ಭಾಗಮಂಡಲ, ಏ. ೧೫: ಬೇಸಿಗೆ ಶಿಬಿರಗಳು ಮಕ್ಕಳು ತಮ್ಮ ಹವ್ಯಾಸಗಳನ್ನು ವೃದ್ಧಿಸಿಕೊಳ್ಳಲು ಒಂದು ಉತ್ತಮ ವೇದಿಕೆ ಎಂದು ಚೇರಂಬಾಣೆಯ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಕವನ್ ಕುದುಪಜೆ ಹೇಳಿದರು.

ಭಾಗಮಂಡಲ ನಾಡು ಗೌಡ ಯುವ ಒಕ್ಕೂಟ ಮತ್ತು ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ರಜಾ ದಿನಗಳು ಸದುಪಯೋಗ ಆಗಲಿ ಎನ್ನುವ ಉದ್ದೇಶದಿಂದ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಶಿಬಿರದಲ್ಲಿ ಪಾಲ್ಗೊಂಡು ಹೊಸ ಹೊಸ ವಿಷಯಗಳನ್ನು ಕಲಿಯುವಂತೆ ಆಗಲಿ. ಪೋಷಕರು ಕೂಡ ಸಂಪೂರ್ಣ ಸಹಕಾರ ನೀಡುವಂತಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಭಾಗಮಂಡಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿವಾಕರ್ ಮಾತನಾಡಿ ಮೊದಲು ಮಕ್ಕಳು ಪ್ರಕೃತಿಯೊಡನೆ ಬೆರೆತು ರಜೆ ದಿನಗಳ ಸದುಪಯೋಗ ಮಾಡಿಕೊಳ್ಳುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಶಿಬಿರದ ಅವಶ್ಯಕತೆ ಇದೆ. ಉತ್ತಮವಾದ ಹವ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿ ತೆಕ್ಕಡೆ ಕುಮಾರಸ್ವಾಮಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಕುದುಕುಳಿ ಕಿಶೋರ್ ಕುಮಾರ್ ವಹಿಸಿದ್ದರು

ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸಕ ವಿವಿ ಶಿವಪ್ಪ ಶಿಕ್ಷಕರಾದ ಜರಿತ ಕೇಕಡ, ಬೃಂದ ಕುದುಪಜೆ, ಯೋಗಾಸನ ತರಬೇತಿಗಾರ್ತಿ ಅನಿತಾ, ಉಪನ್ಯಾಸಕರಾದ ದಾಮೋದರ್, ಶಿವಪ್ಪ, ಕಾರ್ಯದರ್ಶಿ ನಿಡ್ಯಮಲೆ ಚಲನ್, ಒಕ್ಕೂಟದ ನಿರ್ದೇಶಕರುಗಳಾದ ನಿಡ್ಯಮಲೆ ರವೀಂದ್ರ, ಕುದುಕುಳಿ ಅಶ್ವಥ್. ಕುಯ್ಯಮುಡಿ ಸುನಿಲ್, ಬಾರಿಕೆ ದೀಪಕ್, ಕೋಳಿಬೈಲು ಸುರೇಂದ್ರ, ಬಾರಿಕೆ ಶೈಲಜಾ, ಬಾಲು ಉಪಸ್ಥಿತರಿದ್ದರು.