ಮಡಿಕೇರಿ, ಏ. ೧೪: ಕೊಡಗು ವಿದ್ಯಾಲಯ ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭಕ್ಕೆ ಸಂಭ್ರಮದಿAದ ಚಾಲನೆ ನೀಡ ಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡಗು ವಿದ್ಯಾಲಯದ ಕ್ರೀಡಾ ಅಧ್ಯಕ್ಷರಾದ ಕೋಡಿಮಣಿಯಂಡ ರಘು ಮಾದಪ್ಪನವರನ್ನು ಶಾಲಾ ಮಕ್ಕಳು ಬ್ಯಾಂಡ್ ತಂಡದಿAದ ಬರಮಾಡಿಕೊಳ್ಳಲಾಯಿತು. ಮುಖ್ಯ ಅತಿಥಿಗಳು ಗಾಳಿಯಲ್ಲಿ ಬಲೂನ್ ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ನಂತರ ವೇದಿಕೆಯಲ್ಲಿ ನುರಿತ ತರಬೇತುದಾರರಿಂದ ಕ್ಯಾಲಿಗ್ರಾಫಿ ಹಾಗೂ ಚಿತ್ರಕಲಾ ಪ್ರದರ್ಶನ ನಡೆಯಿತು. ಇದರಲ್ಲಿ ಮುಖ್ಯ ಅತಿಥಿಗಳು ಹಾಗೂ ಶಾಲೆಯ ಪ್ರಾಂಶುಪಾಲರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಾರ್ಯನಿರ್ವಾಹಣಾಧಿಕಾರಿ ಗಳು ಪಾಲ್ಗೊಂಡು ಅಧಿಕೃತವಾಗಿ ಶಿಬಿರವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳು ಕ್ರೀಡಾ ಸೌಲಭ್ಯದ ಬಗ್ಗೆ ವ್ಯಾಖ್ಯಾನ ನೀಡಿ ಅದರ ಕಲಿಕೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ನಂತರ ಶಾಲೆಯ ಕ್ರೀಡಾ ಮೈದಾನದಲ್ಲಿ ಬೇಸಿಗೆ ಕ್ರೀಡಾ ಶಿಬಿರಕ್ಕೆ ಶಾಲಾ ಆಡಳಿತ ಮಂಡಳಿಯ ಸದ್ಯಸ್ಯರಾದ ನಿಯತ ದೇವಯ್ಯ ಚಾಲನೆ ನೀಡಿದರು.ಈ ಶಿಬಿರದಲ್ಲಿ ೨೫೦ಕ್ಕೂ ಹೆಚ್ಚಿನ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಶಿಬಿರದಲ್ಲಿ ಚಿತ್ರಕಲೆ (ಕ್ಲೇ ಮೋಡ್ಲಿಂಗ್, ಟ್ರಡಿಷನಲ್ ವಾಲ್ ಪೇಂಟಿAಗ್ ಲ್ಯಾಂಡ್ ಸ್ಕೇಪ್, ಕೈಟ್ ಮೇಕಿಂಗ್, ಮಾಸ್ಕ್ ಮೇಕಿಂಗ್,ಪಾಟ್ ಪೇಂಟಿAಗ್, ಬೆಸ್ಟ್ ಔಟ್ ಒಫ್ ವೇಸ್ಟ್, ಸ್ಟಿಲ್ ಲೈಫ್ ವರ್ಕ್ಸ್, ಕಾವಿ ಆರ್ಟ್) ನೃತ್ಯ: ಭರತನಾಟ್ಯ, ಮೋಹಿನಿಆಟಮ್, ಫ್ರೀ ಸ್ಟೈಲ್, ಕ್ಯಾಲಿಗ್ರಾಫಿ, ಸಂಗೀತ, ವಿವಿಧ ರೀತಿಯ ಕ್ರೀಡೆಗಳಾದ ಹಾಕಿ, ಕ್ರಿಕೆಟ್, ಹ್ಯಾಂಡ್ ಬಾಲ್, ಚೆಸ್, ಬಾಸ್ಕೆಟ್ ಬಾಲ್, ಫುಟ್ಬಾಲ್, ಟೇಬಲ್ ಟೆನಿಸ್ ಮತ್ತು ಅತ್ಲೇಟಿಕ್ಸ್ ನಡೆಯಲಿವೆ.