“ದೇಶ” ಎಂದಾಗ ಮೈ ಝುಂ ಎನ್ನಬೇಕು. ನಮ್ಮ ನೆಲ-ಜಲ ಎಂದು ಹೆಮ್ಮೆ ಪಡಬೇಕು. ನಮ್ಮ ಹೆತ್ತ ತಾಯಿಯನ್ನು ಮರೆಯದಂತೆ ನಮ್ಮನ್ನು ಪೋಷಿಸಿದ ದೇಶಕ್ಕೆ ನಾವು ಸದಾ ಕೃತಜ್ಞರಾಗಿರಬೇಕು.

“ಧರ್ಮೋ ರಕ್ಷತಿ ರಕ್ಷಿತಃ” ಎನ್ನುವ ನುಡಿಯಿದೆ. ಅಂದರೆ, ಧರ್ಮವನ್ನು ನಾವು ರಕ್ಷಿಸಿದರೆ ಅದು ಕೂಡ ನಮ್ಮನ್ನು ರಕ್ಷಿಸುತ್ತದೆ. ಅಂದರೆ, ಪ್ರಜೆಗಳಾದ ನಾವು ಮತದಾನದ ಮೂಲಕ ದೇಶವನ್ನು ರಕ್ಷಿಸಿದರೆ, ದೇಶವೂ ಕೂಡ ನಮ್ಮನ್ನು ರಕ್ಷಿಸುತ್ತದೆ ಎನ್ನುವ ಅರಿವಿರಬೇಕು.

ನಮ್ಮ ಜೀವಮಾನದಲ್ಲಿ ಲಭ್ಯವಾಗುವ ಅಮೋಘ ಅವಕಾಶವಾದ ಮತದಾನವನ್ನು ಮಾಡದೆ ನಿರ್ಲಕ್ಷಿಸಿದರೆ ಪರೋಕ್ಷವಾಗಿ ಈ ದೇಶ ನಮಗೆ ನೀಡಿದ ಆಸರೆಯ ನೈತಿಕ ಸ್ಥೆöÊರ್ಯವನ್ನು ನಾವು ಕಳೆದುಕೊಂಡAತೆಯೇ ಸರಿ.

