ಮಡಿಕೇರಿ, ಏ. ೧೯: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೌಡ ಪ್ರೀಮಿಯರ್ ಲೀಗ್ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ ಹಾಗೂ ಕೂರ್ಗ್ ವಾರಿರ‍್ಸ್ ತಂಡಗಳು ಮುನ್ನಡೆ ಸಾಧಿಸಿವೆ.

ದಿನದ ಮೊದಲ ಪಂದ್ಯಾಟದಲ್ಲಿ ಎಂಸಿಬಿ ತಂಡ ಫೀನಿಕ್ಸ್ ಫ್ಲೆöÊಯರ್ಸ್ ಎದುರು ೪೨ ರನ್‌ಗಳಿಂದ ಜಯಗಳಿಸಿತು. ಫೀನಿಕ್ಸ್ ಫ್ಲೆöÊಯರ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಎಂಸಿಬಿ ನಿಗದಿತ ೧೦ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೧೧೭ ರನ್ ಗಳಿಸಿ ೧೧೮ ರನ್‌ಗಳ ಗುರಿ ನೀಡಿತು. ಹರ್ಷಿತ್ ೨೧ ಎಸೆತಕ್ಕೆ ೪೫ ರನ್ ಗಳಿಸಿದರು. ಫೀನಿಕ್ಸ್ ಫ್ಲೆöÊಯರ್ಸ್ ಪರ ಅವಿನ್ ಮಾಲಿ, ವರುಣ್ ಕಾಳೆಯಂಡ, ಚಂದನ್ ರಾಜ್ ಬೇಕಲ್, ಶ್ರೇಯಸ್ ಟಿ.ಕೆ. ಒಂದೊAದು ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಫೀನಿಕ್ಸ್ ಫ್ಲೆöÊಯರ್ಸ್ ೮ ವಿಕೆಟ್ ನಷ್ಟಕ್ಕೆ ೭೫ ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಪ್ರಧಾನ್ ಕಡ್ಲೇರ ೧೧ ಎಸೆತಗಳಲ್ಲಿ ೨೩ ರನ್ ಗಳಿಸಿದರು. ಚಂದನ್‌ರಾಜ್ ಬೇಕಲ್ ೧೧ ಎಸೆತಕ್ಕೆ ೧೮ ರನ್ ಪೇರಿಸಿದರು. ಎಂಸಿಬಿ ಪರ ಮಂಜೀತ್ ೨ ಓವರಿನಲ್ಲಿ ೨ ವಿಕೆಟ್ ಪಡೆದರು.

ಎರಡನೇ ಪಂದ್ಯಾಟದಲ್ಲಿ ಕೂರ್ಗ್ ವಾರಿಯರ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಜಿ. ಕಿಂಗ್ಸ್ ನಿಗದಿತ ೧೦ ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ೫೬ ರನ್ ಗಳಿಸಿ ೫೭ ರನ್‌ಗಳ ಗುರಿ ನೀಡಿತು. ಜಿ.ಕಿಂಗ್ಸ್ ಪರ ಧನಂಜಯ್ ಕುಮಾರ್ ೨೦ ಎಸೆತಕ್ಕೆ ೧೫ ರನ್ ಗಳಿಸಿದರು. ಕೂರ್ಗ್ ವಾರಿಯರ್ಸ್ ಪರ ಮಿಥುನ್ ಕುದುಕುಳಿ ಒಂದು ಓವರಿನಲ್ಲಿ ೩ ವಿಕೆಟ್ ಪಡೆದು ಯಶಸ್ವೀ ಬೌಲರ್ ಎನಿಸಿದರು. ಪುನೀತ್, ಪೃಥ್ವಿ ಮತ್ತು ಮೋಹಿತ್ ತಲಾ ಎರಡು ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಕೂರ್ಗ್ ವಾರಿಯರ್ಸ್ ತಂಡ ಒಂದು ವಿಕೆಟ್ ನಷ್ಟಕ್ಕೆ ೫೭ ರನ್‌ಗಳನ್ನು ಗಳಿಸಿ ಜಯದ ನಗೆ ಬೀರಿತು. ಅನಿಲ್ ಕುಡೆಕಲ್ ೧೩ ಎಸೆತಗಳಿಗೆ ೩೬ ರನ್ ಗಳಿಸಿದರು. ಗೋಪಿತ್ ಬೆಳ್ಳಿಮಾನಿ ೮ ಎಸೆತಗಳಿಗೆ ೧೨ ರನ್ ಗಳಿಸಿದರು. ಜಿ. ಕಿಂಗ್ಸ್ ಪರ ಮೂವನ ಭರತ್ ಒಂದು ವಿಕೆಟ್ ಪಡೆದರು.

ಎಂಸಿಬಿ ಮತ್ತು ಎಲೈಟ್ ತಂಡದ ನಡುವೆ ನಡೆದ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಎಲೈಟ್ ತಂಡ ನಿಗದಿತ ೧೦ ಓವರ್‌ಗೆ ೬ ವಿಕೆಟ್ ನಷ್ಟಕ್ಕೆ ೧೦೧ ರನ್ ಗಳಿಸಿತು. ತಂಡದ ಪರವಾಗಿ ಹೊಸೂರು ಹಿತಕೃತ್ ೨೫ ಎಸೆತಗಳಲ್ಲಿ ೩೩ ರನ್ ಗಳಿಸಿದರು. ಕಾರ್ತಿಕ್ ೨೧ ಎಸೆತದಲ್ಲಿ ೨೦ ರನ್ ಗಳಿಸಿದರು. ಎಂಸಿಬಿ ತಂಡದ ಪರವಾಗಿ ಕುಶ್ವಂತ್ ಕೋಳಿಬೈಲು, ಉಳುವಾರನ ಪ್ರಫುಲ್ ಮತ್ತು ಕೆದಂಬಾಡಿ ಚೇತನ್ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಎಂ.ಸಿ.ಬಿ ತಂಡ ನಿಗದಿತ ೧೦ ಓವರ್ ಗೆ ೫ ವಿಕೆಟ್ ಕಳೆದುಕೊಂಡು ೯೬ ರನ್ ಗಳಿಸಿ ೫ ರನ್ ಗಳಿಂದ ಸೋಲೊಪ್ಪಿಕೊಂಡಿತು. ನಿತಿನ್ ಚೊಕ್ಕಾಡಿ ೧೭ ಎಸೆತದಲ್ಲಿ ೨೩ ರನ್ ಗಳಿಸಿದರು. ಎಲೈಟ್ ತಂಡದ ಪರವಾಗಿ ನಿತಿನ್ ಕುಮಾರ್ ೨ ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಎಡಿಕೇರಿ ಗಣಿತ್, ಶರತ್ ಚೊಕ್ಕಾಡಿ ಮತ್ತು ಯತಿನ್ ತಲಾ ಒಂದು ವಿಕೆಟ್ ಪಡೆದರು.