ಮಡಿಕೇರಿ, ಏ. ೧೫: ಪರಿಶಿಷ್ಟ ಮೋರ್ಚಾ ಅಧ್ಯಕ್ಷರು ಕಾಂಗ್ರೆಸ್ ಅವರಿಂದಲೇ ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಅವರು ಚುನಾವಣೆ ಸೋತಿದ್ದರು ಎಂದು ನೀಡಿರುವ ಹೇಳಿಕೆ ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಟಿ.ಇ ಸುರೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ವಿರುದ್ಧವೇ ನಡೆದುಕೊಳ್ಳುವ ಬಿ.ಜೆ.ಪಿಯು ಈ ರೀತಿ ಹೇಳಿಕೆ ಮಾಡಿರುವುದು ಹಾಸ್ಯಾಸ್ಪದ. ಅಂಬೇಡ್ಕರ್ ಅವರು ಎಸ್.ಸಿ, ಎಸ್.ಟಿ ಸಮುದಾಯ ದವರು ತಲೆ ಎತ್ತಿ ಬದುಕಲು ದಾರಿ ಮಾಡಿರುವ ಮಹಾನ್ ವ್ಯಕ್ತಿ . ಇಂತಹ ವ್ಯಕ್ತಿ ಸಿದ್ಧಪಡಿಸಿರುವ ಸಂವಿಧಾನವನ್ನು ಬದಲಾಯಿಸು ತ್ತೇವೆ, ನಾಶ ಮಾಡುತ್ತೇವೆ ಎಂದು ಬಿ.ಜೆ.ಪಿಯ ರಾಜ್ಯ ನಾಯಕರು ಹೇಳುತ್ತಿದ್ದು, ಬಿ.ಜೆ.ಪಿಯ ಅಜೆಂಡಾ ಏನು ಎಂಬುದು ಈ ಮೂಲಕ ತಿಳಿಯುತ್ತದೆ. ಈ ನಡುವೆ ಕೊಡಗು ಜಿಲ್ಲಾ ಬಿ.ಜೆ.ಪಿಯು ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಿಗೆ ವಿರುದ್ಧ ಎಂಬAತಹ ಹೇಳಿಕೆಯನ್ನು ನೀಡಿರುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷವು ಬಡವರ, ದಲಿತರ ಪರವಾಗಿದೆ. ಸಂವಿಧಾನಕ್ಕೆ ಬದ್ಧ ಪಕ್ಷವಾಗಿದೆ ಎಂದರು.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರಸ್ ತನ್ನ ೫ ವರ್ಷಗಳ ಪ್ರಸ್ತುತ ಆಡಳಿತದ ಅವಧಿಯುದ್ದಕ್ಕೂ ಗ್ಯಾರಂಟಿ ಯೋಜನೆಗಳನ್ನು ಪೂರೈಸಲಿದೆ. ರಾಷ್ಟçದಲ್ಲಿ ಅಧಿಕಾರ ಹಿಡಿದರೆ ಮತ್ತಷ್ಟು ವಿವಿಧ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಿದೆ. ಪಕ್ಷವು ಜನರ ವಿಶ್ವಾಸ ಗಳಿಸಿದ್ದಲ್ಲದೆ , ಜನರ ನಂಬಿಕೆಗೆ ಪಾತ್ರವಾಗಿದೆ. ವಿದ್ಯಾವಂತ ಮತದಾರರು ಈ ಬಾರಿ ಕೊಡಗು-ಮೈಸೂರು ಕ್ಷೇತ್ರದಲ್ಲಿ ಎಂ ಲಕ್ಷö್ಮಣ್ ಅವರನ್ನು ಗೆಲ್ಲಿಸಲಿದ್ದಾರೆ ಎಂದರು.

ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಜನಾರ್ಧನ್ ಜೆ.ಎಲ್ ಮಾತನಾಡಿ, ಕಾಂಗ್ರೆಸ್ ಬಡವರ ಹಾಗೂ ದಲಿತರ ಪರವಾಗಿದೆ. ಕೊಡಗು-ಮೈಸೂರು ಕ್ಷೇತ್ರದಲ್ಲಿ ದಲಿತರು ನಿರ್ಣಾಯಕ ಮತದಾರರು. ದಲಿತ ಸಂಘಗಳು ಕೂಡ ಕಾಂಗ್ರೆಸ್‌ಗೆ ಬೆಂಬಲ ನೀಡಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಉಪಾಧ್ಯಕ್ಷ ವಿ. ಸಂದೀಪ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಉಪಾಧ್ಯಕ್ಷ ಆರ್.ಪಿ ಚಂದ್ರಶೇಖರ್ ಇದ್ದರು.