ಮಡಿಕೇರಿ, ಏ. ೨೦: ರಾಜ್ಯದ ಏಕೈಕ ದೃಷ್ಟಿ ಗಣಪತಿ ದೇವಾಲಯ ಎಂಬ ಕೀರ್ತಿ ಹೊಂದಿರುವ ಮಡಿಕೇರಿ ಸಮೀಪದ ಕನ್ನಂಡಬಾಣೆ ಶ್ರೀ ದೃಷ್ಟಿ ಗಣಪತಿ ದೇವಸ್ಥಾನದ ೨೦ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ತಾ.೨೨ ಹಾಗೂ ೨೩ ರಂದು ನಡೆಯಲಿದೆ.
೨೨ ರಂದು ಸಂಜೆ ೬ ಗಂಟೆಗೆ ವಾಸ್ತುಹೋಮ, ಸ್ಥಳಶುದ್ಧಿ, ಬಿಂಬಶುದ್ಧಿ, ರಾಕ್ಷೆÆÃಘ್ನಹೋಮ, ವಾಸ್ತುಬಲಿ, ಪ್ರಸಾದ ಶುದ್ಧಿ, ಸುದರ್ಶನ ಹೋಮ ನಡೆದು ಅನ್ನಸಂತರ್ಪಣೆ ನಡೆಯಲಿದೆ.
೨೩ ರಂದು ಬೆಳಿಗ್ಗೆ ೭ ಗಂಟೆಯಿAದ ಸಾಮೂಹಿಕ ಗಣಹೋಮ, ಆಶ್ಲೇಷ ಬಲಿ, ಕಲಶಪೂಜೆ, ನಾಗತಂಬಿಲ, ಕಲಶಾಭಿಷೇಕ, ಮಹಾಪೂಜೆ, ನಾಗದೇವರಿಗೆ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.