ಪ್ರಶ್ನೆ : ಕೊಡಗು ಜಿಲ್ಲೆಯ ಬಿಸಿ ವಾತಾವರಣದಲ್ಲಿ ರಾಜಕೀಯ ವಾತಾವರಣ ಹೇಗಿದೆ?

ಉ : ಜನತೆ ಪ್ರೀತಿಯಿಂದ ಸ್ವೀಕರಿಸುತ್ತಿದ್ದಾರೆ. ವಿಶೇಷ ಮಮತೆ ತೋರಿಸುತ್ತಿದ್ದಾರೆ. ಜನಪ್ರತಿನಿಧಿಯಾಗಿ ಆಯ್ಕೆಯಾಗಿ ಬನ್ನಿ ಎನ್ನುತ್ತಿದ್ದಾರೆ.

ಪ್ರ : ಅಭ್ಯರ್ಥಿಯಾಗಿ ಮೊದಲ ಬಾರಿ ಬಂದಾಗ ಇದ್ದ ವಾತಾವರಣಕ್ಕೂ ಈಗಕ್ಕೂ ವ್ಯತ್ಯಾಸ ಕಾಣುತ್ತಿದ್ದೀರ?

ಉ : ಮೊದ ಮೊದಲು ಮಹಾರಾಜ ಎಂದು ಭಾವಿಸುತ್ತಿದ್ದರು. ಇದೀಗ ನನ್ನನ್ನು ಜನ ಸಾಮಾನ್ಯರಲ್ಲಿ ಒಬ್ಬನಾಗಿ ಮನೆ ಮಗನೆಂದು ಕಾಣುತ್ತಿದ್ದಾರೆ.

ಪ್ರ : ನಿಮ್ಮ ಪ್ರತಿಸ್ಪರ್ಧಿಯನ್ನು ಬಿಟ್ಟು ನಿಮ್ಮನ್ನು ಜನ ಯಾಕೆ ಆಯ್ಕೆ ಮಾಡಬೇಕು?

ಉ : ದೇಶದ ಭದ್ರತೆಗೆ, ದೇಶದ ನೆಮ್ಮದಿಗೆ, ದೇಶದ ಅಭಿವೃದ್ಧಿಗೆ, ದೇಶದ ವಿಶ್ವ ಮಾನ್ಯತೆಗೆ, ದೇಶದ ಒಗ್ಗಟ್ಟಿಗೆ ಮೋದಿ ಸರ್ಕಾರ ಅಗತ್ಯ ಎಂಬುದನ್ನು ಜನ ಅರಿತಿದ್ದಾರೆ. ಹಾಗಾಗಿ ಬಿಜೆಪಿಯನ್ನು ಜನ ಬೆಂಬಲಿಸಿ ಒಂದು ಸದೃಢ ಕೇಂದ್ರ ಸರ್ಕಾರವನ್ನು ಅಧಿಕಾರಕ್ಕೆ ತರಲು.

ಪ್ರ : ಜಿಲ್ಲೆಯ ಜನರ ‘ಪಲ್ಸ್’ ಹೇಗಿದೆ? ರಾಜ್ಯ ಸರ್ಕಾರದ ೫ ಗ್ಯಾರಂಟಿಗಳು ಪರಿಣಾಮ ಬೀರಿವೆಯಲ್ಲ?

ಉ : ಪ್ರಧಾನಿ ಮೋದಿ ಮತ್ತೊಮ್ಮೆ ಬೇಕು ಎಂದು ಬಯಸಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿಗಳು ರಾಜ್ಯಕ್ಕೆ ಸೀಮಿತ. ಆದರೆ ಸುಭದ್ರ ಸರ್ಕಾರ ಕೇಂದ್ರದಲ್ಲಿ ಬೇಕು ಎಂದು ಜನ ಬಯಸಿದಾಗ ಅವರಿಗೆ ಮೋದಿಯೇ ಗ್ಯಾರಂಟಿ. ಲೋಕಸಭೆಯಲ್ಲಿ ಮಹಿಳೆಯರಿಗೆ ಶೇಕಡಾ ೩೩ ಮೀಸಲಾತಿ ಕಲ್ಪಿಸಿರುವುದೇ ಸ್ತಿçà ಸಬಲೀಕರಣಕ್ಕೆ ಕೊಟ್ಟ ಆದ್ಯತೆಯಾಗಿದೆ.

ಪ್ರ : ಗ್ಯಾರಂಟಿಗಳ ಜೊತೆಯಲ್ಲಿ ಮೈಸೂರು-ಕೊಡಗು ಕ್ಷೇತ್ರಕ್ಕೆ ಪ್ರತ್ಯೇಕ ಪ್ರಣಾಳಿಕೆಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಬಿಜೆಪಿಯಲ್ಲಿ ಏನೂ ಭರವಸೆ ನೀಡಲು ಯೋಜನೆಗಳಿಲ್ಲವೆ?

ಉ : ಎರಡು ದಿನ ಕಾದು ನೋಡಿ. ಸಮಗ್ರ ಅಭಿವೃದ್ಧಿ ಕಲ್ಪನೆಯ ಪ್ರಣಾಳಿಕೆಯನ್ನು ಜನರ ಮುಂದಿಡುತ್ತೇವೆ.

ಪ್ರ : ಸ್ಥೂಲವಾಗಿ ಹೇಳಿ... ನಿಮ್ಮ ಪರಿಕಲ್ಪನೆಯನ್ನು.

ಉ : ಮೈಸೂರು ಮತ್ತು ಕೊಡಗು ವಿಶೇಷ ಪರಂಪರೆ ಹಾಗೂ ವಿಭಿನ್ನ ಸಂಸ್ಕೃತಿಯನ್ನು ಹೊಂದಿದ ಪ್ರದೇಶಗಳು ಅವುಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸಗಳಾಗಬೇಕು.

ಎರಡೂ ಜಿಲ್ಲೆಗಳು ಪ್ರವಾಸೋದ್ಯಮಕ್ಕೆ ಸೂಕ್ತವಿದ್ದರೂ, ಪ್ರಕೃತಿ ಪರಿಸರ, ಪ್ರಾಚೀನ ಪರಂಪರೆಗಳು ನಶಸಿಹೋಗದಂತಹಾ ರೀತಿಯಲ್ಲಿ ಯೋಜನೆಗಳನ್ನು ರೂಪಿಸುವುದು ಅಗತ್ಯವಾಗಿದೆ.