ಮಡಿಕೇರಿ, ಏ. ೧೯: ವೀರಾಜಪೇಟೆ ವಿಭಾಗದ, ವೀರಾಜಪೇಟೆ ವಲಯದ, ಚೆಯ್ಯಂಡಾಣೆ ಶಾಖೆಗೆ ಒಳಪಡುವ ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಹಲವು ದಿನಗಳಿಂದ ಅಲ್ಲಿನ ಗ್ರಾಮಸ್ಥರ ಗದ್ದೆ ಹಾಗೂ ತೋಟಗಳಿಗೆ ಲಗ್ಗೆಯಿಟ್ಟು ಕೃಷಿ ನಷ್ಟ ಮಾಡುತ್ತಿರುವುದರಿಂದ ಹಾಗೂ ಹೆಚ್ಚು ಉಪಟಳ ನೀಡುತ್ತಿರುವುದರಿಂದ ತಾ.೨೦ರಂದು (ಇಂದು) ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಮರಂದೋಡ ಗ್ರಾಮ ಪಂಚಾಯಿತಿಯವರ ಮನವಿಯ ಮೇರೆಗೆ ಮರಂದೋಡ, ಚೇಲಾವರ, ನರಿಯಂದಡ, ಕೋಕೇರಿ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಮರಳಿ ಕಾಡಿಗೆ ಓಡಿಸುವ ಕಾರ್ಯಾಚರಣೆ ಯನ್ನು ಕೈಗೊಂಡಿರುವುದರಿAದ ತೋಟದ ಕಾರ್ಮಿಕರು ತಮ್ಮ ಕೆಲಸ - ಕಾರ್ಯಗಳನ್ನು ನಿಲ್ಲಿಸುವಂತೆ ಹಾಗೂ ಗ್ರಾಮಸ್ಥರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇದ್ದು, ಕಾಡಾನೆ ಕಾರ್ಯಾಚರಣೆಗೆ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ. ಸದರಿ ಸಮಯದಲ್ಲಿ ಸಾರ್ವಜನಿಕರು ಪಟಾಕಿಗಳನ್ನು ಸಿಡಿಸಬಾರದೆಂದು ಅರಣ್ಯ ಇಲಾಖೆಯವರು ಕೋರಿಕೊಂಡಿದ್ದಾರೆ.