ಗೋಣಿಕೊಪ್ಪಲು, ಏ. ೧೯ : ಕಳೆದ ೧೧ ವರ್ಷಗಳಿಂದ ಯರವ ಕುಟುಂಬದ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಯರವ ಕ್ರೀಡೋತ್ಸವ ಈ ಬಾರಿ ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಮೇ.೧ರಿಂದ ೫ರವರೆಗೆ ನಡೆಯಲಿದೆ. ಈಗಾಗಲೇ ಜಿಲ್ಲೆಯ ೬೫ ಯರವ ಕುಟುಂಬಗಳು ತಮ್ಮ ತಂಡದ ಹೆಸರುಗಳನ್ನು ನೋಂದಾಯಿಸಿ ಕೊಂಡಿವೆ. ಜಿಲ್ಲೆಯ ವಿವಿಧ ಭಾಗದಲ್ಲಿರುವ ಯರವ ಸಮುದಾಯದ ಜನಾಂಗ ವನ್ನು ಒಂದೇ ವೇದಿಕೆ ಯಡಿ ತರುವ ಪ್ರಯತ್ನ ವಾಗಿ ಕ್ರೀಡಾಕೂಟವು ಆಯೋಜಿಸಲಾಗುತ್ತಿದೆ.

ಈ ಬಾರಿ ೧೨ನೇ ವರ್ಷದ ಕ್ರಿಕೆಟ್ ಪಂದ್ಯಾಟವು ತಿರುಮುಂಡೆಲಾತ್ತಿಲಾ ಮನೆತನದ ಹೆಸರಿನಲ್ಲಿ ನಡೆಯಲಿದ್ದು ಈಗಾಗಲೇ ಪಂದ್ಯಾಟಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿವೆ. ಜಿಲ್ಲೆಯ ವಿವಿಧ ಭಾಗದಿಂದ ತಂಡಗಳು ಭಾಗವಹಿಸಲಿವೆ.

ಮೇ.೧ರಿಂದ ೫ರವರೆಗೆ ಈ ಕ್ರೀಡೋತ್ಸವವು ನಡೆಯಲಿದ್ದು ಮಹಿಳೆಯರಿಗಾಗಿಯೇ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಸರ್ಕಾರದ ಅನುದಾನವಿಲ್ಲದೆ ದಾನಿಗಳ ಸಹಕಾರದಿಂದ ಯರವ ಸಮಾಜದ ಯುವ ಉತ್ಸಾಹಿ ಯುವಕರು ಕ್ರೀಡಾಕೂಟದ ಯಶಸ್ವಿಗೆ ದುಡಿಯುತ್ತಿದ್ದಾರೆ. ಕಳೆದ ೧೧ ವರ್ಷಗಳ ಹಿಂದೆ ಆರಂಭಗೊAಡ ಯರವ ಸಮಾಜದ ಕ್ರೀಡಾಕೂಟವು ವರ್ಷದಿಂದ ವರ್ಷಕ್ಕೆ ಆಕರ್ಷಣಿ ಯವಾಗಿ ಮೂಡಿ ಬರುತ್ತಿದೆ. ಸಮುದಾಯದ ಸಾಧಕರನ್ನು ಗುರುತಿಸಿ ವೇದಿಕೆಯಲ್ಲಿ ಅತಿಥಿಗಳ ಸಮ್ಮುಖದಲ್ಲಿ ಗೌರವಿಸಲಾಗುತ್ತದೆ. ಯರವ ಕುಣಿತ, ದುಡಿಕೊಟ್ಟು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಆಕರ್ಷಿಸುತ್ತಿದೆ.

ಯರವ ಸಮಾಜ ವತಿಯಿಂದ ನಡೆಯುವ ಕ್ರೀಡೋತ್ಸವದ ಲಾಂಛನವನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಇವರು ಯರವ ಜನಾಂಗವು ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ನೀಡುತ್ತ ಬಂದಿದೆ. ಸಮಾಜ ಬಾಂಧವರನ್ನು ಒಗ್ಗೂಡಿಸಲು ಕ್ರೀಡೆಯ ಮೂಲಕ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ಸಮಾಜದ ಬಾಂಧವರು ಒಗ್ಗಟ್ಟನ್ನು ಕಾಪಾಡಿಕೊಳ್ಳುವ ಮೂಲಕ ತಮ್ಮ ಆಚಾರ ವಿಚಾರ ಪದ್ದತಿ ಪರಂಪರೆಯನ್ನು ಉಳಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.

ಯರವ ಸಮಾಜದ ಅಧ್ಯಕ್ಷ ಪಿ.ಕೆ.ಸಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯರವ ಸಮಾಜದ ಹಿರಿಯ ಮುಖಂಡರಾದ ಜಿ.ಪಂ. ಮಾಜಿ ಸದಸ್ಯೆ ಪಿ.ಆರ್.ಪಂಕಜ, ತಿತಿಮತಿ ಗ್ರಾ.ಪಂ. ಸದಸ್ಯ ಚುಬ್ರು, ತಾ.ಪಂ. ಮಾಜಿ ಸದಸ್ಯ ರಾಮು, ಲ್ಯಾಂಪ್ ಸೊಸೈಟಿ ಅಧ್ಯಕ್ಷ ಮಣಿಕುಂಞೆ ಸೇರಿದಂತೆ ಯರವ ಸಮಾಜದ ಕಾರ್ಯದರ್ಶಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.

-ಹೆಚ್.ಕೆ.ಜಗದೀಶ್