ನಾವು ಈ ದೇಶದಲ್ಲಿ ಬದುಕಿದ್ದೇವೆ. ಇದು ನಮ್ಮ ಮಾತೃ ಭೂಮಿ. ಈ ದೇಶ ನಾವು ಜೀವಿಸಲು ಆಸರೆ ನೀಡಿದೆ. ಭೂಮಿಯ ಒಂದು ಭಾಗವಾದ ಭಾರತದಲ್ಲಿ ವಾಸಿಸುವ ನಾವೆಲ್ಲರೂ ಭಾರತೀಯರು. ಸಾವಿರಾರು ಮಂದಿ ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳಿ ವಾಸಿಸುತ್ತಿದ್ದರೂ ಮೂಲತ: ಅವರೂ ಭಾರತೀಯರಾಗಿದ್ದು ಮತದಾನ ಸಂದರ್ಭ ತಮ್ಮ ತಾಯ್ನಾಡಿಗೆ ಬಂದು ಮತದಾನದ ಹಕ್ಕನ್ನು ಚಲಾಯಿಸಬೇಕಾಗಿದೆ. ವಿಮಾನ ಯಾನಕ್ಕೆ ಖರ್ಚಾಗುತ್ತದೆ ಎನ್ನುವುದು ಹಾಸ್ಯಾಸ್ಪದವಾಗುತ್ತದೆ. ಪ್ರಜಾಪ್ರಭುತ್ವದ ಉತ್ಸವ ಎಂದೇ ಪರಿಗಣಿಸಿಕೊಂಡು ಮತದಾನದ ಕಾರ್ಯದಲ್ಲಿ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡುವುದು ಅತ್ಯಗತ್ಯವಾಗಿದೆ. ಒಬ್ಬ ವ್ಯಕ್ತಿ ತನ್ನ ಮತದಾನದ ಸ್ಥಳದಲ್ಲಿ ಇರದೆ ಬೇರೆಡೆ ತೆರಳಿದ್ದರೂ ಅಥವ ಬೇರೆÀಡೆಗೆ ಉದ್ಯೋಗಕ್ಕಾಗಿ ಹೋಗಿದ್ದರೂ ಮತದಾನದ ದಿನ ತನ್ನ ಊರಿಗೆ ಬಂದು ಮತದಾನ ಮಾಡಲೇಬೇಕಾಗುತ್ತದೆ. ಅಂತಹುದರಲ್ಲಿ ತಮ್ಮ ಊರಿನಲ್ಲಿಯೇ ಇದ್ದುಕೊಂಡು ಮತದಾನ ಕೇಂದ್ರಕ್ಕೆ ಬಾರದೆ ಸೋಮಾರಿಗಳಾಗಿ ತಪ್ಪಿಸಿಕೊಳ್ಳುವವರನ್ನು ಹೇಡಿಗಳು ಎಂದು ಕರೆದರೂ ತಪ್ಪಲ್ಲ. ಅಂತಹವರು ಮತದಾನ ಮಾಡದೆಯೇ ಫಲಿತಾಂಶದ ಬಳಿಕ ಹುಚ್ಚುಚ್ಚ್ಚಾಗಿ ಮಾತನಾಡಿದರೆ ಅದು “ಕೋಣನ ಮುಂದೆ ಕಿನ್ನರಿ ಬಾರಿಸಿದಷ್ಟೇ” ವ್ಯರ್ಥ. ಪ್ರತಿಯೊಬ್ಬ ಪ್ರಜೆಗೂ ಮತದಾನದ ಹೊಣೆಯಿದೆ. ನಾವು ಸಾಮಾನ್ಯವಾಗಿ ನೋಡುತ್ತೇವೆ. ಮತದಾನಕ್ಕೆ ಅತ್ಯುತ್ಸಾಹದಿಂದ ಬರುವವರಲ್ಲಿ ವಿಶೇಷ ಚೇತನರು ಮುಂದಿರುತ್ತಾರೆ. ತಮ್ಮ ಸಹಾಯಕರೊಬ್ಬರ ನೆರವಿನಿಂದ ಮತದಾನ ಮಾಡುವ ಅವಕಾಶವೂ ಅವರಿಗೆ ಇರುತ್ತದೆ. ಅನೇಕ ವೃದ್ಧ-ವೃದ್ಧೆಯರೂ ಯಾರ ಸಹಾಯವೂ ಇಲ್ಲದೆ ಉತ್ಸಾಹದಿಂದ ಮತದಾನ ಮಾಡುವುದನ್ನು ನಾವು ಗಮನಿಸಿದ್ದೇವೆ. ಕಡು ಬಡವರು, ಕೂಲಿ ಕಾರ್ಮಿಕರು, ಶ್ರಮ ಜೀವಿಗಳು ತಮ್ಮೆಲ್ಲ ಕೆಲಸಗಳನ್ನು ಬಿಟ್ಟು ಮತದಾನದಲ್ಲಿ ಪಾಲ್ಗೊಳ್ಳುತ್ತಾರೆ.

