ಮಡಿಕೇರಿ, ಏ. ೧೯: ಲೋಕಸಭಾ ಚುನಾವಣೆ ಹಿನ್ನೆಲೆ ನಗರದಲ್ಲಿ ಕಾಂಗ್ರೆಸ್ ಪಕ್ಷ ಬೃಹತ್ ಬೈಕ್ ಹಾಗೂ ಆಟೋ ಜಾಥಾದ ಮೂಲಕ ಬಿರುಸಿನ ಮತ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿತು.

ಬನ್ನಿ ಮಂಟಪದಿAದ ಆರಂಭಗೊAಡ ಜಾಥಾ ಇಂದಿರಾ ಗಾಂಧಿ ವೃತ್ತ, ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಜನರಲ್ ತಿಮ್ಮಯ್ಯ ವೃತ್ತ, ಫೀ.ಮಾ. ಕಾರ್ಯಪ್ಪ ವೃತ್ತದ ಕಡೆ ಸಾಗಿ ವಾಪಾಸ್ ಬನ್ನಿ ಮಂಟಪದಿAದ ಆರಂಭಗೊAಡ ಜಾಥಾ ಇಂದಿರಾ ಗಾಂಧಿ ವೃತ್ತ, ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಜನರಲ್ ತಿಮ್ಮಯ್ಯ ವೃತ್ತ, ಫೀ.ಮಾ. ಕಾರ್ಯಪ್ಪ ವೃತ್ತದ ಕಡೆ ಸಾಗಿ ವಾಪಾಸ್ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಜಮಾವಣೆಗೊಂಡಿತು. ೨೫೦ಕ್ಕೂ ಹೆಚ್ಚು ಬೈಕ್, ೧೦೦ಕ್ಕೂ ಹೆಚ್ಚು ಆಟೋಗಳಲ್ಲಿ ಹಲವಾರು ಕಾರ್ಯಕರ್ತರು ಜಾಥಾದಲ್ಲಿ ಭಾಗವಹಿಸಿದ್ದರು. ಮಡಿಕೇರಿ ಶಾಸಕ ಮಂತರ್‌ಗೌಡ ಬೈಕ್ ಚಲಾಯಿಸುವ ಮೂಲಕ ಜಾಥಾಕ್ಕೆ ಆಕರ್ಷಣೆ ತಂದರು.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ನಮ್ಮ ಸರಕಾರ ನುಡಿದಂತೆ ನಡೆದಿದೆ. ಗ್ಯಾರಂಟಿ ಯೋಜನೆÀಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದೆ. ಇದನ್ನು ಮತದಾರರಿಗೆ ತಿಳಿಸಿ ಮತ ಹಾಕಿಸುವಂತಾಗಬೇಕು. ಕಾರ್ಯಕರ್ತರು ಪಕ್ಷದ ಶಕ್ತಿ. ಭಿನ್ನಾಭಿಪ್ರಾಯ ಬದಿಗೊತ್ತಿ ಎಲ್ಲರೂ ಒಂದಾಗಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷö್ಮಣ್ ಅವರನ್ನು ಗೆಲ್ಲಿಸಬೇಕು ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ,

ತಾ. ೨೬ ರಂದು ನಡೆಯುವ ಚುನಾವಣೆಗೆ ಉತ್ಸಾಹದಿಂದ ಕಾರ್ಯಕರ್ತರು ಕೆಲಸ ಮಾಡಬೇಕು. ದೇಶ, ರಾಜ್ಯಕ್ಕೆ ನೀಡಿರುವ ಕಾಂಗ್ರೆಸ್ ಕೊಡುಗೆಯನ್ನು ಮನೆ ಮನೆಗೆ ತಲುಪಿಸಬೇಕು.

(ಮೊದಲ ಪುಟದಿಂದ) ಮೂಲಭೂತ ಸೌಲಭ್ಯ, ಆಹಾರ ಕೊರತೆಯಿಂದ ಹಿಂದುಳಿದಿದ್ದ ಭಾರತವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ದಿದ್ದು ಕಾಂಗ್ರೆಸ್ ಸರಕಾರ ಎಂದರು. ಇಂದು ದೇಶ ಸಾಲದ ಸುಳಿಯಲ್ಲಿ ಸಿಲುಕಿದೆ. ಜವಾಹರ್ ಲಾಲ್ ನೆಹರು ತಂದ ಕೃಷಿ ನೀತಿ, ಇಂದಿರಾ ಗಾಂಧಿ ಜಾರಿಗೊಳಿಸಿದ ೨೦ ಅಂಶದ ಕಾರ್ಯಕ್ರಮ, ರಾಜೀವ್ ಗಾಂಧಿ ಅಧುನಿಕತೆ ಪರಿಚಯಿಸಿದ್ದ ಪರಿಣಾಮ ದೇಶ ಅಭಿವೃದ್ಧಿಶೀಲತೆ ಕಡೆ ಹೆಜ್ಜೆಹಾಕಿತು. ಮನಮೋಹನ್ ಸಿಂಗ್ ಅಧಿಕಾರವಧಿಯಲ್ಲಿ ಆದ ಕೆಲಸಗಳು ಮೋದಿ ಅವರ ಕಾಲದಲ್ಲಿ ಆಗಿಲ್ಲ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ತು ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಮಾತನಾಡಿ, ಜನ ಬದಲಾವಣೆ ಬಯಸಿದ ಪರಿಣಾಮ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ೨ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ೯ ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಅಪಾರ ಅಭಿವೃದ್ಧಿ ಕಾರ್ಯಗಳು ನಡೆದಿವೆ. ೧೦ ವರ್ಷಗಳಲ್ಲಿ ಸಂಸದ ಸ್ಥಾನ ಕಳೆದುಕೊಂಡಿದ್ದೇವೆ. ಶಾಸಕರೊಂದಿಗೆ ಕೈಜೋಡಿಸಲು ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಬೇಕಾಗಿದೆ ಎಂದರು.

ಮಾದ್ಯಮ ಸಂವಹನ ವಿಭಾಗ ವಕ್ತಾರ ಟಿ.ಪಿ.ರಮೇಶ್ ಮಾತನಾಡಿ, ದೇಶಕ್ಕೆ ವಂಚನೆ ಮಾಡಿದ ಸರಕಾರ ಹೋಗಿ ಜನಪರ ಇಂಡಿಯಾ ಮೈತ್ರಿ ಒಕ್ಕೂಟ ದೇಶದಲ್ಲಿ ಅಧಿಕಾರ ಸ್ಥಾಪಿಸಲಿದೆ ಎಂದು ಭವಿಷ್ಯ ನುಡಿದರು. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಕೊಟ್ಟಮುಡಿ, ನಗರಾಧ್ಯಕ್ಷ ರಾಜೇಶ್ ಯಲ್ಲಪ್ಪ, ಜಿಲ್ಲಾ ಉಪಾಧ್ಯಕ್ಷ ಸುಜು ತಿಮ್ಮಯ್ಯ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಪ್ರಮುಖರಾದ ಪ್ರಕಾಶ್ ಆಚಾರ್ಯ. ತೆನ್ನೀರ ಮೈನಾ, ಪ್ರಭು ರೈ, ಜಿ.ಸಿ. ಜಗದೀಶ್, ಸದಾ ಮುದ್ದಪ್ಪ, ಕೆ.ಎಂ. ವೆಂಕಟೇಶ್ ಹಾಗೂ ಇತರರು ಹಾಜರಿದ್ದರು.