ನಾಪೋಕ್ಲು, ಏ. ೧೫: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯು ತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಕುಂಡ್ಯೋಳAಡ ಕಪ್‌ನ ೧೭ನೇ ದಿನದ ಪಂದ್ಯಾಟದಲ್ಲಿ ಚೆಕ್ಕೆರ ಮತ್ತು ತೀತಮಾಡ ತಂಡಗಳು ಭರ್ಜರಿ ಜಯ ಗಳಿಸಿದ್ದು ಒಟ್ಟು ೧೨ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಮೈದಾನ ೧ರಲ್ಲಿ ಆತಿಥೇಯ ಕುಂಡ್ಯೋಳAಡ ಮತ್ತು ತೀತಮಾಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ತೀತಮಾಡ ತಂಡವು ಕುಂಡ್ಯೋಳAಡ ತಂಡವನ್ನು ೫-೨ ಗೋಲಿನ ಅಂತರದಿAದ ಪರಾಭವ ಗೊಳಿಸಿತು. ತೀತಮಾಡ ತಂಡದ ಪೃಥ್ವಿ, ದೇವಯ್ಯ, ಮದನ್ ಸುಜಿತ್, ಪೊನ್ನಣ್ಣ ತಲಾ ಒಂದೊAದು ಗೋಲು ದಾಖಲಿಸಿದರು. ಕುಂಡ್ಯೋ ಳಂಡ ತಂಡದ ಪರ ಕಾರ್ಯಪ್ಪ, ಪೊನ್ನಣ್ಣ ತಲಾ ಒಂದು ಗೋಲು ದಾಖಲಿಸಿದರು. ಚೆಕ್ಕೆರ ಮತ್ತು ಪೊಂಜAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಕ್ಕೆರ ತಂಡವು ಪೊಂಜAಡ ತಂಡವನ್ನು ೬-೦ ಗೋಲುಗಳ ಅಂತರದಿAದ ಸೋಲಿಸಿತು. ಚೆಕ್ಕೆರ ತಂಡದ ವರುಣ್, ಉತ್ತಯ್ಯ ತಲಾ ಎರಡು ಗೋಲು ಗಳಿಸಿದರೆ, ಆದರ್ಶ್, ಆಕಾಶ್ ತಲಾ ಒಂದು ಗೋಲು ದಾಖಲಿಸಿದರು.

ಕಂಬೀರAಡ ಮತ್ತು ಮಲ್ಲಜ್ಜಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಂಬಿರAಡ ತಂಡವು ಮಲ್ಲಜ್ಜಿರ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿತು. ಕಂಬಿ ರಂಡ ತಂಡದ ಪರ ಉಮೇಶ್, ರಮೇಶ್, ರಾಯ್ ತಲಾ ಒಂದೊAದು ಗೋಲು ದಾಖಲಿಸಿದರು. ಕೊಂಗೇ ಟಿರ ಮತ್ತು ಅಲ್ಲಾರಂಡ ತಂಡಗಳ ನಡುವಿನ ಸೆಣಸಾಟದಲ್ಲಿ ಕೊಂಗೇಟಿರ ತಂಡವು ಅಲ್ಲಾರಂಡ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿತು. ಕೊಂಗೇಟಿರ ತಂಡದ ಪರ ಪೆಮ್ಮಯ್ಯ ಎರಡು, ಅವಿನಾಶ್ ಉತ್ತಯ್ಯ, ಸಾವನ್ ತಲಾ ಒಂದು ಗೋಲು ದಾಖಲಿಸಿದರು. ಚೇಂದAಡ ಮತ್ತು ಕಂಗಾAಡ ತಂಡಗಳ ನಡುವಿನ ಪಂದ್ಯದಲ್ಲಿ ಚೆಂದAಡ ತಂಡವು ೩-೦ ಗೋಲಿನಿಂದ ಕಂಗಾAಡ ತಂಡವನ್ನು ಪರಾಭವಗೊಳಿಸಿತು.

ಚೇಂದAಡ ತಂಡದ ಪರ ತಿಮ್ಮಯ್ಯ, ಶಮ್ಮಿ, ತರುಣ್ ತಲಾ ಒಂದು ಗೋಲು ದಾಖಲಿಸಿದರು. ಕೇಲೇಟಿರ ಮತ್ತು ಪಾಲಂದಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೇಲೇಟಿರ ತಂಡವು ೩-೦ ಗೋಲುಗಳ ಅಂತರದಿAದ ಪಾಲಂದಿರ ತಂಡವನ್ನು ಪರಾಭವಗೊಳಿಸಿತು. ಕೇಲೇಟಿರ ತಂಡದ ಪರ ಕವನ್, ಸನತ್ ಸುಬ್ಬಯ್ಯ, ಮುತ್ತಣ್ಣ ತಲಾ ಒಂದು ಗೋಲು ದಾಖಲಿಸಿದರು.

ಮೈದಾನ ೨ರಲ್ಲಿ ನಡೆದ ಮಂಡೇಟಿರ ಮತ್ತು ಮೇವಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಮಂಡೇಟಿರ ತಂಡವು ಮೇವಡ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿ ಸಿತು. ಮಂಡೇಟಿರ ತಂಡದ ಪರ ತಂಡದ ವಿನಯ್ ತಿಲಕ್ ಅಯ್ಯಪ್ಪ ತಲಾ ಒಂದು ಗೋಲು ದಾಖಲಿಸಿದರು.

ಚಂದುರ ಮತ್ತು ಕಾಳಿಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚಂದೂರ ತಂಡವು ಕಾಳಿಮಾಡ ತಂಡವನ್ನು ಟೈಬ್ರೇಕರ್‌ನಲ್ಲಿ ೬-೫ ಗೋಲುಗಳ ಅಂತರದಿAದ ಸೋಲಿಸಿತು. ಬೊಟ್ಟಂಗಡ ಮತ್ತು ಪುದಿಯೊಕ್ಕಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪುದಿಯೊಕ್ಕಡ ತಂಡವು ಬೊಟ್ಟಂಗಡ ತಂಡವನ್ನು ೩-೦ ಗೋಲುಗಳಿಂದ ಮಣಿಸಿತು. ಪುದಿಯೊಕ್ಕಡ ತಂಡದ ಪರ ಮಿಥನ್ ಪೊನ್ನಪ್ಪ ಎರಡು, ವಿಪನ್ ಸೋಮಯ್ಯ ಒಂದು ಗೋಲು ದಾಖಲಿಸಿದರು. ಅಮ್ಮಣಿಚಂಡ ಮತ್ತು ಚೋಕಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಮ್ಮಣಿಚಂಡ ತಂಡವು ಚೋಕಿರ ತಂಡವನ್ನು ೩-೧ ಗೋಲುಗಳ ಅಂತರದಿAದ ಪರಾಭವಗೊಳಿಸಿತು.

ಅಮ್ಮಣಿಚಂಡ ತಂಡದ ಪರ ಪ್ರವೀಣ್ ಚಂಗಪ್ಪ, ಯಶ್ವಂತ್, ವಿಘ್ನೇಶ್ ಬೋಪಣ್ಣ ತಲಾ ಒಂದೊAದು ಗೋಲು ದಾಖಲಿಸಿದರು. ಕಾಂಡೇರ ಮತ್ತು ಕೋಡಿಮಣಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೋಡಿಮಣಿ ಯಂಡ ತಂಡವು ಕಾಂಡೆರ ತಂಡವನ್ನು ಟೈಬ್ರೇಕರ್‌ನಲ್ಲಿ ೫-೪ ಗೋಲುಗಳಿಂದ ಸೋಲಿಸಿತು. ಅಳಮೇಂಗಡ ಮತ್ತು ಮುಕ್ಕಾಟಿರ(ಬೋಂದ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಅಳಮೇಂಗಡ ತಂಡವನ್ನು ಟೈಬ್ರೇಕರ್ ನಲ್ಲಿ ೫-೪ ಗೋಲುಗಳ ಅಂತರದಲ್ಲಿ ಸೋಲಿಸಿತು. -ಪಿ.ವಿ. ಪ್ರಭಾಕರ್