ಮಡಿಕೇರಿ, ಏ. ೧೫: ಕೊಡಗು ಜಿಲ್ಲೆಯ ಒಕ್ಕಲಿಗ ಮತ್ತು ಅರೆಭಾಷೆ ಗೌಡರ ಮುಖಂಡರುಗಳ ಸಭೆಯನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಚಿವ ಕೆ. ವೆಂಕಟೇಶ್ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ನ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ. ಲಕ್ಷö್ಮಣ್ ಸಮ್ಮುಖದಲ್ಲಿ ತಾ.೧೪ ರಂದು ಮಡಿಕೇರಿಯ ಮೇಲಿನ ಗೌಡ ಸಮಾಜದಲ್ಲಿ ನಡೆಸಲಾಯಿತು.

ಕೆ. ವೆಂಕಟೇಶ್ ಅವರು ಮಾತನಾಡಿ, ಕೊಡಗು ಜಿಲ್ಲೆಯ ಒಕ್ಕಲಿಗರು ಮತ್ತು ಅರೆಭಾಷೆ ಗೌಡರು ಈ ಬಾರಿ ಮೈಸೂರು ಕೊಡಗು ಲೋಕಸಭಾ ಅಭ್ಯರ್ಥಿಯಾದ ಎಂ. ಲಕ್ಷö್ಮಣ್ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ೫ ಗ್ಯಾರಂಟಿಗಳನ್ನು ನೀಡುತ್ತೇವೆಂದು ಆಶ್ವಾಸನೆ ಕೊಟ್ಟಂತೆ ಈಡೇರಿಸಿದೆ. ಗ್ಯಾರಂಟಿಯ ಫಲ ಎಲ್ಲಾ ಜಾತಿಯ ಜನರಿಗೆ ಚಾಚೂ ತಪ್ಪದೇ ತಲುಪುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಬರುವ ಎಲ್ಲಾ ವಿಶ್ವಾಸ ಇದೆ ಮತ್ತು ಕೇಂದ್ರ ಸರಕಾರದಿಂದ ೫ ನ್ಯಾಯದ ಗ್ಯಾರಂಟಿಗಳನ್ನು ಘೋಷಣೆ ಮಾಡುವುದಲ್ಲದೆ ಲಿಖಿತವಾಗಿ ಕಾಂಗ್ರೆಸ್ ರಾಷ್ಟಾçಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಹಿ ಮಾಡಿರುವ ಕಾರ್ಡ್ಗಳನ್ನು ಮನೆ ಮನೆಗೆ ತಲುಪಿಸಲಾಗುತ್ತಿದೆ. ಮೈಸೂರು-ಕೊಡಗು ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ ೧೦ ವರ್ಷಗಳಿಂದ

(ಮೊದಲ ಪುಟದಿಂದ) ಇದ್ದ ಬಿ.ಜಿ.ಪಿ ಸಂಸದ ಯಾವ ಯೋಜನೆಯನ್ನು ತರಲಿಲ್ಲ. ನಮ್ಮ ಅಭ್ಯರ್ಥಿ ಎಂ. ಲಕ್ಷö್ಮಣ್ ಅವರು ಗೆಲುವನ್ನು ಸಾಧಿಸಿದರೆ ಎರಡು ಜಿಲ್ಲೆಗಳಿಗೆ ಯೋಜನೆಗಳನ್ನು ತರುವುದರ ಮೂಲಕ ಅಭಿವೃದ್ಧಿಪಡಿಸಲು ಶ್ರಮಿಸುತ್ತಾರೆ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ೪೭ ವರ್ಷಗಳ ನಂತರ ಒಕ್ಕಲಿಗ ಸಮುದಾಯಕ್ಕೆ ಈ ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಮುದಾಯದ ಎಂ. ಲಕ್ಷö್ಮಣ್ ಅವರಿಗೆ ಟಿಕೆಟ್ ನೀಡಿದ್ದೇವೆ. ಈ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಮತದಾರರು ಇರುವುದರಿಂದ ಪೂರ್ತಿ ಪ್ರಮಾಣದಲ್ಲಿ ಲಕ್ಷö್ಮಣ್ ಅವರಿಗೆ ಬೆಂಬಲಿಸಬೇಕೆAದು ಮನವಿ ಮಾಡಿದರು. ಎಂ. ಲಕ್ಷö್ಮಣ್ ಅವರು ಸರಳ ಸಜ್ಜನಿಕೆಯ ಒಬ್ಬ ಸಾಮಾನ್ಯ ಪ್ರಜೆ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಇವರು ೨೪ ಗಂಟೆಗಳಲ್ಲೂ ಜನಸಾಮಾನ್ಯರಿಗೆ ಸಿಗುವಂತಹ ಅಭ್ಯರ್ಥಿ. ಇವರಿಂದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ ಎಂದು ನಾನು ಗ್ಯಾರಂಟಿಯನ್ನು ಕೊಡುತ್ತೇನೆ ಎಂದರು.