ಆದರೆ, ಸಾಮಾನ್ಯವಾಗಿ ವಿದ್ಯಾವಂತರೆನಿಸಿದವರು, ಐಟಿ-ಬಿಟಿ ಕಂಪೆನಿಗಳಲ್ಲಿ ಉದ್ಯೋಗಸ್ಥರಾಗಿರುವವರು ಮತದಾನಕ್ಕೆ ಬರಲು ಉತ್ಸಾಹ ತೋರುವುದಿಲ್ಲ ಎಂಬದು ಒಂದು ಸಾಮಾನ್ಯ ವಿದ್ಯಮಾನವಾಗಿಬಿಟ್ಟಿದೆ. ತಾವು ಈ ದೇಶದಲ್ಲಿ ಇರಬಹುದು ಅಥವ ವಿದೇಶದಲ್ಲಿ ಉದ್ಯೋಗದಲ್ಲಿರಬಹುದು. ಲಕ್ಷಗಟ್ಟಲೆ ಹಣ ಸಂಪಾದಿಸುವಾಗ ತÀಮ್ಮ ದೇಶದ ಭವಿಷ್ಯ ರೂಪಿಸುವ ಮತದಾನದಲ್ಲಿ ಪಾಲ್ಗೊಳ್ಳದಿರುವುದು ಎಷ್ಟು ಸರಿ? ತಾವು ಇಷ್ಟೊಂದು ಮೇಲ್ಮಟ್ಟಕ್ಕೆ ಏರಬೇಕಾದರೆ ಈ ಭಾರತದಲ್ಲಿ ಜನ್ಮ ತಾಳಿದ್ದರಿಂದ ಎಂಬುದನ್ನು ಅಂತಹವರು ಮರೆಯುವುದೇಕೆ? ಅನೇಕರಲ್ಲಿ ಒಂದು ಅಭಿಪ್ರಾಯವಿದೆ. ಯಾರು ಬಂದರೇನು, ಬಿಟ್ಟರೇನು? ನಮಗೇನೂ ಸಂಬAಧವಿಲ್ಲ ಎನ್ನುವ ಮನೋಭಾವನೆ. ಅಭ್ಯರ್ಥಿಗಳ್ಯಾರೂ ಸರಿಯಿಲ್ಲ, ಅವರಲ್ಲಿ, ಅವಿದ್ಯಾವಂತರೂ ಇದ್ದಾರೆ ನಾವೇಕೆ ಅವರಿಗೆ ಮತ ಹಾಕಬೇಕು ಎಂಬ “ಅಹಂ” ಇದಕ್ಕೆ ಕಾರಣವಿರಬಹುದು. ಅಂತಹವರು ಮತದಾನ ಕೇಂದ್ರಕ್ಕೆ ತೆರಳದೆ ಕೇವಲ ತರ್ಕದಲ್ಲಿಯೇ ಕಾಲಹರಣ ಮಾಡುತ್ತಾರೆ. ಯಾರಾದರೂ ಗೆದ್ದು ಬಂದ ಬಳಿಕ ಅಂತಹವರ ಕುರಿತು ಟೀಕೆ ಟಿಪ್ಪಣಿಗಳನ್ನು ಮಾತ್ರ ಮಾಡುತ್ತಿರುತ್ತಾರೆ. ಅದೂ ಸಾಮಾಜಿಕ ಜಾಲ ತಾಣಗಳಲ್ಲಿ ಅಂತಹವರ ಅಬ್ಬರ ಕಂಡುಬರುತ್ತದೆ. ತಾವು ಮತದಾನ ಮಾಡದುದರಿಂದ ಅದರಲ್ಲಿ ಪಾತ್ರಧಾರಿಗಳಲ್ಲ ಎಂಬ ಗರ್ವ ಅವರಲ್ಲಿರುತ್ತದೆ. ಆದರೆ, ಈ ದೇಶ ಅಂತಹವರಿಗೆ ಎಲ್ಲ ಕೊಟ್ಟಿರುವಾಗ ದೇಶದಲ್ಲಿ ನಡೆಯುವ ಪ್ರಜಾಪ್ರಭುತ್ವ ಆಧಾರದ ಆಯ್ಕೆಯಲ್ಲಿ ಅವರು ಹೊಣೆ ಹೊರುವಷ್ಟು ಈ ನೆಲಕ್ಕೆ ಕೃತಜ್ಞರಾಗಿರುವುದು ಬೇಡವೇ? ಒಂದೋ ನಾವು ಬಹಳ ಉನ್ನತ ಮಟ್ಟದ ವ್ಯಕ್ತಿಗಳು ಎಂದು ಭಾವಿಸಿಕೊಂಡಿದ್ದರೆ ಅಂತಹವರು ರಾಜಕೀಯ ಕಣಕ್ಕೆ ಇಳಿದು ಗೆದ್ದು ಬರಲಿ; ಇಲ್ಲವಾದಲ್ಲಿ ನಮ್ಮ ಸುತ್ತಲಿರುವ ವ್ಯಕ್ತಿಗಳಲ್ಲಿ ಅಥವ ಪಕ್ಷಗಳಲ್ಲಿ ಯಾರು ಇದ್ದುದರಲ್ಲಿ ಉತ್ತಮರು ಎಂದು ಆಯ್ಕೆ ಮಾಡುವ ಪರಿವರ್ತನೆ ಈಗಿನ ೨೧ ನೇ ಶತಮಾನದಲ್ಲಿಯಾದರೂ ಆಗಲಿ ಎಂದು ಹಾರೈಸಬೇಕಾಗಿದೆ.

(ಮೊದಲ ಪುಟದಿಂದ) ಏನೂ ವಿದ್ಯೆಯಿಲ್ಲದ ಅನೇಕ ಗ್ರಾಮ ಮಟ್ಟದ ಮತದಾರರು ನಾವು ಹೆಮ್ಮೆ ಪಡುವ ರೀತಿಯಲ್ಲಿ ತಮ್ಮ, ತಮ್ಮ ಗ್ರಾಮಕ್ಕೆ, ದೇಶಕ್ಕೆ ಯಾರು ಬೇಕು ಎಂದು ವಿಮರ್ಶಿಸಿ ಮತ ನೀಡುವುದನ್ನೂ ನಾವು ಗಮನಿಸಿದ್ದೇವೆ. ಇಂತಹವರೇ ನಿಜವಾಗಿಯೂ ಈ ದೇಶದ ಭವಿಷ್ಯ ರೂಪಿಸುವ ಮಹಾನ್ ವ್ಯಕ್ತಿಗಳೆೆಂದರೆ ತಪ್ಪಾಗಲಾರದು.

