ಮಡಿಕೇರಿ, ಏ. ೧೫: ಮಡಿಕೇರಿ ಎಫ್.ಎಂ.ಸಿ ಕಾಲೇಜಿನ ವಿದ್ಯಾರ್ಥಿನಿ ಪ್ರಿಯ ಕೆ (೧೭) ನಾಪತ್ತೆಯಾಗಿರುವುದಾಗಿ ಆಕೆಯ ಸಂಬAಧಿ ಜಾನು ಎಂಬವರು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಡಿಕೇರಿ ಬಾಲಮಂದಿರದಲ್ಲಿ ೧೦ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದ ಪ್ರಿಯ ಅವರು, ನಂತರದಲ್ಲಿ ನೆಂಟರಿಷ್ಟರಾದ ಜಾನು ಅವರ ಮನೆಯಲ್ಲಿ ವಾಸಿಸುತ್ತಿದ್ದರು. ಜನವರಿ ೨೨ ರಂದು ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟವಳು ಇದುವರೆಗೆ ಮನೆಗೆ ಬಂದಿಲ್ಲ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯುವತಿ ಬಗ್ಗೆ ಮಾಹಿತಿ ದೊರೆತಲ್ಲಿ ಕುಶಾಲನಗರ ಗ್ರಾಮಾಂತರ ಠಾಣೆ, ದೂ: ೦೮೨೭೬-೨೭೮೪೩೩ ಅನ್ನು ಸಂಪರ್ಕಿಸುವAತೆ ಕೋರಿದೆ.