ನಾಪೋಕ್ಲು, ಏ. ೧೯: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಕುಂಡ್ಯೋಳAಡ ಕಪ್ನ ೨೧ನೇ ದಿನದ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆÀ. ಮಳೆಯ ಕಾರಣದಿಂದ ೪ ಪಂದ್ಯಗಳನ್ನು ಮುಂದೂಡಿಕೆ ಮಾಡಲಾಯಿತು.
ಮೈದಾನ ೧ರಲ್ಲಿ ಮಂಡೇಟಿರ ಮತ್ತು ಪುಳ್ಳಂಗಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಪುಳ್ಳಂಗಡ ತಂಡವು ಮಂಡೇಟಿರ ತಂಡವನ್ನು ೧-೦ ಗೋಲಿನ ಅಂತರದಿAದ ಪರಾಭವಗೊಳಿಸಿತು. ಪುಳ್ಳಂಗಡ ತಂಡದ ಪರ ಪ್ರಧ್ಯುಮ್ನ ಪೊನ್ನಣ್ಣ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಚಂದೂರ ತಂಡವನ್ನು ಪುದಿಯೊಕ್ಕಡ ತಂಡವು ೨-೧ ಗೋಲುಗಳ ಅಂತರದಿAದ ಸೋಲಿಸಿತು. ಪುದಿಯೊಕ್ಕಡ ತಂಡದ ಪರ ಸುಮನ್ ಮತ್ತಣ್ಣ, ಮಿಥುನ್ ಪೊನ್ನಪ್ಪ ತಲಾ ಒಂದೊAದು ಗೋಲು ದಾಖಲಿಸಿದರೆ, ಚಂದೂರ ತಂಡದ ಪರ ಪೂವಣ್ಣ ಒಂದು ಗೋಲು ದಾಖಲಿಸಿದರು. ಅಮ್ಮಣಿಚಂಡ ತಂಡವು ಕೋಡಿಮಣಿಯಂಡ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿತು. ಅಮ್ಮಣಿಚಂಡ ತಂಡದ ಪರ ಬೋಪಣ್ಣ, ಸಂಜು ತಲಾ ಒಂದು ಗೋಲು ದಾಖಲಿಸಿದರು. ಕೊಟ್ಟಂಗಡ ತಂಡವು ೧-೦ ಗೋಲುಗಳಿಂದ ಚೆಟ್ಟಂಗಡ ತಂಡವನ್ನು ಸೋಲಿಸಿತು. ಕೊಟ್ಟಂಗಡ ತಂಡದ ಪರ ರಾಹುಲ್ ಪೊನ್ನಣ್ಣ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಮುಕ್ಕಾಟಿರ (ಬೋಂದ) ಮತ್ತು ಬಿದ್ದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ ಕಾರಣ ನಂತರ ನಡೆದ ಟೈಬ್ರೇಕರ್ನಲ್ಲಿ ಮುಕ್ಕಾಟಿರ ತಂಡವು ಬಿದ್ದಂಡ ತಂಡವನ್ನು ೩-೨ ಗೋಲುಗಳ ಅಂತರದಿAದ ಪರಾಭವಗೊಳಿಸಿತು.
ಮೈದಾನ ೨ರಲ್ಲಿ ಮಣವಟ್ಟಿರ ಮತ್ತು ಚೆಪ್ಪುಡಿರ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಚೆಪ್ಪುಡಿರ ತಂಡವು ಮಣವಟ್ಟಿರ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿತು. ಚೆಪ್ಪುಡಿರ ತಂಡದ ಪರ ಪ್ರಣವ್ ತಿಮ್ಮಯ್ಯ, ಚೇತನ್ ಚಿಣ್ಣಪ್ಪ ತಲಾ ಒಂದು ಗೋಲು ದಾಖಲಿಸಿದರೆ, ಮಣವಟ್ಟಿರ ತಂಡದ ಪರ ಅಪ್ಪಣ್ಣ ಒಂದು ಗೋಲು ದಾಖಲಿಸಿದರು. ಮಾಚಿಮಂಡ ಮತ್ತು ಚೇನಂಡ ತಂಡಗಳ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಸಮ ಬಲ ಸಾಧಿಸಿದ ಹಿನ್ನಲೆಯಲ್ಲಿ ನಂತರ ನಡೆದ ಟೈಬ್ರೇಕರ್ನಲ್ಲಿ ಚೇನಂಡ ತಂಡವು ೫-೪ ಗೋಲುಗಳ ಅಂತರದಿAದ ಮುನ್ನಡೆ ಸಾಧಿಸಿತು. ಚೆಕ್ಕೆರ ತಂಡವು ತೀತಮಾಡ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಚೆಕ್ಕೆರ ತಂಡದ ಪರ ಶಿಯಾನ್ ಬೋಪಣ್ಣ ಎರಡು, ಆದರ್ಶ್, ಆಕರ್ಷ್ ತಲಾ ಒಂದು ಗೋಲು ದಾಖಲಿಸಿದರು. ಕಂಬೀರAಡ ಮತ್ತು ಕೊಂಗೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಂಬೀರAಡ ತಂಡವು ಕೊಂಗೇಟಿರ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು. ಕಂಬೀರAಡ ತಂಡದ ಪರ ಯೋಗೇಶ್ ಅಪ್ಪಯ್ಯ ಮತ್ತು ಬೋಪಣ್ಣ ತಲಾ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಮಳೆಯ ಕಾರಣದಿಂದ ಬೊಟ್ಟೋಳಂಡ - ನೆರವಂಡ, ಚೇಂದAಡ- ಚೀಯಕಪೂವಂಡ, ಚೋಯಮಾಡಂಡ - ಚೆರುಮಂದAಡ, ಕುಲ್ಲಚಂಡ -ಮೇಚಿಯಂಡ ತಂಡದ ಪಂದ್ಯಾಟ ಮುಂದೂಡಲಾಯಿತು. -ಪಿ.ವಿ.ಪ್ರಭಾಕರ್