ಚುನಾವಣಾ ಬಹಿಷ್ಕಾರ

ಇನ್ನೊಂದೆÉಡೆ, ಕೆಲವರಲ್ಲಿ ಮತ್ತೆ ಕೆಲವು ನ್ಯೂನತೆಗಳಿವೆ. ಯಾವದೋ ಪಕ್ಷ ೫ ವರ್ಷ ನಮ್ಮನ್ನಾಳುತ್ತಿರುತ್ತದೆ. ಆ ಬಳಿಕ ಚುನಾವಣೆ ಬಂದಾಗ ಇದ್ದಕ್ಕಿದ್ದಂತೆ ಗುಂಪು ಸೇರಿಕೊಂಡು ನಮಗೆ ಅಥವ ನಮ್ಮ ಊರಿಗೆ ಯಾವದೇ ಕೆಲಸಗಳಾಗುತ್ತ್ತಿಲ್ಲ ಎಂದು ಚುನಾವಣಾ ಬಹಿಷ್ಕಾರದ ಕರೆ ನೀಡುವದು. ಇದು ನಿಜಕ್ಕೂ ವಿಚಿತ್ರ ವಿದ್ಯಮಾನ. ೫ ವರ್ಷ ಕಾಲ ತೆಪ್ಪಗಿದ್ದು ಚುನಾವÀಣಾ ಸಂದರ್ಭ ಇಂತಹ ನಿರ್ಧಾರ ತೆಗೆದುಕೊಳ್ಳುವುದರಿಂದ ನಿಮ್ಮ ಗ್ರಾಮದ ಜನತೆ ಮತ ನೀಡಿಲ್ಲ ಎಂದಾದರೆ ಗೆದ್ದವರು ಬಳಿಕ ನಿಮ್ಮ ಊರಿಗೆ ಸಿಟ್ಟಿನಿಂದ ತಲೆ ಹಾಕದಿರುವುದೇ ಹೆಚ್ಚು. ಅದಕ್ಕಿಂತ ಇಂತಹ ಕೆಲಸಗಳಾಗಬೇಕಾಗಿದೆ ಎಂದು ಅಭ್ಯರ್ಥಿಗಳ ಗಮನಕ್ಕೆ ತಂದು ಅವರು ಗೆದ್ದು ಬಂದರೆ ವಚನ ಬದ್ಧರಾಗಿರುವಂತೆ ಅವರಿಂದ ಕೆಲಸ ಮಾಡಿಸಿಕೊಳ್ಳ್ಳುವುದು ನಮ್ಮ ಕರ್ತವ್ಯವಾಗಬೇಕು. ಅಲ್ಲದೆ, ಚುನಾವಣಾ ವೇಳೆ ಜನತೆ ಬೇಡಿಕೆಯಿಟ್ಟರೆ ಅದನ್ನು ಬಹಿರಂಗವಾಗಿ ಈಡೇರಿಸುತ್ತೇವೆ ಎಂದು ಅಭ್ಯರ್ಥಿಗಳು ಭರವಸೆ ಕೊಡಲು ಕೂಡ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುತ್ತದೆ, ಕಾನೂನಾತ್ಮಕ ತೊಡಕುಂಟಾಗುತ್ತದೆ ಎನ್ನುವ ಅರಿವೂ ನಮಗಿರಬೇಕು.

ನೋಟಾ ಕುರಿತು..

