ಸೋಮವಾರಪೇಟೆ, ಏ. ೧೫: ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ಶ್ರೀ ರಾಮನವಮಿ ಉತ್ಸವ ಸಮಿತಿಯ ಮೂಲಕ ಪಟ್ಟಣದಲ್ಲಿ ತಾ. ೧೭ರಂದು (ನಾಳೆ) ರಾಮನವಮಿ ಉತ್ಸವ ಜರುಗಲಿದ್ದು, ಶೋಭಾಯಾತ್ರೆ ಗಾಗಿ ಸೋಮವಾರಪೇಟೆ ಪಟ್ಟಣ ಕೇಸರಿಮಯವಾಗಿದೆ. ಇಲ್ಲಿನ ಶ್ರೀ ಆಂಜನೇಯ ದೇವಾಲಯ ಸಮಿತಿಯ ವತಿಯಿಂದ ರಾಮನವಮಿ ಅಂಗವಾಗಿ ದೇವಾಲಯ ದಲ್ಲಿ ವಿಶೇಷ ಪೂಜೆಗಳು ನೆರವೇರುತ್ತಿದ್ದು, ತಾ. ೧೭ರಂದು ಶ್ರೀರಾಮನ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ.

ರಾಮನವಮಿ ಉತ್ಸವಕ್ಕೆ ಹಿಂದೂ ಜಾಗರಣಾ ವೇದಿಕೆ ಇನ್ನಷ್ಟು ಮೆರುಗು ತಂದಿದ್ದು, ಉತ್ಸವವನ್ನು ಹಬ್ಬವನ್ನಾಗಿ ಕಳೆದ ಐದಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ತಾ. ೧೭ರಂದು ಸಂಜೆ ೬.೩೦ ಗಂಟೆಯಿAದ ಪಟ್ಟಣದಲ್ಲಿ ಅದ್ದೂರಿ ಶೋಭಾ ಯಾತ್ರೆ ನಡೆಯಲಿದೆ.

ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗಗಳಿಂದ ಒಟ್ಟು ೧೦ ಸ್ತಬ್ಧಚಿತ್ರಗಳು ಈ ಬಾರಿಯ ಶೋಭಾಯಾತ್ರೆಯಲ್ಲಿ ಭಾಗವಹಿಸಲಿವೆ. ಇದರೊಂದಿಗೆ ಕಲ್ಲಡ್ಕದ ಗೊಂಬೆ ಕುಣಿತ, ಕೇರಳದ ಚೆಂಡೆ ವಾದ್ಯ, ನಾಸಿಕ್ ಬ್ಯಾಂಡ್, ಮೈಸೂರಿನ ಹುಲಿವೇಷ ನೃತ್ಯ ತಂಡ ಸೇರಿದಂತೆ ಇನ್ನಿತರ ಆಕರ್ಷಣೆಗಳು ಮೆರವಣಿಗೆಯಲ್ಲಿರಲಿವೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಸುಭಾಷ್ ತಿಳಿಸಿದ್ದಾರೆ.

ವೇದಿಕೆಯ ಆಶ್ರಯದಲ್ಲಿ ಶ್ರೀ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿದ್ದು, ಮಧ್ಯಾಹ್ನ ಮತ್ತು ಸಂಜೆ ಸಾವಿರಾರು ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿದೆ. ಸಂಜೆ ೬.೩೦ಕ್ಕೆ ದೇವಾಲಯದಿಂದ ಶೋಭಾಯಾತ್ರೆ ಆರಂಭಗೊಳ್ಳಲಿದ್ದು, ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಲಿವೆ. ರಾಮನ ವಿಗ್ರಹದ ಮೆರವಣಿಗೆ, ಕಲಾತಂಡಗಳ ಪ್ರದರ್ಶನ, ಪಟಾಕಿ ಸಿಡಿಮದ್ದಿನ ಪ್ರದರ್ಶನ ಆಯೋಜನೆಗೊಂಡಿದೆ ಎಂದು ಉತ್ಸವ ಸಮಿತಿ ಉಪಾಧ್ಯಕ್ಷ ಎಂ.ಬಿ. ಉಮೇಶ್ ಮಾಹಿತಿ ನೀಡಿದ್ದಾರೆ.

