮಸ್ಥೆöÊರ್ಯ ಮತ್ತು ಕಠಿಣ ಪರಿಶ್ರಮ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವಲ್ಲಿ ಪ್ರಮುಖ ಅಂಶಗ ಳಾಗಿವೆ ಎಂದರು. ಆಕಾಂಕ್ಷಿಗಳ ಹಿನ್ನೆಲೆ, ಸಾಮರ್ಥ್ಯ ಮತ್ತು ಆಸಕ್ತಿಯನ್ನು ಆಧರಿಸಿ ಐಚ್ಛಿಕ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ವಿಧಾನವನ್ನು ಅನುಸರಿಸುವಂತೆ ಸಲಹೆ ನೀಡಿದರು. ನಿಯತಕಾಲಿಕೆಗಳು ಮತ್ತು ಸುದ್ದಿ ಪತ್ರಿಕೆಗಳ ಸಹಾಯದಿಂದ ಪ್ರಸ್ತುತ ವಿಷಯಗಳ ಬಗ್ಗೆ ಗಮನ ಇಡುವಂತೆಯೂ ಅವರು ಸಲಹೆ ಇತ್ತರು.
ಕಾರ್ಯಾಗಾರದಲ್ಲಿ ವಿದ್ಯಾರ್ಥಿ ಗಳು, ಕಾಲೇಜು ಆಡಳಿತ ಮಂಡಳಿಯವರು ಹಾಜರಿದ್ದರು.