ಸಿದ್ದಾಪುರ, ಏ. ೧೬: ಹಾಡಹಗಲೇ ಕರಡಿಗೋಡು ಗ್ರಾಮದಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳ ಹಿಂಡಿನಿAದ ಅಪಾರ ಪ್ರಮಾಣದ ಕೃಷಿ ಫಸಲು ನಾಶವಾಗುವ ಮೂಲಕ ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ.

ದಿನನಿತ್ಯ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳ ಹಾವಳಿಯಿಂದ ಸುತ್ತಮುತ್ತಲ ನಿವಾಸಿಗಳು ಭಯದಲ್ಲಿ ದಿನದೂಡುವಂತಾಗಿದೆ. ಕಾಫಿ, ಮೆಣಸು, ಬಾಳೆ, ತೆಂಗು, ಅಡಿಕೆ, ಗೆಣಸು ಸೇರಿದಂತೆ ಇತರ ಕೃಷಿ ಫÀಸಲುಗಳನ್ನ ಕಾಡಾನೆಗಳು ತುಳಿದು, ತಿಂದು ನಾಶ ಮಾಡುತ್ತಿವೆ. ದುಬಾರೆ ಅರಣ್ಯ ವ್ಯಾಪ್ತಿಯಿಂದ ತೋಟಗಳತ್ತ ಲಗ್ಗೆಯಿಡುತ್ತಿರುವ ಕಾಡಾನೆಗಳ ಹಿಂಡುಗಳನ್ನು ಸೆರೆಹಿಡಿದು ಸ್ಥಳಾಂತರಿಸುವAತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಅರಣ್ಯಕ್ಕೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ. ತೋಟದಿಂದ ಕಾಡಿಗೆ ಹೋದ ಆನೆಗಳು ಮತ್ತೆ ಅದೇ ಮಾರ್ಗವಾಗಿ ವಾಪಸ್ ಬರುತ್ತಿವೆ. ಸಿದ್ದಾಪುರ ಕರಡಿಗೋಡು ರಸ್ತೆಯ ಸರಳ ಎಂಬವರಿಗೆ ಸೇರಿದ ಒಂದು ಎಕರೆ ಜಾಗದಲ್ಲಿ ಬಾಳೆ, ತೆಂಗು, ಅಡಿಕೆ, ಗೆಣಸು ಸೇರಿದಂತೆ ಇತರ ಕೃಷಿ ಫಸಲುಗಳನ್ನು ಕಳೆದೆರಡು ದಿನಗಳಿಂದ ದಾಳಿ ಮಾಡಿ ನಾಶಪಡಿಸಿವೆ. ಇದೇ ರೀತಿ ಅನೇಕ ಕಡೆಗಳಲ್ಲಿ ದಾಳಿ ನಡೆಸಿ ಫಸಲುಗಳನ್ನು ಹಾಳುಗೆಡುತ್ತಿವೆ.

-ಎಸ್.ಎಂ ಮುಬಾರಕ್