ರಾಮನವಮಿ ಅಂಗವಾಗಿ ಪಟ್ಟಣವನ್ನು ಕೇಸರಿ ಬಂಟಿAಗ್ಸ್ಗಳಿAದ ಅಲಂಕರಿಸಲಾಗಿದೆ. ಪಟ್ಟಣದ ಕಕ್ಕೆಹೊಳೆ ಜಂಕ್ಷನ್, ಖಾಸಗಿ ಬಸ್ ನಿಲ್ದಾಣ ಕೇಸರಿಮಯವಾಗಿದೆ. ಶೋಭಾಯಾತ್ರೆ ಯಲ್ಲಿ ಪಟ್ಟಣ ಸುತ್ತಮುತ್ತಲ ಗ್ರಾಮಗಳಿಂದ ಒಟ್ಟು ೧೦ ಸ್ತಬ್ಧಚಿತ್ರಗಳು ಆಗಮಿಸಲಿವೆ. ಉತ್ಸವವು ಕಾನೂನು ಸುವ್ಯವಸ್ಥೆಯೊಳಗೆ ನಡೆಯುವಂತೆ ಮಾಡಲು ಪೊಲೀಸ್ ಇಲಾಖೆ ಕ್ರಮವಹಿಸಿದ್ದು, ಉತ್ಸವ ಸಮಿತಿಯ ಪ್ರಮುಖರನ್ನು ಒಳಗೊಂಡAತೆ ಸಭೆ ನಡೆಸಿ ನಿರ್ದೇಶನಗಳನ್ನು ನೀಡಿದೆ.ಮಡಿಕೇರಿ: ನಗರದ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯದ ವತಿಯಿಂದ ಶ್ರೀ ರಾಮಮಂದಿರ ಟ್ರಸ್ಟ್, ಶ್ರೀರಾಮ ಸೇವಾ ಸಮಿತಿ, ಜ್ಯೋತಿ ಯುವಕ ಸಂಘ, ಕೋದಂಡ ರಾಮ ಭಜನಾ ಮಂಡಳಿ ಸಹಯೋಗದೊಂದಿಗೆ ತಾ.೧೭(ನಾಳೆ) ರಂದು ಪುನರ್ ಪ್ರತಿಷ್ಠಾಪನ ವಾರ್ಷಿಕೋತ್ಸವ ಹಾಗೂ ರಾಮನವಮಿ ಉತ್ಸವ ನಡೆಯಲಿದ್ದು, ಇದರ ಅಂಗವಾಗಿ ದೇವಾಲಯದಲ್ಲಿ ಸಿದ್ಧತೆ ನಡೆಯುತ್ತಿದೆ. ದೇವಾಲಯ ಅಲಂಕಾರ ಸೇರಿದಂತೆ, ಬಂಟಿAಗ್ಸ್ ಅಳವಡಿಕೆ, ಅಲಂಕೃತ ದೀಪ ಅಳವಡಿಸುವ ಕಾರ್ಯ ನಡೆದಿದೆ. ದೇವಾಲಯದ ಆವರಣವನ್ನು ಮಹಿಳೆಯರು ಸ್ವಚ್ಛಗೊಳಿಸಿ ಉತ್ಸವಕ್ಕೆ ಸಿದ್ಧಪಡಿಸಿದ್ದಾರೆ.

ತಾ.೧೭ ರ ಬೆಳಿಗ್ಗೆ ೭.೩೦ಕ್ಕೆ ತತ್ವ ಕಲಶ ಹೋಮ, ನವಗ್ರಹ ಹೋಮ, ತತ್ವ ಕಲಶಾಭಿಷೇಕ, ಮಹಾಮಂಗಳಾರತಿ, ೯ ಗಂಟೆಗೆ ದೇವಾಲಯದ ಆವರಣದಿಂದ ಉತ್ಸವ ಮೂರ್ತಿ ಹೊತ್ತ ಹೂವಿನ ಅಲಂಕೃತ ಮಂಟಪದೊAದಿಗೆ ನಗರದ ಮುಖ್ಯಬೀದಿಗಳಲ್ಲಿ ಮೆರವಣಿಗೆ, ೧೨.೩೦ಕ್ಕೆ ದೇವಾಲಯದಲ್ಲಿ ಮಹಾಮಂಗಳಾರತಿ ಬಳಿಕ ಕೋಸಂಬರಿ ಪಾನಕ ವಿತರಣೆ ನಡೆದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಲಿದೆ.