ಗೋಣಿಕೊಪ್ಪ ವರದಿ, ಏ. ೧೯ : ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ.೨೧ರಿಂದ (ನಾಳೆಯಿಂದ) ಅರಮಣಮಾಡ ಕ್ರಿಕೆಟ್ ನಮ್ಮೆ ಆರಂಭಗೊಳ್ಳಲಿದ್ದು, ಒಟ್ಟು ೩೧೩ ತಂಡಗಳು ಸೆಣೆಸಾಡಲಿವೆ.
ಇದೇ ಪ್ರಥಮ ಬಾರಿಗೆ ಮಹಿಳೆಯರಿಗೂ ಪ್ರತ್ಯೇಕ ಅವಕಾಶ ಮಾಡಿರುವುದರಿಂದ ಹೆಚ್ಚಿನ ತಂಡಗಳು ಪಾಲ್ಗೊಳ್ಳಲು ಅವಕಾಶ ದೊರದೆ. ಪುರುಷರ ೨೬೪ ತಂಡಗಳು, ಮಹಿಳೆಯರ ೪೯ ತಂಡಗಳು ಪಾಲ್ಗೊಳ್ಳುತ್ತಿವೆ. ಬಾಳೆಯಡ ಕಪ್ ನಮ್ಮೆಯಲ್ಲಿ ಭಾಗವಹಿಸಿದ್ದ ೨೫೦ ತಂಡಗಳು ಅತೀ ಹೆಚ್ಚು ಪಾಲ್ಗೊಂಡಿದ್ದ ದಾಖಲೆಯಾಗಿತ್ತು.
ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಮೇ ೧೯ ರವರೆಗೆ ನಮ್ಮೆ ನಡೆಯಲಿದೆ. ತಾ. ೨೧ ರಂದು ಉದ್ಘಾಟನೆ ಸಂದರ್ಭ ಉತ್ತರ ಮತ್ತು ದಕ್ಷಿಣ ಭಾಗದ ತಂಡಗಳ ನಡುವೆ ಪ್ರದರ್ಶನ ಪಂದ್ಯ, ಮಹಿಳೆಯರ ಎರಡು ಅಧಿಕೃತ ಪಂದ್ಯಗಳು ನಡೆಯಲಿವೆ.
ಪುರುಷರ ಕ್ರಿಕೆಟ್ ವಿಜೇತರಿಗೆ ಒಟ್ಟು ೨.೫ ಲಕ್ಷ ನಗದು ಬಹುಮಾನ ನೀಡಲಾಗುವುದು. ಪ್ರಥಮ ತಂಡಕ್ಕೆ ೧ ಲಕ್ಷ, ದ್ವಿತೀಯ ತಂಡಕ್ಕೆ ೭೫ ಸಾವಿರ, ೩ ನೇ ಸ್ಥಾನಕ್ಕೆ ೫೦ ಸಾವಿರ, ೪ ನೇ ಸ್ಥಾನಕ್ಕೆ ೨೫ ಸಾವಿರ ನಗದು ನೀಡಲಾಗುವುದು. ಉತ್ತಮ ಬ್ಯಾಟಿಂಗ್, ಬೌಲರ್, ಕೀಪರ್, ಅಲ್ರೌಂಡರ್, ಅಪ್ ಕಮಿಂಗ್ ಆಟಗಾರ ಪ್ರಶಸ್ತಿ. ಮಹಿಳೆಯರಿಗೆ ನಗದು ರಹಿತವಾಗಿ ಪ್ರಶಸ್ತಿ ನೀಡಲಾಗುವುದು. ಒಟ್ಟು ೨.೫ ಲಕ್ಷ ಮೌಲ್ಯದ ಬೆಳ್ಳಿಯ ಆಭರಣ ಪ್ರಶಸ್ತಿಯಾಗಿ ಸ್ವೀಕರಿಸಲಿದ್ದಾರೆ. ವಿಜೇತ ತಂಡಕ್ಕೆ ೮೨ ಸಾವಿರ ಮೌಲ್ಯದ ಬೆಳ್ಳಿಯ ಕೊಕ್ಕೆತಾತಿ, ದ್ವಿತೀಯ ತಂಡಕ್ಕೆ ೪೮ ಸಾವಿರ ಮೌಲ್ಯದ ಕೊಕ್ಕೆತಾತಿ, ೩ ನೇ ತಂಡಕ್ಕೆ ಪೀಚೆಕತ್ತಿಯ ಬ್ರೋಷ್, ೪ನೇ ತಂಡಕ್ಕೆ ಪೀಚೆಕತ್ತಿ ಬ್ರೋಷ್ ನೀಡಲಾಗುತ್ತದೆ. ಮಹಿಳೆಯರಲ್ಲಿ ಕೂಡ ಉತ್ತಮ ಬ್ಯಾಟಿಂಗ್, ಬೌಲರ್, ಕೀಪರ್, ಅಲ್ರೌಂಡರ್, ಅಪ್ ಕಮಿಂಗ್ ಆಟಗಾರ ಪ್ರಶಸ್ತಿ ನೀಡಲಾಗುತ್ತದೆ.
ಉದ್ಘಾಟನೆ ; ಬೆಳಿಗ್ಗೆ ೮ ಗಂಟೆಗೆ ಬಾಳೆಲೆ ಗಣಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆ ಮೂಲಕ ಮೈದಾನ ಪ್ರವೇಶಿಸಲಾಗುತ್ತದೆ. ೧೦.೪೫ ಕ್ಕೆ ಧ್ವಜರೋಹಣ ನೆರವೇರಿಸಲಾಗುತ್ತದೆ. ಮುಖ್ಯ ಅತಿಥಿಯಾಗಿ (ನಿ) ಮೇ.ಜ. ಪಾರುವಂಗಡ ಎಂ. ಕಾರ್ಯಪ್ಪ, ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ಕೊಡವ ಮಹಿಳಾ ಕ್ರಿಕೆಟ್ ಸ್ಥಾಪಕಿ ಐಚೇಟ್ಟೀರ ಸುನಿತಾ, ಹಾಕಿ ಕರ್ನಾಟಕ ಕಾರ್ಯದರ್ಶಿ ಡಾ. ಅಂಜಪರವAಡ ಬಿ. ಸುಬ್ಬಯ್ಯ, ಕೆ.ಎ.ಎಸ್. ಅಧಿಕಾರಿ ಚೊಟ್ಟೆಯಂಡಮಾಡ ಕೆ. ರಾಜೇಂದ್ರ, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ, ವಿಜಯಲಕ್ಷಿö್ಮ ಜೂನಿಯರ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುಕ್ಕಾಟೀರ ಜಾನಕ್ಕಿ ಕಾವೇರಪ್ಪ ಪಾಲ್ಗೊಳ್ಳಲಿದ್ದಾರೆ.