ಮಡಿಕೇರಿ, ಏ. ೧೫: ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಕೊಡಗಿನ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಅವರು ನೇಮಕಗೊಂಡಿದ್ದು ತಾ.೧೬ ರಂದು(ಇAದು) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ತಿತಿಮತಿ ನೊಕ್ಯ ಗ್ರಾಮದವರಾದ ಉಚ್ಚ ನ್ಯಾಯಾಲಯದ ವಕೀಲರಾಗಿದ್ದ ಮೊಣ್ಣಪ್ಪ ಹಾಗೂ ಶೈಲಾ ದಂಪತಿಯ ಪುತ್ರರಾಗಿರುವ ಪೂಣಚ್ಚ ಅವರು ೨೦೨೨ರ ಜೂನ್ ೧೩ ರಂದು ೨ ವರ್ಷಗಳ ಅವಧಿಗೆ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ವರ್ಷ ಜನವರಿ ೨೦ ರಂದು ಕರ್ನಾಟಕದ ಚೀಫ್ ಜಸ್ಟಿಸ್ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಹೈಕೋರ್ಟ್ ಕೊಲಿಜಿಯಮ್, ಪೂಣಚ್ಚ ಅವರನ್ನು ಶಾಶ್ವತವಾಗಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ಮಾಡುವಂತೆ ಶಿಫಾರಸ್ಸು ಮಾಡಿತ್ತು. ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ಒಪ್ಪಿಗೆ ಮೇರೆಗೆ ತಾ.೧೫ ರಂದು ಕೇಂದ್ರ ಸರಕಾರ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಸಿ.ಎಂ ಪೂಣಚ್ಚ ಅವರನ್ನು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದೆ.