ಮಡಿಕೇರಿ, ಏ.೧೫: ಇದುವರೆಗೆ ಕಾಂಗ್ರೆಸ್ ಪಕ್ಷ ದಲಿತ ಸಮುದಾಯದವರನ್ನು ತನ್ನ ಮತ ಬ್ಯಾಂಕ್ ಆಗಿ ಪರಿಗಣಿಸುತ್ತಿತ್ತೇ ವಿನಃ ಯಾವುದೇ ಸ್ಥಾನಮಾನ ನೀಡಿರಲಿಲ್ಲ, ಸ್ಥಾನಮಾನ ನೀಡಿದ್ದು ಬಿಜೆಪಿ ಸರಕಾರ ಎಂದು ಬಿಜೆಪಿ ಪರಿಶಿಷ್ಟ ಮೋರ್ಚಾ ಹೇಳಿಕೆ ನೀಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋರ್ಚಾದ ಅಧ್ಯಕ್ಷ ಪಿ.ಎಂ. ರವಿ ಮೊಗೇರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ೧.೫೦ ಲಕ್ಷದಷ್ಟು ಮತದಾರರಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಅವರುಗಳ ಮತಗಳೇ ನಿರ್ಣಾಯಕವಾಗಲಿವೆ. ಇದುವರೆಗೆ ಕಾಂಗ್ರೆಸ್ ಪಕ್ಷ ದಲಿತರನ್ನು ಮತ ಬ್ಯಾಂಕ್‌ಗಳನ್ನಾಗಿ ಮಾಡಿಕೊಂಡಿತ್ತು. ಯಾವದೇ ಸ್ಥಾನ ನೀಡಿರಲಿಲ್ಲ. ಇದೀಗ ಬಿಜೆಪಿ ನೇತೃತ್ವದ ಮೋದಿ ಸರಕಾರ ಬಂದ ಬಳಿಕ ಎಲ್ಲಾ ಕ್ಷೇತ್ರಗಳಲ್ಲೂ ದಲಿತರಿಗೆ ಸ್ಥಾನಮಾನ ನೀಡಲಾಗಿದೆ. ಓರ್ವ ದಲಿತ ಮಹಿಳೆಯನ್ನು ಅತ್ಯುನ್ನತ ರಾಷ್ಟçಪತಿಯನ್ನಾಗಿ ಮಾಡಿರುವದೇ ಇದಕ್ಕೊಂದು ಉದಾಹರಣೆಯಾಗಿದೆ ಎಂದು ಹೇಳಿದರು.

ದಲಿತರು ಎಂದಿಗೂ ಬಿಜೆಪಿ ಪರವಾಗಿರುತ್ತಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸುವದರಲ್ಲಿ ಯಾವದೇ ಸಂಶಯವಿಲ್ಲವೆAದು ಹೇಳಿದರು. ಜಿಲ್ಲೆಯಲ್ಲಿ ಪರಿಶಿಷ್ಟ ಮೋರ್ಚಾ ಬಲಿಷ್ಠವಾಗಿದೆ. ನಾವು ಭಾರತೀಯ ಪ್ರಜೆಗಳು, ಕಾಂಗ್ರೆಸಿಗರ ಹೇಳಿಕೆಗೆ ತಲೆಕೆಡಿಸಿಕೊಳ್ಳುವದಿಲ್ಲ. ಇದೀಗ ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಕಾರ್ಯಕ್ರಮ, ಪ್ರತಿಭಟನೆ ನಡೆಸುತ್ತಿರುವವರು ಒಂದೊಮ್ಮೆ ಅಂಬೇಡ್ಕರ್ ಅವರನ್ನು ಸೋಲಿಸಿದ್ದೇ ಇದೇ ಕಾಂಗ್ರೆಸ್ಸಿಗರು ಎಂಬದನ್ನು ನೆನಪು ಮಾಡಿಕೊಂಡರೆ ಒಳಿತು. ಆದರೆ, ಮೋದಿ ಅವರು ಜಾರಿಗೊಳಿಸಿರುವ ಪಂಚತೀರ್ಥ ಯೋಜನೆ ಅಂಬೇಡ್ಕರ್ ಅವರ ಚಿಂತನೆಗಳಿಗೆ ಸಂಬAಧಿಸಿದ್ದಾಗಿದೆ. ಬಿಜೆಪಿ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿದರೆ ಕ್ರಮಕ್ಕೆ ಮುಂದಾಗುವುದಾಗಿ ಹೇಳಿದರು.

ಗೋಷ್ಠಿಯಲ್ಲಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಚೇತನ್ ಶಿವಪ್ಪ, ಸೋಮವಾರಪೇಟೆ ಗ್ರಾಮಾಂತರ ಅಧ್ಯಕ್ಷ ಜಗತ್, ಮಡಿಕೇರಿ ಅಧ್ಯಕ್ಷ ಚೆನ್ನಿಗಯ್ಯ, ಮಡಿಕೇರಿ ನಗರಾಧ್ಯಕ್ಷ ಮುಕುಂದ ಇದ್ದರು.