ಇನ್ನು ನೋಟಾ ಓಟಿನ ಕುರಿತು ಅಭಿಪ್ರಾಯಪಡುವುದಾದರೆ, ಇದೊಂದು ದುರಂತ ಎಂದು ಖೇದ ವ್ಯಕ್ತಪಡಿಸಬೇಕಾಗುತ್ತದೆ. ಏಕೆ ಈ ನೋಟಾಗೆ ಅವಕಾಶ ಕಲ್ಪಿತವಾಯಿತು ಎಂಬದೂ ಕೂಡ ಅರ್ಥವಾಗದ ವಿಷಯ. ಮತದಾರರು ಒಂದೆಡೆÀ ಕುಳಿತು ಯೋಚಿಸಿ: ನೀವು ನೋಟಾಗೆ ಮತ ನೀಡಿದರೆ ಕಸದ ಬುಟ್ಟಿಯಲ್ಲಿ ಹಾಕಿದÀ ಕಸವನ್ನು ಹೊರಗೆಸೆದಂತೆ ಹೊರತು ಇದರಿಂದ ಪ್ರಯೋಜನವೇನು? ಇದರಿಂದ ನಿಮ್ಮ ಯಾವದೇ ಸಮಸ್ಯೆಯಾಗಲಿ, ಸಂಕಷ್ಟಗಳಿಗಾಗಲೀ ಪರಿಹಾರ ಸಿಗುತ್ತದೆಯೇ? ಇಬ್ಬರು ಅಭ್ಯರ್ಥಿಗಳಿದ್ದರೆ ಇಬ್ಬರನ್ನೂ ನೀವು ತಿರಸ್ಕರಿಸಿದರೆ ನೀವೇನು ದೇವ ಮಾನವರೆನಿಸಿಕೊಳ್ಳುತ್ತಿರಾ? ಇದಕ್ಕಿಂತ ನೀವು ಮನೆಯಲ್ಲಿ ಕುಳಿತು ನಿದ್ರೆ ಮಾಡುವುದೇ ಉತ್ತಮ! ನೀವು ಒಬ್ಬರೇ ಕುಳಿತು ಆಲೊಚಿಸಿ- ಇನ್ನೊಬ್ಬರ ಬಗ್ಗೆ ಭಾರೀ ಟೀಕೆ ಮಾಡುವ ನೀವು ಎಷ್ಟು ಸರಿಯಿದ್ದೀರಿ ಎಂದು ನಿಮ್ಮ ಮನಸ್ಸಿನಲ್ಲಿಯೇ ಯೋಚಿಸಿಕೊಳ್ಳಿ, ನಿಮ್ಮ ಬಗ್ಗೆ ಬೇರೆಯವರು ನಿಮಗೆ ಅರಿವಿಲ್ಲದಂತೆ ಮಾತನಾಡುತ್ತ್ತಾರೆ, ನಿಮ್ಮ ಮುಂದೆ ಹೊಗಳುವವರು ಹಿಂದೆ ನಿಮ್ಮ ಬಗ್ಗೆ ಏನು ಹೇಳುತ್ತಾರೆ ಎಂದು ತಿಳಿದುಕೊಂಡರೆ ಒಳಿತು. ಯಾರೂ ಸರ್ವಜ್ಞರಾಗಲು ಸಾಧ್ಯವಿಲ್ಲ. ನಿಮ್ಮಲ್ಲಿಯೂ ಅನೇಕ ತಪ್ಪುಗಳಿರುತ್ತದೆ. ಅಭ್ಯರ್ಥಿಗಳ ಪೈಕಿ ಕಡಿಮೆ ತಪ್ಪೆಸಗಿದವರನ್ನು ನೀವೇ ಗುರುತಿಸಿ ಸಮರ್ಪಕವಾಗಿ ವಿಮರ್ಶಿಸಿ ಒಬ್ಬ ವ್ಯಕ್ತಿಯನ್ನು ನಿಮ್ಮ ಕ್ಷೇತ್ರದಿಂದ ಈ ದೇಶಕ್ಕೆ ಆಯ್ಕೆ ಮಾಡುವುದು ಸೂಕ್ತ ಎನಿಸುವುದಿಲ್ಲವೇ?

