ವೀರಾಜಪೇಟೆ, ಏ. ೧೪: ವಚನ ಸಾಹಿತ್ಯವನ್ನು ಯುವ ಪೀಳಿಗೆಗೆ ಅಬ್ಯಾಸ ಮಾಡಿ ಮುಂದಿನ ಜನಾಂಗಕ್ಕೆ ಉಳಿಸಿ ಬೆಳೆಸುವಂತಾಗಬೇಕು ಎಂದು ಹುಣಸೂರು ಸಮುದಾಯ ದಂತ ವೈದ್ಯರಾದ ಡಾ, ಎಂ.ಶಿವಕುಮಾರ್ ಹೇಳಿದರು.
ವೀರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇAದ್ರ ಭವನದಲ್ಲಿ ನಡೆದ ''ಹೊಂಬೆಳಕು ಕಿರಣ ೨೧೮ ಮಾಸಿಕ ತತ್ವ ಚಿಂತನಾಗೋಷ್ಠಿ'' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ 'ಸಮಾಜದ ಸ್ವಾಸ್ಥö್ಯಕ್ಕೆ ಬಸವಾದಿ ಪ್ರಮತರ ವಚನಗಳೇ ದಿವ್ಯೌಷಧಿ' ಎಂಬ ವಿಷಯದ ಉಪನ್ಯಾಸ ನೀಡಿದ ಅವರು, ಎಲ್ಲಾ ಜೀವಿಗಳಿಗಿಂತ ಮಾನವ ಹೆಚ್ಚು ಬುದ್ದಿ ಜೀವಿಯಾಗಿದ್ದು ಹೃದಯದಲ್ಲಿರುವ ಭಾವನೆಗಳನ್ನು ಹೊರಪಡಿಸಲು ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಕಿಗ್ಗಾಲು ಎಸ್.ಗಿರೀಶ್ ಅವರು ಮಾತನಾಡಿ ನಾವುಗಳು ಧರ್ಮವನ್ನು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ, ಸಾಹಿತ್ಯವನ್ನು ಗೌರವಿಸುವ ಮೂಲಕ ನಮ್ಮ ವ್ಯಕ್ತಿತ್ವದಲ್ಲಿ ನಡೆ ನುಡಿಗಳಲ್ಲಿ ಉತ್ತಮ ಮಾತುಗಳಿರಬೇಕು ಎಂದರು. ಅರಮೇರಿ ಕಳಂಚೇರಿ ಮಠದ ಶ್ರೀಪೀಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಮಾತನಾಡಿ ಮನಸ್ಸು ಏಕಾಗ್ರತೆಯಿಂದಿರಬೇಕು. ಪ್ರಾಮಾಣಿಕತೆ ಮುಖ್ಯ. ವಚನ ಸಾಹಿತ್ಯದಿಂದ ಕ್ರಾಂತಿಯನ್ನು ಸೃಷ್ಠಿಮಾಡಿದಂತ ಮಹಾನುಭಾವ ಬಸವಣ್ಣನವರು ಎಂದರು.