ಅಭ್ಯರ್ಥಿ ಎಂ. ಲಕ್ಷö್ಮಣ್ ಅವರು ಮಾತನಾಡಿ, ಸಮುದಾಯದ ಸೇವೆಯನ್ನು ಮಾಡಲು ಮತ್ತು ಕ್ಷೇತ್ರದ ಜನತೆಯ ಆಶೋತ್ತರಗಳನ್ನು ಈಡೇರಿಸಲು ನನಗೊಂದು ಅವಕಾಶ ನೀಡಬೇಕು ಎಂದರು. ಈಗಾಗಲೇ ನಾಲ್ಕು ಚುನಾವಣೆಗಳಲ್ಲಿ ನಾನು ಸೋತಿದ್ದೇನೆ. ಆದರೂ ಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಿ ಮತ್ತೊಮ್ಮೆ ಕೊನೆಯ ಅವಕಾಶವನ್ನು ನೀಡಿದೆ. ಈ ಬಾರಿ ಹೇಗಾದರೂ ಮಾಡಿ ನನ್ನನ್ನು ಗೆಲ್ಲಿಸಿಕೊಡಿ. ನಿಮ್ಮ ಸೇವೆಗೆ ಅವಕಾಶ ಕಲ್ಪಿಸಿ ಎಂದರು.

ಶಾಸಕÀ ಮಂತರ್ ಗೌಡ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ ನನ್ನನ್ನು ಕೈ ಹಿಡಿದಿದ್ದರಿಂದ ನಾನು ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಅದೇ ರೀತಿ ಎಂ. ಲಕ್ಷö್ಮಣ್ ಅವರನ್ನು ಕೈ ಹಿಡಿಯಬೇಕೆಂದು ಮನವಿ ಮಾಡುತ್ತೇನೆಂದು ಹೇಳಿದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷÀ ಸೂರ್ತಲೆ ಸೋಮಣ್ಣ ಅವರು ಮಾತನಾಡಿ ಎಂ. ಲಕ್ಷö್ಮಣ್ ಅವರನ್ನು ಬೆಂಬಲಿಸಲು ಸಮುದಾಯದವರಿಗೆ ಕೆರೆ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗ ಸಮುದಾಯದ ಅಧ್ಯಕ್ಷ ಎಸ್.ಎಂ ಚೆಂಗಪ್ಪ ಮತ್ತು ಸೋಮವಾರಪೇಟೆ ಒಕ್ಕಲಿಗ ಸಂಘದ ಅಧ್ಯಕ್ಷ ಮುತ್ತಣ್ಣ ಅವರು ಕೂಡ ಎಂ. ಲಕ್ಷö್ಮಣ್ ಅವರನ್ನು ಬೆಂಬಲಿಸಲು ಕರೆ ನೀಡಿದರು. ಸಮುದಾಯದ ಮುಖಂಡರು ಸೇರಿದಂತೆ ಸುಮಾರು ೨೫೦ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.