ನಾಪೋಕ್ಲು, ಏ. ೧೯: ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ೩ನೇ ವರ್ಷದ ಕೊಡವ ಕೌಟುಂಬಿಕ ಬೊಟ್ಟೋಳಂಡ ಕಪ್ ಹಗ್ಗಜಗ್ಗಾಟದ ೨ನೇ ದಿನದ ಪಂದ್ಯಾಟದಲ್ಲಿ ಪುರುಷ ಮತ್ತು ಮಹಿಳೆಯರ ಒಟ್ಟು ೫೯ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಮಹಿಳಾ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಬೊಳ್ಳಂಡ, ಪುದಿಯೊಕ್ಕಡ, ಆಪಾಡಂಡ, ಬಟ್ಟೀರ, ಕೇಲೇಟಿರ, ಉಳುವಂಗಡ, ಕಾಳಿಮಾಡ, ಚೆನ್ನಪಂಡ, ಮಾಣಿರ(ವೆಸ್ಟ್ ನೆಮ್ಮಲೆ) ಮಾದೇಯಂಡ(ಬಲ್ಲಮಾವಟಿ), ಮೀದೇರಿರ, ನಾಪಂಡ, ಮೇಚಿಯಂಡ, ಕೊಟ್ಟಂಗಡ, ಬಲ್ಲಡಿಚಂಡ, ಅಲ್ಲಾರಂಡ, ಕೊಟ್ಟುಕತ್ತಿರ ಸೇರಿದಂತೆ ಒಟ್ಟು ೨೧ ತಂಡಗಳು ಮುನ್ನಡೆ ಸಾಧಿಸಿವೆ.

ಪುರುಷರ ನಡುವೆ ನಡೆದ ಪಂದ್ಯದಲ್ಲಿ ಕೇಲೇಟಿರ, ಕುಟ್ಟಂಜ್ಜೇಟ್ಟಿರ, ಚೋಕಿರ, ಪರುವಂಡ, ಬೂವಾಡಿರ, ಉಳುವಂಗಡ, ಶಿವಚಾಳಿಯಂಡ, ಸರ್ಕಂಡ, ಕುಂಡ್ಯೋಳAಡ, ಪೊರ್ಕೋಂಡ, ಮಾಚಿಮಂಡ, ನಾಟೋಳಂಡ, ಕರವಂಡ, ಅಪ್ಪುಮಣಿಯಂಡ, ಚೆಟ್ಟಂಗಡ, ಚಿಂಡುಳಿರ, ಕಲಿಯಂಡ, ಅಲ್ಲುಮಾಡ, ಕಾಂಡAಡ, ಚೆರುವಾಳಂಡ, ಚೀರಂಡ, ಮಲ್ಲಂಡ ಸೇರಿದಂತೆ ಒಟ್ಟು ೩೮ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿವೆ.

ಮಳೆಯ ಕಾರಣದಿಂದ ಪುರುಷರ ೧೦ ಮತ್ತು ಮಹಿಳೆಯರ ೫ ಪಂದ್ಯಗಳನ್ನು ಮುಂದೂಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

-ಪಿ.ವಿ.ಪ್ರಭಾಕರ್