“ ನನ್ನ ಒಂದು ಮತದಿಂದ ಏನಾಗುತ್ತದೆ?” ಎಂದು ಭಾವಿಸುವ ನೀವು ಅಕಸ್ಮಾತ್ ವ್ಯಕ್ತಿಯೊಬ್ಬ ಒಂದೇ ಮತದಿಂದ ಗೆದ್ದಾಗ ಅಥವ ಸೋತಾಗ ನನ್ನ ಮತವೂ ಮುಖ್ಯ ಎಂಬುದರ ಅರಿವಾಗುವುದಿಲ್ಲವೇ? ಅಥವ ನೀವು ಹಾಕಿದ ಮತದಿಂದ ಒಬ್ಬ ಗೆಲ್ಲಲಿ ಅಥವ ಸೋಲಲಿ “ಈ ದೇಶದ ಹಿತದೃಷ್ಟಿಯಿಂದ ನನಗೆ ದೊರೆತ ಹಕ್ಕನ್ನು ಚಲಾಯಿಸಿದೆನಲ್ಲ” ಎನ್ನುವ ಆತ್ಮ ತೃಪ್ತಿ ನಿಮಗಿರುವುದಿಲ್ಲವೇ? ಅಲ್ಲದೆ. ನಾನು ದೇಶಕ್ಕೆ ಏನು ಮಾಡದಿದ್ದರೂ ಕನಿಷ್ಟ ೫ ವರ್ಷಗಳಿಗೊಮ್ಮೆಯಾದರೂ ನನ್ನ ಅಸ್ಖಲಿತ, ಸಾರ್ವಭೌಮ ಹಕ್ಕನ್ನು ಸ್ಥಾಪಿಸುವ ಅವಕಾಶವನ್ನು ಬಳಸಿಕೊಂಡೆ ಎಂಬ ಹೆಮ್ಮೆ ನಿಮ್ಮದಾಗುತ್ತದೆ, ಗಡಿಯಲ್ಲಿ ನಮಗಾಗಿ ದಿನವೂ ಪ್ರಾಣ ತೆರುವ ಯೋಧರಿದ್ದಾರೆ, ನಮಗೆ ಏನು ಮಾಡಲಿಕ್ಕಾಗದಿದ್ದರೂ ದೇಶದ ಸಾರ್ವಭೌಮತ್ವದ, ಅಭಿಮಾನದ ಹಕ್ಕಾದ ಮತದಾನವನ್ನು ಮಾಡಿರುವ ತೃಪ್ತಿ ನಮ್ಮದಾಗುವುದಿಲ್ಲವೇ? ನೋಟಾಗೆ ಒತ್ತಿ ಹೊರ ಬಂದಾಗ ಅತ್ಮಹತ್ಯೆ ಮಾಡಿಕೊಂಡಷ್ಟು ಸ್ವಯಂಕೃತಾಪರಾಧದ ನೆನಪು ನಿಮ್ಮದಾಗಬಹುದು. ಏಕೆ ಇಂತಹ ತಪ್ಪು ಮಾಡಬೇಕು. ನಿಮ್ಮ ಮತ ವ್ಯರ್ಥವಾದಾಗ ಏನು ಪ್ರಯೋಜನ? ಅಕಸ್ಮಾತ್ ನೀವು ಚಲಾಯಿಸಿದ ಮತ ಪಡೆದ ವ್ಯಕ್ತಿ ಸೋತರೂ ಗೆದ್ದ ಮತಗಳ ಅಂತರ ಕಡಿಮೆಯಾದಾಗ ಗೆದ್ದವರಿಗೂ ಮುಂದೆ ಕೆಲಸ ಮಾಡಬೇಕೆಂಬ ಜಾಗೃತಿ ಮೂಡಿಸಿದಂತಾಗುತ್ತದೆ.

ಕೊಡಗಿನಲ್ಲಿ ನೋಟಾದ ಬಟನ್ ಯಾರೂ ಒತ್ತದಿರಲಿ. ಈ ವಿಚಾರದಲ್ಲಿ ಕೊಡಗು ಇಡೀ ದೇಶಕ್ಕೇ ಮಾದರಿಯಾಗಿ ಪ್ರಜಾಭುತ್ವದ ಮೌಲ್ಯ ಉಳಿಸಿದ ಜಿಲ್ಲೆ ಎಂದು ಖ್ಯಾತನಾಮವಾಗಲಿ ಎಂಬದು “ಶಕ್ತಿ” ಯ ಕಳಕಳಿಯ ಹಾರೈಕೆ. ಮೊದಲು ಎಲ್ಲರೂ ಮತದಾನ ಕೇಂದ್ರಕ್ಕೆ ತೆರಳುವಂತಾಗಲಿ; ಯಾರಿಗಾದರೂ ಓರ್ವ ವ್ಯಕ್ತಿಗೆ ಮತದಾನ ನೀಡು ವಂತಾದರೆ ನೀವು ನಿಜವಾದ “ಭಾರತೀಯರು”. ಇಲ್ಲದಿದ್ದರೆ ಪರಕೀಯರು ಎನಿಸಿಕೊಳ್ಳುತ್ತೀರಿ.

-ಜಿ. ರಾಜೇಂದ್ರ, ಪ್ರಧಾನ ಸಂಪಾದಕ